Advertisement
ಈ ಚಿತ್ರಗಳ ಶೋಧದ ಮೊದಲು ಕರ್ನಾಟಕದ ಕರಾವಳಿಯಲ್ಲಿ ಡಾ| ಕೆ.ಬಿ. ಶಿವತಾರಕ್, ಪಿ. ರಾಜೇಂದ್ರನ್ ಹಾಗೂ ಎಲ್.ಎಸ್. ರಾವ್ ಅವರು ಸೂಕ್ಷ್ಮಶಿಲಾಯುಗದ ನೆಲೆಗಳನ್ನು, ಉಪ್ಪಿನಂಗಡಿ, ಮಾಣಿ, ಕಾರ್ಕಳ, ಮಸಿಕೆರೆ ಮುಂತಾದ ಸ್ಥಳಗಳಲ್ಲಿ ಶೋಧಿಸಿದ್ದರು. ಆದರೆ ಇದೇ ಪ್ರಥಮ ಬಾರಿ ಆ ಸಂಸ್ಕೃತಿಗೆ ಸಂಬಂಧಿಸಿದ ಆದಿಮ ಚಿತ್ರಗಳು ಕಪ್ಪು ಪಾದೆ ಕಲ್ಲಿನ ಮೇಲೆ ಕುಟ್ಟಿ-ಉಜ್ಜಿ ಮಾಡಿರುವುದು ಕಂಡು ಬಂದಿದೆ. ಸರಿ ಸುಮಾರು, ಕ್ರಿ.ಪೂ. 10.000ದಿಂದ 3000 ವರ್ಷಗಳ ಕಾಲಾವಧಿಯನ್ನು ಸೂಕ್ಷ್ಮಶಿಲಾಯುಗ ಕಾಲವೆಂದು ಡಾ| ಅ. ಸುಂದರ ಅವರು ತರ್ಕಿಸಿದ್ದು, ಸರಿಸುಮಾರು ಅದೇ ಕಾಲದ ಚಿತ್ರಗಳೆಂದು ಅವಲಕ್ಕಿ ಪಾರೆಯ ಚಿತ್ರಗಳ ಕಾಲವನ್ನು ತಾತ್ಕಾಲಿಕವಾಗಿ ಭಾವಿಸಲಾಗಿದೆ .
Advertisement
ಶಿಲಾಯುಗ ಕಾಲದ ಆದಿಮ ಚಿತ್ರಗಳು ಪತ್ತೆ
12:30 AM Mar 18, 2019 | |
Advertisement
Udayavani is now on Telegram. Click here to join our channel and stay updated with the latest news.