ಹರ್ಯಾಣ: ಪೊಲೀಸರ ವಶದಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸರ ವಾಹನವನ್ನೇ ಕದ್ದು ಪರಾರಿ ಆಗಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ಹರಿಯಾಣ ಪೊಲೀಸರಿಗೆ ಕೌಟುಂಬಿಕ ಕಲಹದ ಕುರಿತು ದೂರುವೊಂದು ಬಂದಿದೆ. ಈ ಕಾರಣದಿಂದ ಪೊಲೀಸರು ದೂರು ಬಂದ ಸ್ಥಳದತ್ತ ತನ್ನ ತುರ್ತು ಪ್ರತಿಕ್ರಿಯೆ ವಾಹನ(Emergency Response Vehicle) ದಲ್ಲಿ ಹೋಗುತ್ತಿದ್ದರು. ಈ ವೇಳೆ ಯಮುನಾ ನಗರದಲ್ಲಿ, ಗುಂಪೊಂದು ಜಗಳವಾಡುತ್ತಿರುವುದನ್ನು ನೋಡಿ ಪೊಲೀಸರು ವಾಹನವನ್ನು ನಿಲ್ಲಿಸಿದ್ದಾರೆ.
ಪೊಲೀಸರು ಜಗಳ ತಡೆಯಲು ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ವ್ಯಕ್ತಿಯೊಬ್ಬ ವಾಗ್ವಾದಕ್ಕಿಳಿದಿದ್ದಾನೆ. ಪರಿಣಾಮ ಪೊಲೀಸರು ಗುಂಪಿನಲ್ಲಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಡಿದ್ದಾರೆ.
ಇದನ್ನೂ ಓದಿ: KGF ನಂತಹ ಸಿನಿಮಾ ಸಿಕ್ಕಿದ್ದು ಯಶ್ ಅದೃಷ್ಟ..ರವಿತೇಜ ಮಾತಿಗೆ ಗರಂ ಆದ ರಾಕಿಭಾಯ್ ಫ್ಯಾನ್ಸ್
ಆ ಬಳಿಕ ಪೊಲೀಸರು ಕೌಟುಂಬಿಕ ಕಲಹದ ದೂರು ಬಂದ ಖುರ್ದಿ ಗ್ರಾಮಕ್ಕೆ ತೆರಳಿದ್ದಾರೆ. ನಂತರ ಪೊಲೀಸರು ವಾಹನದಿಂದ ಕೆಳಗಿಳಿದು ದೂರು ಬಂದ ಮನೆಯತ್ತ ಹೋಗಿದ್ದಾರೆ. ಆದರೆ ಪೊಲೀಸರು ಈ ವೇಳೆ ವಾಹನದ ಕೀಯನ್ನು ಬಿಟ್ಟು ಹೋಗಿದ್ದಾರೆ. ಪೊಲೀಸರು ಪ್ರಕರಣವನ್ನು ಬಗೆಹರಿಸಲು ಯತ್ನಿಸುತ್ತಿರುವಾಗ ಇತ್ತ ವಾಹನದಲ್ಲಿ ವ್ಯಕ್ತಿ ಪೊಲೀಸ್ ವಾಹನವನ್ನೇ ಬಳಸಿಕೊಂಡು ಅಲ್ಲಿಂದ ಪರಾರಿ ಆಗಿದ್ದಾನೆ. ಆದರೆ ಪೊಲೀಸರು ಕೆಲವೇ ನಿಮಿಷದಲ್ಲಿ ಎಚ್ಚರಗೊಂಡು ವಾಹನವನ್ನು ಬೆನ್ನಟ್ಟಿದ್ದಾರೆ. ಸುಮಾರು 10 ಕಿಮೀ. ದೂರದಲ್ಲಿ ಪೊಲೀಸ್ ವಾಹನ ಸಿಕ್ಕಿದೆ. ಅದರಲ್ಲಿ ಕೀ ಇರಲಿಲ್ಲ. ವ್ಯಕ್ತಿ ಕೂಡ ಅಲ್ಲಿಂದ ಪರಾರಿ ಆಗಿದ್ದಾನೆ.
ಸದ್ಯ ನಾವು ವ್ಯಕ್ತಿಯ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಕನ್ವಾಲ್ಜೀತ್ ಸಿಂಗ್ ಹೇಳಿದ್ದಾರೆ.