Advertisement

ನಕಲಿ ಔಷಧಿಗಳ ಮಾರಾಟ ಜಾಲ ಪತ್ತೆ ಹಚ್ಚಿ

05:10 PM Jul 17, 2022 | Team Udayavani |

ಮುಳಬಾಗಿಲು: ನಕಲಿ ಜಿ2 ಫಾರಂ ಹೆಸರಿನಲ್ಲಿ ಆನ್‌ ಲೈನ್‌ ಮೂಲಕ ರೈತರಿಗೆ ನಕಲಿಔಷಧಿಗಳನ್ನು ನೇರ ಮಾರಾಟ ಮಾಡುವ ಜಾಲ ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಿ ಕರಪತ್ರದ ಮುಖಾಂತರ ನಕಲಿ ಕಂಪನಿಗಳ ಬಗ್ಗೆಜಾಗೃತಿ ಮೂಡಿಸಬೇಕು ಎಂದು ರೈತಸಂಘದಕಾರ್ಯಕರ್ತರು ನಗರದಲ್ಲಿ ಕೃಷಿ ಅಧಿಕಾರಿ ಶುಭಾ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ರೈತಸಂಘದ ರಾಜ್ಯಉಪಾಧ್ಯಕ್ಷ ಕೆ.ನಾರಾಯಣಗೌಡ, ರಾಸಾಯನಿಕಮುಕ್ತ ಸಾವಯವ ಔಷಧಿಯನ್ನು ನೀಡುವಮುಖಾಂತರ ನಿಮ್ಮ ಭೂಮಿ ಬೆಳೆ ರಕ್ಷಣೆ ಮಾಡಿನಿಮ್ಮ ಜೀವನದ ಭವಿಷ್ಯದ ದಿಕ್ಕನ್ನೇಬದಲಿಸುತ್ತೇವೆಂದು ನಕಲಿ ಔಷಧಿ ಕಂಪನಿಗಳುರೈತರನ್ನು ನೇರವಾಗಿ ತೋಟಗಳಲ್ಲಿ ಸಂಪರ್ಕಮಾಡಿ ಕೃಷಿ ಅಧಿಕಾರಿಗಳ ದಿಕ್ಕುತಪ್ಪಿಸಿ, ಕೃಷಿಕ್ಷೇತ್ರದ ಮರಣ ಶಾಸನವನ್ನು ಬರೆಯುತ್ತಿದ್ದಾರೆ,ಲಕ್ಷಾಂತರ ರೂ. ಹಣ ನೀಡಿ ರಾಸಾಯನಿಕ ಮುಕ್ತಔಷಧಿ ನೀಡುತ್ತಿರುವ ಕಂಪನಿಗಳ ಔಷಧಿಸಂಪೂರ್ಣ ಕಳಪೆಯಾಗಿದ್ದು, ಭೂಮಿಯಫ‌ಲವತ್ತತೆಯೂ ಇಲ್ಲ, ಗಿಡಗಳ ಬೆಳವಣಿಗೆ ಇಲ್ಲ,ಒಟ್ಟಾರೆಯಾಗಿ ರೈತರ ಬದುಕು ಹಸನಾಗುತ್ತಿಲ್ಲ,ಬದಲಿಗೆ ರೈತರನ್ನು ವಂಚನೆಗೆ ಸಿಲುಕಿಬಲಿಯಾಗುತ್ತಿದ್ದಾರೆ ಎಂದರು.

ನಕಲಿ ಕಂಪನಿಗಳಿಗೆ ಕಡಿವಾಣ ಹಾಕಬೇಕಾದಅಧಿಕಾರಿಗಳು ಕಂಪನಿಗಳ ಜತೆ ಶಾಮೀಲಾಗಿದೂರು ನೀಡಿದ ರೈತನಿಗೆ ಸರ್ಕಾರದ ಮಟ್ಟದಲ್ಲಿಸಮಸ್ಯೆ ಬಗೆಹರಿಸಿಕೊಳ್ಳಿ ಎಂದುಕೈತೊಳೆದುಕೊಳ್ಳುವ ಕೃಷಿ ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್‌ ಮಾತನಾಡಿ, 24 ಗಂಟೆಯಲ್ಲಿ ನಕಲಿ ಜಿ2 ಫಾರಂತಯಾರು ಮಾಡಿ ರೈತರಿಗೆ ಆನ್‌ಲೈನ್‌ ಮೂಲಕನೇರ ಮಾರಾಟ ಮಾಡುವ ದಂಧೆಗೆ ಕಡಿವಾಣಹಾಕಿ ಗುಣಮಟ್ಟ ಪರಿಶೀಲನೆ ಮಾಡಲುಸ್ಥಳೀಯವಾಗಿ ಪ್ರಯೋಗಾಲಯ ತೆರೆಯಬೇಕುಹಾಗೂ ನಕಲಿ ಕಂಪನಿಗಳ ಬಗ್ಗೆ ಕರಪತ್ರದ ಮುಖಾಂತರ ರೈತರಿಗೆ ಜಾಗೃತಿ ಮೂಡಿಸಬೇಕು,ಇಲ್ಲವಾದರೆ ನಕಲಿ ಔಷಧಿಗಳ ಸಮೇತ ಸ್ಥಳೀಯಶಾಸಕರ ಮನೆ ಮುತ್ತಿಗೆ ಹಾಕುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.

ಕೃಷಿ ಇಲಾಖೆ ಅಧಿಕಾರಿ ಶುಭಾ ಮನವಿಸ್ವೀಕರಿಸಿದರು. ಜಿಲ್ಲಾಧ್ಯಕ್ಷ ಐತಾಂಡಹಳ್ಳಿಮಂಜುನಾಥ್‌, ವಿಭಾಗೀಯ ಕಾರ್ಯಾಧ್ಯಕ್ಷಫಾರೂಖ್‌ ಪಾಷ, ತಾಲೂಕು ಪ್ರಧಾನಕಾರ್ಯದರ್ಶಿ ರಾಜೇಶ್‌, ರಾಜ್ಯ ಮುಖಂಡಬಂಗಾರಿ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿವಿಜಯ್‌ಪಾಲ್‌, ಕೋಲಾರ ತಾಲೂಕು ಅಧ್ಯಕ್ಷಈಕಂಬಳ್ಳಿ ಮಂಜುನಾಥ್‌, ಜಿಲ್ಲಾ ಕಾರ್ಯಾಧ್ಯಕ್ಷವಕ್ಕಲೇರಿ ಹನುಮಯ್ಯ, ಶಿವನಾರಹಳ್ಳಿ ವೇಣು,ಹೆಬ್ಬಣಿ ಆನಂದರೆಡ್ಡಿ, ಲಾಯರ್‌ ಮಣಿ,ಯಾರಂಘಟ್ಟ ಗಿರೀಶ್‌, ಪುತ್ತೇರಿ ರಾಜು, ಮಂಗಸಂದ್ರ ತಿಮ್ಮಣ್ಣ, ನಾಗೇಶ್‌, ಮಾಲೂರುತಾಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next