ವಿಜಯಪುರ ; ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ನಕಲಿ ಬಯೋಡಿಸೇಲ್ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-52 ರಲ್ಲಿನ ಚಡಚಣ ತಾಲೂಕಿನ ಝಳಕಿ ಗ್ರಾಮದ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯ ಶೆಡ್ ಒಂದರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ನಕಲಿ ಬಯೋ ಡಿಸೈಲ್ ಮಾರಾಟದ ಕುರಿತು ಅಧಿಕಾರಿಗಳಿಗೆ ಖಚಿತ ಮಾಹಿತಿ ನೀಡಿದ್ದಾರೆ. ಕೂಡಲೇ ದಾಳಿ ನಡೆಸಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಧಿಕಾರಿಗಳ ತಂಡ, ನಕಲಿ ಡಿಸೇಲ್, ಅದಕ್ಕೆ ಬಳಸುತ್ತಿದ್ದ ವಸ್ತುಗಳು, ಸಣ್ಣ ಪಂಪ್, ಪೈಪ್‍ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಎಸ್ ವೈ ಮಾರಿಹಾಳ, ಅಧಿಕಾರಿ ಅಮರೇಶ ತಾಂಡೂರ ನೇತೃತ್ವದ ತಂಡ ಅಕ್ರಮ ಅಡ್ಡೆ ಮೇಲೆ ದಾಳಿ ನಡೆಸಿದೆ, ಈ ವೇಳೆ ದಾಳಿ ನಡೆಯುವ ಸುಳಿವು ಅರಿತ ಶೆಡ್‍ನಲ್ಲಿದ್ದ ನಕಲಿ ಬಯೋ ಡಿಸೇಲ್ ಮಾರಾಟ ಮಾಡುತ್ತಿದ್ದ ತಂಡ ಸ್ಥಳದಿಂದ ಪರಾರಿಯಾಗಿದೆ.
ಇದನ್ನೂ ಓದಿ : ಮಾಧ್ಯಮಗಳು ನಿಷಕ್ಷಪಾತವಾಗಿರಲಿ ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ಸಲಹೆ
ಆಹಾರ ಅಧಿಕಾರಿಗಳೊಂದಿಗೆ ಐಓಸಿ, ಹೆಚ್ ಪಿ ಸಿ, ಬಿಪಿಎಲ್ ಆಧಿಕಾರಿಗಳು ಸಾಥ್ ನೀಡಿದ್ದರು. ಈ ಮಧ್ಯೆ ವಶಕ್ಕೆ ಪಡೆದಿರುವ ನಕಲಿ ಬಯೋ ಡಿಸೇಲ್ ಹಾಗೂ ವಸ್ತುಗಳು ವಶಕ್ಕೆ ಪಡೆದಿರುವ ಅಧಿಕಾರಿಗಳು ಘಟನೆ ಕುರಿತು ತಪಾಸಣೆ ಮುಂದುವರೆಸಿದ್ದಾರೆ.