ಚಿತ್ತಾಪುರ: ಮನೆಯೊಂದರಲ್ಲಿ ಕಲಬೆರಕೆ ಸೇಂದಿ ಮಾರಲಾಗುತ್ತಿದೆ ಎನ್ನುವ ಮಾಹಿತಿ ಆಧರಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪಟ್ಟಣದ ಇಂದಿರಾ ನಗರ, ಶಹಾಬಾದ ಸ್ಟೇಷನ್ ತಾಂಡಾದ ಚುನ್ನಾಭಟ್ಟಿ ಏರಿಯಾದಲ್ಲಿ ಅಬಕಾರಿ ಉಪ ಅಧೀಕ್ಷಕ ಜಾಡ್ಸನ್ ಜೀವಕುಮಾರ, ಅಬಕಾರಿ ನಿರೀಕ್ಷರಾದ ದೊಡ್ಡಪ್ಪ ಹೆಬಳೆ, ಕೇದರನಾಥ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಪಟ್ಟಣದ ಇಂದಿರಾ ನಗರದ ಮನೆಯೊಂದರಲ್ಲಿ ಸಂಜು ಗುತ್ತೇದಾರ ಹಾಗೂ ಶಹಾಬಾದ ಸ್ಟೇಷನ್ ತಾಂಡಾದ ಚುನ್ನಾಭಟ್ಟಿ ಏರಿಯಾದ ಮನೆಯೊಂದರಲ್ಲಿ ಶಿವಾನಂದ ಗುತ್ತೇದಾರ ಎನ್ನುವರು ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದರು.
ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಶಹಾಬಾದನ ಶಾಂತಾಬಾಯಿ ಶಿವಾನಂದ ಗುತ್ತೇದಾರ, ಲಾಡ್ಲಾಪುರದ ಶಂಕ್ರಮ್ಮ ಸಾಬಯ್ಯ ಗುತ್ತೇದಾರ, ನಾಲವಾರದ ಕುಂಬಾರಹಳ್ಳಿ ಮೀನಾಕ್ಷಿ ಸುರೇಶ ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳಾದ ಸಂಜು ಗುತ್ತೇದಾರ ಅವರಿಂದ 25 ಲೀಟರ್, ಶಿವಾನಂದ ಗುತ್ತೇದಾರ ಅವರಿಂದ 50 ಲೀಟರ್, ಪರಾರಿಯಾದ ಶಹಾಬಾದ್‌ನ ಶಾಂತಾಬಾಯಿ ಶಿವಾನಂದ ಗುತ್ತೇದಾರ, ಶಂಕ್ರಮ್ಮ ಸಾಬಯ್ಯ ಗುತ್ತೇದಾರ ಅವರಿಂದ 40 ಲೀಟರ್, ಮೀನಾಕ್ಷಿ ಸುರೇಶ ಅವರಿಂದ 10 ಲೀಟರ್ ಕಲಬೆರಕೆ ಸೇಂದಿ ಜಪ್ತಿ ಮಾಡಿಕೊಂಡಿದ್ದಾರೆ.
ದಾಳಿಯಲ್ಲಿ ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಶಬ್ಬೀರ ಮೀಯ್ನಾ, ಧನರಾಜ, ಮಹ್ಮದ ಇಮಾಮ್, ಕಲ್ಯಾಣಿ, ಶಿವಾನಂದ, ನಾಗಪ್ಪ, ಸಿದ್ದಣ್ಣಗೌಡ, ಶರಣು ಇದ್ದರು.