Advertisement

ಒಂದೇ ದಿನ 13 ಸೋಂಕಿತರು ಪತ್ತೆ

07:03 AM May 16, 2020 | Lakshmi GovindaRaj |

ಮಂಡ್ಯ: ಮುಂಬೈನಿಂದ ಆಗಮಿಸಿದ್ದ 13 ಜನರಲ್ಲಿ ಕೋವಿಡ್‌ 19 ಸೋಂಕು ಕಾಣಿಸಿಕೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಸೋಂಕು ಪ್ರಕರಣಗಳು ವರದಿಯಾಗಿವೆ. ಇದೀಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ  49ಕ್ಕೇರಿಕೆಯಾಗಿದೆ.

Advertisement

ಈ 13 ಮಂದಿಯೂ ಮುಂಬೈನಿಂದ ವಿವಿಧ ದಿನಾಂಕಗಳಂ ದು ಕೆ.ಆರ್‌. ಪೇಟೆಗೆ ಆಗಮಿಸಿದ್ದರು. ಇವರ ಗಂಟಲ ದ್ರವ ವನ್ನು ಪರೀಕ್ಷೆಗೊಳಪಡಿಸಿದ ಸಮಯದಲ್ಲಿ ಸೋಂಕು ಇರುವು ದು ದೃಢಪಟ್ಟಿದೆ.  ಆರು ಮತ್ತು  ಒಂಭತ್ತು ವರ್ಷದ ಬಾಲಕಿಯರು, ಇಬ್ಬರು ಮಹಿಳೆಯರು ಮತ್ತು ಒರ್ವ ಬಾಲಕ, ಎಂಟು ಜನ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಿಗೆಲ್ಲ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್‌)ಗೆ ದಾಖಲಿಸಿ ಐಶೋಲೇಷನ್‌  ರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

30 ಪ್ರಕರಣ ಸಕ್ರಿಯ: ಮುಂಬೈನಿಂದ ಕೆ.ಆರ್‌.ಪೇಟೆಗೆ ಆಗಮಿಸಿ ರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅಂತೆಯೇ, ಅವರ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾ ಗಿತ್ತು. ಇದರಲ್ಲಿ 13 ಜನರ ವರದಿ ಪಾಸಿಟಿವ್‌  ಬಂದಿದೆ. ಈವರೆಗೆ ಜಿಲ್ಲೆಯಲ್ಲಿ 49 ಸೋಂಕಿತರ ಪ್ರಕರಣಗಳು ಕಂಡುಬಂ ದಿದ್ದು, ಈ ಪೈಕಿ 19 ಜನ ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 30 ಪ್ರಕರಣಗಳು ಸಕ್ರಿಯವಾಗಿವೆ.

ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು:  ಪಿ1050, ಪಿ1051, ಪಿ1052, ಪಿ1053 ಒಂದೇ ಕುಟುಂಬದವ ರಾಗಿದ್ದು, ಇವರು ಮುಂಬೈನಲ್ಲಿ ಕ್ಯಾಂಟೀನ್‌ ನಡೆಸಿ ಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೇ.12 ರಂದು ಖಾಸಗಿ ಬಸ್‌ನಲ್ಲಿ 16 ಜನರೊಂದಿಗೆ ಚನ್ನರಾಯ ಪಟ್ಟಣ, ಕಿಕ್ಕೇರಿ  ಮೂಲಕ ಕೆ.ಆರ್‌.ಪೇಟೆಗೆ ಆಗಮಿಸಿದ್ದಾರೆ. ಇವರನ್ನು ಕ್ವಾರಂಟೈನ್‌ಗೊಳಪಡಿಸಿ ಗಂಟಲಿನ ದ್ರವ ಪರೀಕ್ಷೆ ನಡೆಸಿದಾಗ ಪಾಸಿಟಿವ್‌ ಪತ್ತೆಯಾಗಿದೆ. ಇವರಿಗೆ ಪ್ರಾಥಮಿಕ ಸಂಪರ್ಕವಾಗಿ ಮೂರು  ಜನರಿದ್ದಾರೆ.

ಐವರು ಸಂಪರ್ಕಿತರು: ಅಂತೆಯೇ, ಪಿ1044 ಮುಂಬೈನಲ್ಲಿ ಆಟೋ ಸ್ಪೇರ್‌ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಪಿ1045 ಮುಂಬೈನಲ್ಲಿ ಹೋಟೆಲ್‌ ಕೆಲಸ ಮಾಡಿಕೊಂಡಿದ್ದು, ಸ್ವಂತ ಕಾರಿನಲ್ಲಿ  ಕೆ.ಆರ್‌.ಪೇಟೆ ಆಗಮಿಸಿ ದಾಗ ಆನಗೊಳ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗೊಳಪಡಿಸಿ ಬಳಿಕ ಮಾರ್ಗೋನಹಳ್ಳಿಯಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಇವರಿಗೆ ಪ್ರಾಥಮಿಕ ಸಂಪರ್ಕದಲ್ಲಿ 5 ಜನರನ್ನು ಗುರುತಿ ಸಲಾಗಿದೆ. ಪಿ1046 ಮೇ  11ರಂದು ಕೆ.ಆರ್‌.ಪೇಟೆಗೆ ಆಗಮಿ ಸಿದ್ದು, ಇವರಿಗೆ ಪ್ರಾಥಮಿಕ ಸಂಪರ್ಕವಾಗಿ ಐವರನ್ನು ಗುರುತಿಸಲಾಗಿದೆ.

Advertisement

ಪಿ1047 ಹೋಟೆಲ್‌ ಉದ್ಯೋಗ ಮಾಡಿ ಕೊಂಡಿದ್ದು, 11ರಂದು ಸ್ವಂತ ಕಾರಿನಲ್ಲಿ ಆಗಮಿಸಿದ್ದಾರೆ. ಪಿ1048 ಸ್ವಂತ ಕಾರಿನಲ್ಲಿ ಮೇ 12ರಂದು ಕೆ.ಆರ್‌.ಪೇಟೆಗೆ ಆಗಮಿಸಿದ್ದಾರೆ. ಪಿ1049 12ರಂದು ಕೆ.ಆರ್‌.ಪೇಟೆಗೆ ಬಂದಿ ದ್ದಾರೆ. ಪಿ1054 ಮುಂಬೈನಲ್ಲಿ ಕ್ಯಾಂಟೀನ್‌ ನಡೆಸಿಕೊಂಡು ಜೀವನ ನಿರ್ವ ಹಿಸುತ್ತಿದ್ದರು. ಟಿಟಿ ವಾಹನದ ಮೂಲಕ ಕೆ.ಆರ್‌.ಪೇಟೆಗೆ ಬಂದಿದ್ದಾರೆ. ಇವರಿಗೆ ಪ್ರಾಥಮಿಕ ಸಂಪರ್ಕವಾಗಿ ನಾಲ್ವರನ್ನು ಗುರುತಿಸಲಾಗಿದೆ. ಪಿ1055 ಮೇ 11ರಂದು ಕೆ.ಆರ್‌ .ಪೇಟೆ ಆಗಮಿಸಿದ್ದಾರೆ. ಪಿ1056 ಇನ್ನೋವಾ ಕಾರಿನಲ್ಲಿ ಮೇ 11ರಂದು ಬಂದಿದ್ದಾರೆ.

ಕೊರೊನಾ ಸೋಂಕು ತಡೆಯಲು ಜಿಲ್ಲಾಡಳಿತ ತುರ್ತು ಕ್ರಮ ವಹಿಸಿದೆ. ಮುಂಬೈ ಹಾಗೂ ಇತರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರು ಗ್ರಾಮಕ್ಕೆ ಭೇಟಿ ಕೊಡುವ ಮುನ್ನವೇ ಅವರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ. ಸಾರ್ವಜನಿಕರು  ಆತಂಕಪಡಬೇಕಿಲ್ಲ. ಸೋಂಕಿತರನ್ನು 14ರಿಂದ 28 ದಿನಗಳ ಕ್ವಾರಂಟೈನ್‌ ಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
-ಡಾ.ವೆಂಕಟೇಶ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next