Advertisement

ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳ ಪತ್ತೆ: ಅಸಮಾಧಾನ

11:34 PM Mar 10, 2020 | Team Udayavani |

ವಿಧಾನಸಭೆ: ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಅಕ್ರಮವಾಗಿ ನಿಷೇಧಿತ ವಸ್ತುಗಳ ಬಳಕೆಯಾಗಿರುವ ಬಗ್ಗೆ ಅಥವಾ ಬಳಕೆ ಯಾಗದಿರುವ ಬಗ್ಗೆ ಕೇಂದ್ರ ಕಚೇರಿಗೆ ದೃಢೀಕರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ. ಸದನದಲ್ಲಿ ಮಂಗಳವಾರ ಸಮಿತಿಯ ಅಧ್ಯಕ್ಷ ಎಚ್‌.ಕೆ.ಪಾಟೀಲ್‌ ಅವರು, 2019-20ನೇ ಸಾಲಿನ ವರದಿ ಮಂಡಿಸಿದರು.

Advertisement

ಸಮಿತಿಯ ಶಿಫಾರಸುಗಳು: ನಿಷೇಧಿತ ವಸ್ತುಗಳಾದ ಮೊಬೈಲ್‌ ಫೋನ್‌, ಸಿಮ್‌ ಕಾರ್ಡ್‌, ಮಾದಕ ವಸ್ತುಗಳು ಕಾರಾಗೃಹದಲ್ಲಿ ಅಪಾರ ಪ್ರಮಾಣದಲ್ಲಿ ಪತ್ತೆಯಾಗಿರುವುದಕ್ಕೆ ಸಮಿತಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ. ನಿಷೇಧಿತ ವಸ್ತುಗಳು ಕಾರಾಗೃಹಗಳನ್ನು ಪ್ರವೇಶಿಸದಂತೆ ತಡೆಯಲು ನಿಗದಿಪಡಿಸಿರುವ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದೆ.

ಕಾರಾಗೃಹ ಪ್ರವೇಶಿಸುವ ವ್ಯಕ್ತಿಗಳ ದೈಹಿಕ ತಪಾಸಣೆ ಹಾಗೂ ವಾಹನಗಳ ತಪಾಸಣೆಗೆ ಸಂಬಂಧಿಸಿದಂತೆ ಹಾಲಿ ಇರುವ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ವಿವರವಾದ ಮಾರ್ಗ ದರ್ಶಿ ಸೂತ್ರ ಜಾರಿಗೊಳಿಸುವಂತೆ ಸಮಿತಿ ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ -9, ಮೈಸೂರಿನಲ್ಲಿ-4, ಕಲಬುರಗಿಯಲ್ಲಿ -10 ಮೊಬೈಲ್‌ ಜಾಮರ್‌ಗಳು ಕಾರ್ಯ ನಿರ್ವಹಿಸದಿರುವುದು ಸಮಿತಿಯ ತಪಾಸಣೆ ವೇಳೆ ಪತ್ತೆಯಾಗಿದೆ. ಮೊಬೈಲ್‌ ಜಾಮರ್‌ ಉಪಕರಣಗಳ ವಾರ್ಷಿಕ ನಿರ್ವಹಣೆಯ ತಾಂತ್ರಿಕ ನೈಪುಣ್ಯತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕಾರಾಗೃಹಗಳಿಂದ ಪರಾರಿಯಾಗಿದ್ದ 31 ಬಂಧಿಗಳನ್ನು ಮರು ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next