Advertisement

ದಾಖಲೆಗಳಿಲ್ಲದೆ ಓಡಾಡುತ್ತಿದ್ದ ಆಟೋ ವಶಕ್ಕೆ

09:15 AM Jul 16, 2018 | Team Udayavani |

ಕಲಬುರಗಿ: ಪರವಾನಿಗೆ ಪತ್ರ ಸೇರಿದಂತೆ ಸೂಕ್ತ ಅಗತ್ಯ ದಾಖಲೆಗಳಿಲ್ಲದೇ ಸಂಚರಿಸುತ್ತಿದ್ದ ನೂರಕ್ಕೂ ಹೆಚ್ಚು ಆಟೋಗಳನ್ನು ನಗರದ ಪೊಲೀಸರು ಹಾಗೂ ಸಂಚಾರಿ ಪೊಲೀಸರು ವಿವಿಧ ಕಡೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದರು.

Advertisement

ಬೆಳಗ್ಗೆ ನಗರದ ಜಗತ್‌ ವೃತ್ತ, ಸರ್ದಾರ ಪಟೇಲ್‌ ವೃತ್ತ ಸೇರಿದಂತೆ ನಗರದ ವಿವಿಧೆಡೆ ಪರವಾನಗಿ ಹಾಗೂ ದಾಖಲೆಗಳಿಲ್ಲದೆ ಓಡಾಡುತ್ತಿದ್ದ ಆಟೋಗಳನ್ನು ವಶಕ್ಕೆ ಪಡೆದುಕೊಂಡರು.

ಎಸ್‌ಪಿ ಎನ್‌.ಶಶಿಕುಮಾರ ಮಾರ್ಗದರ್ಶನದಲ್ಲಿ ಸಂಚಾರಿ ಠಾಣೆ ಪಿಐಎಸ್‌ ಎಂ. ಪಾಟೀಲ, ಪಿಎಸ್‌ಐ ಭಾರತಿಬಾಯಿ ಸೇರಿದಂತೆ ನಗರದ ವಿವಿಧ ಠಾಣೆಗಳ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸಂಚಾರಿ ಹಾಗೂ ಹೆಚ್ಚುವರಿ ಸಂಚಾರಿ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ವಶಕ್ಕೆ ಪಡೆದ ಆಟೋಗಳನ್ನು ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ನಿಲ್ಲಿಸಲಾಗಿ¨

Advertisement

Udayavani is now on Telegram. Click here to join our channel and stay updated with the latest news.

Next