Advertisement

119 ಕಾರುಗಳ ಗುರುತು ಪತ್ತೆ

06:28 AM Feb 26, 2019 | Team Udayavani |

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆ.23ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಆಹುತಿಯಾಗಿರುವ 277 ಕಾರುಗಳನ್ನು ಸಾರಿಗೆ ಇಲಾಖೆ ಪರಿಶೀಲಿಸಿದ್ದು, 119 ವಾರಸುದಾರರು ತಮ್ಮ ವಾಹನಗಳನ್ನು ಗುರುತು ಹಿಡಿದಿದ್ದಾರೆ.

Advertisement

ಬೆಂಕಿ ಅನಾಹುತದ ನಿರ್ವಹಣೆಗಾಗಿ ಸಾರಿಗೆ ಇಲಾಖೆಯು “ವಿಪತ್ತು ನಿರ್ವಹಣೆ’ ತಂಡ ರೂಪಿಸಿದ್ದು, ಒಂದೇ ದಿನದಲ್ಲಿ ಎಲ್ಲ 277 ಕಾರುಗಳನ್ನು ಪರಿಶೀಲಿಸಲಾಗಿದ್ದು, ಇದರಲ್ಲಿ 251 ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. 26 ಕಾರುಗಳು ಮಾತ್ರ ಭಾಗಶಃ ಸುಟ್ಟಿವೆ.

ಈ ಪೈಕಿ 119 ವಾಹನಗಳನ್ನು ಮಾಲೀಕರು ಗುರುತಿಸಿದ್ದಾರೆ. ಮಾಲಿಕರು ವಿಮಾ ಮೊತ್ತ ಪಡೆಯಲು ಪರಿಶೀಲನಾ ವರದಿಗಳನ್ನು ಯಲಹಂಕ ಪೊಲೀಸ್‌ ಠಾಣೆಯಿಂದ ಪಡೆಯಬಹುದು. ಎಲ್ಲ ಕಾರುಗಳ ಪರಿಶೀಲನಾ ವರದಿಯನ್ನು ಸಾರಿಗೆ ಇಲಾಖೆ ಸಿಬ್ಬಂದಿ ಯಲಹಂಕ ಪೊಲೀಸ್‌ ಠಾಣೆಗೆ ವರದಿ ಸಲ್ಲಿಸಲಿದೆ.

ವಾಹನದ ನೋಂದಣಿ ಪ್ರಮಾಣಪತ್ರದ ನಕಲು, ಚಾಲನಾ ಅನುಜ್ಞಾ ಪತ್ರದ ನಕಲು ಪಡೆಯಲು ಹಾಗೂ ಸಂಪೂರ್ಣವಾಗಿ ಭಸ್ಮವಾಗಿರುವ ವಾಹನಗಳ ನೋಂದಣಿ ಪತ್ರ ರದ್ದುಗೊಳಿಸುವ ಸಂಬಂಧ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಂಪರ್ಕಿಸಬಹುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. ವಾಹನ ಮಾಲಿಕರು ಮಾಹಿತಿಗೆ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಬಹುದು. 

ಅಪರ ಸಾರಿಗೆ ಆಯುಕ್ತರು (ಆಡಳಿತ) ಮೊ- 94498 63212, ಅಪರ ಸಾರಿಗೆ ಆಯುಕ್ತರು (ಪ್ರ) (ದ)- 94498 63214, ಜಂಟಿ ಆಯುಕ್ತರು (ಬೆಂಗಳೂರು ನಗರ)- 94498 63217, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಯಲಹಂಕ)- 94498 64050, ಸಾರ್ವಜನಿಕ ಸಂಪರ್ಕಾಧಿಕಾರಿ- 94498 64087

Advertisement

ಕಾರ್ಯಾಚರಣೆ ವಿವರ
-277 ಒಟ್ಟಾರೆ ಅಗ್ನಿಗೆ ಆಹುತಿಯಾದ ಕಾರುಗಳು
-251 ಸಂಪೂರ್ಣವಾಗಿ ಸುಟ್ಟು ಕರಕಲಾದ ಕಾರುಗಳು
-26 ಭಾಗಶಃ ಸುಟ್ಟಿರುವ ಕಾರುಗಳು
-119 ಮಾಲೀಕರು ಗುರುತಿಸಿದ ವಾಹನಗಳ ಸಂಖ್ಯೆ

Advertisement

Udayavani is now on Telegram. Click here to join our channel and stay updated with the latest news.

Next