Advertisement
ಇವು ರುದ್ರನ ಬಲ ಕಣ್ಣು ಅಂದರೆ ಸೂರ್ಯನೇತ್ರದಿಂದ ಉಂಟಾದ 12 ವಿಧಗಳು ಮತ್ತು ಎಡಗಣ್ಣು ಚಂದ್ರನೇತ್ರದಿಂದ ಉಂಟಾದ 16 ವಿಧಗಳು.
Related Articles
Advertisement
ಇದನ್ನೂ ಓದಿ: ರುದ್ರಾಕ್ಷಿ ಶಾರೀರಿಕ, ಮಾನಸಿಕ ಆರೋಗ್ಯದ ಗವಾಕ್ಷಿ- ಇಲ್ಲಿದೆ ವಿಶೇಷತೆಗಳು
1. ಏಕಮುಖ ರುದ್ರಾಕ್ಷಿ: ಅಧಿದೇವತೆ ಸೂರ್ಯ:ರುದ್ರಾಕ್ಷಿಗಳಲ್ಲೇ ಅತಿ ಶ್ರೇಷ್ಠವಾದುದು. ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಸಿ, ಪ್ರಾಪಂಚಿಕ ಬಂಧನಗಳನ್ನು ತೊಡೆದು ಮೋಕ್ಷ ಸಾಧಕವಾದುದು. ಆದರೆ ನಿಜವಾದ ಗೋಲಾಕಾರದ ಏಕಮುಖಿಯನ್ನು ಬಹುಶಃ ಯಾರೂ ನೋಡಿಲಾರರು. ಏಕಮುಖಿಯೆಂದು ಸಿಗುವ ರುದ್ರಾಕ್ಷಿ ದ್ವಿಮುಖ ಅಥವಾ ತ್ರಿಮುಖಿಗಳಿಂದ ಕೃತಕವಾಗಿ ತಯಾರಿಸಿದವುಗಳು. ಇದನ್ನು ಅರಿಯದೆ ಪಾಶ್ಚಾತ್ಯ ದೇಶದವರು ಕೂಡ 50 ಸಾವಿರದಿಂದ ಎರಡು ಲಕ್ಷ ರೂ.ಗಳಿಗೆ (50 ಸಾವಿರ ಪೌಂಡ್ ಗಳವರೆಗೂ!) ಕೊಳ್ಳುವವರಿದ್ದಾರೆ. ರಾಮೇಶ್ವರ, ಕೇರಳ ಮತ್ತು ಇಂಡೋನೇಶ್ಯಾಗಳ ಹಲವೆಡೆಗಳಲ್ಲಿ ಸಿಗುವ ಅರ್ಧ ಚಂದ್ರಾಕಾರದ (ಚಂದ್ರಮುಖಿ) ಏಕಮುಖಿ ರುದ್ರಾಕ್ಷಿಗಳು ಸುಮಾರು ರೂ. 300ರಿಂದ ರೂ. 1,000ದ ಬೆಲೆಯಲ್ಲಿ ಸಿಗುವುದು. ಇದರ ಧಾರಣೆಯಿಂದ ಉತ್ತಮ ಫಲಗಳು ದೊರೆಯುವುದು, ಧಾರಣೆಯಿಂದ ಹಲವಾರು ಔಷಧಿಗಳಿಂದ ಗುಣಪಡಿಸಲಾಗದ ಶಾರೀರಿಕ ಕಾಯಿಲೆ, ಮನೋ ದೌರ್ಬಲ್ಯಗಳು ಇತ್ಯಾದಿಗಳಿಗೆ ಪ್ರಯೋಜನ. 2. ದ್ವಿಮುಖ ರುದ್ರಾಕ್ಷಿ: ಅಧಿದೇವತೆ ಚಂದ್ರ
ಇದು ಶಿವಪಾರ್ವತಿ ಅಥವಾ ಅರ್ಧನಾರೀಶ್ವರ ಸ್ವರೂಪಿ. ಸ್ವಲ್ಪ ಅಂಡಾಕಾರನಲ್ಲಿರುವ ಇದಕ್ಕೆ ಎರಡು ರೇಖೆಗಳಿವೆ. ನೇಪಾಳದ ದ್ವಿ ಮುಖ (ಹೆಚ್ಚು ಅಪರೂಪ ಮತ್ತು ಏಕಮುಖಿಯನ್ನು ತಯಾರಿಸಲು ಉಪಯೋಗಿಸುವ ಕಾರಣ!) ಅದಕ್ಕೆ ಬೇರೆ ಕಡೆ ಸಿಗುವ ರುದ್ರಾಕ್ಷಿಗಳಿಗಿಂತ ಸುಮಾರು 600 ಕ್ಕಿಂತ 800 ಪಾಲು ಅಧಿಕ ಬೆಲೆ. ನರಮಂಡಲಗಳು, ಜೀರ್ಣಾಂಗಗಳು, ಲಿಂಫಾಟಿಕ್ ಗ್ರಂಥಿಗಳು, ಶರೀರದ ದ್ರವ ಸಂಚಾರಗಳು ಇತ್ಯಾದಿಗಳ ಮೇಲೆ ಉತ್ತಮ ಪರಿಣಾಮಗಳು, ಆಧ್ಯಾತ್ಮಿಕವಾಗಿ ಮುನ್ನಡೆಯಲು ಸಾಂಸಾರಿಕ ಮತ್ತು ಸಾಮಾಜಿಕ ಬಂಧನಗಳನ್ನು ಉತ್ತಮಪಡಿಸಲು ತುಂಬಾ ಸಹಕಾರಿ. ಇದನ್ನೂ ಓದಿ: ಔಷಧೀಯ ಗುಣಗಳ ರುದ್ರಾಕ್ಷಿ; ಇದರಲ್ಲಿರುವ ವಿಟಮಿನ್ ಗುಣದ ಸಂಪೂರ್ಣ ಮಾಹಿತಿ 3. ತ್ರಿಮುಖಿಯಲ್ಲಿ ಮೂರು ರೇಖೆಗಳಿವೆ. ಅಧಿದೇವತೆ ಮಂಗಳ (ಅಗ್ನಿ):
ಧಾರಕನ ಮಾನಸಿಕ ದೌರ್ಬಲ್ಯ, ಖಿನ್ನತೆಗಳಿಗೆ ಪರಿಣಾಮಕಾರಿ. ಸಕಲ ಕಾರ್ಯಗಳಲ್ಲಿ ಜಯ. ಆಧ್ಯಾತ್ಮಿಕ ಮಾರ್ಗ, ಧ್ಯಾನ ಇತ್ಯಾದಿಗಳಿಗೆ ಅನುಕೂಲ. ಜ್ವರ ಬಾಧೆ, ಅಡ್ರಿನಲ್, ಲೈಂಗಿಕ ಗ್ರಂಥಿಗಳು, ರಕ್ತ ಕಣಗಳ ಅನಾರೋಗ್ಯಕ್ಕೆ ಉತ್ತಮ ಪರಿಣಾಮ. 4. ಚತುರ್ಮುಖಿಗೆ ನಾಲ್ಕು ರೇಖೆಗಳು. ಅಧಿದೇವತೆ ಬುಧ:
ಚತುರ್ಮುಖ ಬ್ರಹ್ಮ ಸ್ವರೂಪ, ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಹೊಂದಲು ಧಾರಣೆಯು ಪೂರಕ. ಧೀಶಕ್ತಿಯಿಂದ ಕೆಲಸ ಮಾಡುವ ವಿಜ್ಞಾನಿಗಳು, ಸಂಶೋಧಕರು, ಸಾಹಿತಿಗಳು, ಕಲಾವಿದರು ಇತ್ಯಾದಿ ಅವರಿಗೆ ತುಂಬಾ ಅನುಕೂಲ. ಥೈರಾಯ್ಡ್ ಗ್ರಂಥಿಗಳು, ಪಂಚೇಂದ್ರಿಯಗಳು, ಕೈಗಳು ಇತ್ಯಾದಿಗಳ ಕಾಯಿಲೆಗಳಿಗೆ ಪರಿಣಾಮಕಾರಿ. ಇದನ್ನೂ ಓದಿ: ರುದ್ರಾಕ್ಷಿ ಧಾರಣೆಯ ವೈಜ್ಞಾನಿಕ ಉಪಯೋಗಗಳು ನಿಮಗೆ ಗೊತ್ತೇ? 5. ಪಂಚಮುಖಿಯಲ್ಲಿ ಐದು ರೇಖೆಗಳಿದ್ದು ಅತಿ ಸಾಮಾನ್ಯವಾಗಿ ದೊರೆಯುತ್ತದೆ. ಅಧಿ ದೇವತೆ ಗುರು:
ಐದು ಮುಖಿಗಳು ಶಿವನ ಐದು ಸ್ವರೂಪಗಳನ್ನು ಬಿಂಬಿಸುವುದು. ಆಧ್ಯಾತ್ಮಿಕ ಉನ್ನತಿಗೆ ಧಾರಣೆಯಿಂದ ಅನುಕೂಲ. ಶುದ್ಧ ರುದ್ರಾಕ್ಷಿಗಳನ್ನು ತಾಮ್ರ/ಬೆಳ್ಳಿ ಪಾತ್ರೆಯಲ್ಲಿ ರಾತ್ರಿ ನೀರಿನಲ್ಲಿಟ್ಟು ಬೆಳಗ್ಗೆ ಆ ನೀರನನ್ನು ಸೇವಿಸಿದರೆ ಹೃದಯದ ದೌರ್ಬಲ್ಯ, ರಕ್ತದೊತ್ತಡ, ಡಯಾಬಿಟಿಸ್, ಜೀರ್ಣಾಂಗಗಳ ಸಮಸ್ಯೆಗಳಿಗೆ ದಿವ್ಯ ಔಷಧ. 6. ಷಷ್ಠಮುಖಿಗಳಿಗೆ ಆರು ರೇಖೆಗಳಿದ್ದು ಹೆಚ್ಚು ಅಪರೂಪವಲ್ಲ, ಷಣ್ಮುಖ (ಕಾರ್ತಿಕೇಯನ) ಸ್ವರೂಪ, ಅಧಿದೇವತೆ ಶುಕ್ರ
ಗಂಟಲು, ಕುತ್ತಿಗೆ, ಮೂತ್ರಕೋಶ, ಕಾಲುಗಳು, ಥೈರಾಯ್ಡ್ ಗ್ರಂಥಿಗಳು ಮತ್ತು ಥೈರಾಯ್ಡ್ ಗ್ರಂಥಿಗಳ ಕಾಯಿಲೆಗಳು ಉತ್ತಮ. ಗುಣವಾಗುವುದು. ನಾಲ್ಕು ಮತ್ತು ಆರು ಮುಖಗಳನ್ನು ಒಟ್ಟಿಗೆ ಧರಿಸಿದರೆ ಕಲಾ ನೈಪುಣ್ಯ, ಭಾಷಣ ಚತುರತೆ ಹೊಂದಲು, ವಿದ್ಯಾರ್ಥಿಗಳಿಗೆ, ಉಪನ್ಯಾಸಕರು ಮತ್ತು ನರ ಸಂಬಂಧಿ ಕಾಯಿಲೆಯಿಂದ ಬಳಲುವವರು ಒಳ್ಳೆಯದು. ಇದನ್ನೂ ಓದಿ: ಹೇಗಿರುತ್ತದೆ ರುದ್ರಾಕ್ಷಿ ಮರ? ಏಕಮುಖಿ ರುದ್ರಾಕ್ಷಿ ಶ್ರೇಷ್ಠವೇ? : ಇಲ್ಲಿದೆ ಫುಲ್ ಡಿಟೇಲ್ಸ್ 7. ಸಪ್ತಮುಖಿ ಮಹಾಲಕ್ಷ್ಮೀ ಸ್ವರೂಪ (ಸಪ್ತ ಮಾತೃಕೆಯರು):
ಸಕಲ ರೋಗ ಪರಿಹಾರಾರ್ಥವಾಗಿ ಈ ರುದ್ರಾಕ್ಷಿ ಅಥವಾ ಅಷ್ಟಮುಖಿ, ಗಣೇಶ ರುದ್ರಾಕ್ಷಿಗಳೊಂದಿಗೆ ಧರಿಸಬಹುದು ಅಥವಾ ಪೂಜಾ ಗೃಹದಲ್ಲಿರಿಸಬಹುದು. ವ್ಯಾಪಾರಿಗಳಿಗೆ, ಧನಾರ್ಥಿಗಳಿಗೆ ಮತ್ತು ಶನಿದೆಸೆಯವರಿಗೆ ಧಾರಣೆ ಮಾಡಲು ಇದು ಸೂಕ್ತ. 8. ಅಷ್ಟಮುಖಿಯಲ್ಲಿ ಎಂಟು ರೇಖೆಗಳಿದ್ದು ಅಷ್ಟ ಮಾತೃಕೆಯರು, ಕಾರ್ತಿಕೇಯ, ಗಣೇಶ ಮತ್ತು ಗಂಗಾದೇವಿ, ಅಷ್ಟವಸುಗಳಿಂದ ಇದು ಅನುಗ್ರಹಿಸಲ್ಪಟ್ಟಿದೆ. ಸಕಲ ವಿಘ್ನ ನಿವಾರಕ, ಸರ್ಪದೋಷ ಹರ, ದೃಷ್ಟಿದೋಷ ಹರ. ಇನ್ನು 7,15 ಮತ್ತು 17 ಮುಖಿಗಳೊಡನೆಯೂ ಇದನ್ನು ಧರಿಸಬಹುದು. 9, ನವಮುಖಿಯಲ್ಲಿ ಒಂಬತ್ತು ರೇಖೆಗಳಿದ್ದು ನವದುರ್ಗಾ ಸ್ವರೂಪಿಣಿ. ಧಾರಕರಿಗೆ ಧೈರ್ಯ, ಸ್ಥೈರ್ಯ, ಶಕ್ತಿಗಳನ್ನು ನೀಡುತ್ತದೆ ಮತ್ತು ಸಕಲ ಪಾಪ ನಿವಾರಕ. 10. ದಶಮುಖಿಯು ದಶಾವತಾರ ಧರಿಸಿದ ವಿಷ್ಣು ಸ್ವರೂಪ, ಧೈರ್ಯ, ಶಕ್ತಿ ಗಳನ್ನು ಕೊಟ್ಟು ಕೆಟ್ಟ ಅಭ್ಯಾಸಗಳಿಂದ ಮುಕ್ತಿ ಕೊಡುವುದು. 11. ಏಕಾದಶ ಮುಖಿ ರುದ್ರಾ: ರುದ್ರ ಅಥವಾ ಹನುಮಂತ ಸ್ವರೂಪ ಮೋಕ್ಷದಾಯಕ, ಮನಸ್ಸಿನ ಹತೋಟಿ, ಧೈರ್ಯ, ವಾಕ್ಚಾತುರ್ಯ, ಧ್ಯಾನಾಸಕ್ತಿ ಇತ್ಯಾದಿಗಳಿಗೆ ಉಪಯೋಗ, 12. ದ್ವಾದಶ ಮುಖಿ ರುದ್ರಾಕ್ಷಿ: ದ್ವಾದಶಾದಿತ್ಯ ಸ್ವರೂಪ (ಸೂರ್ಯ), ತೇಜಸ್ಸು ಶಾಂತಿದಾಯಕ. ಅನಾರೋಗ್ಯ, ಭಯ, ಚಿಂತೆ, ಮತ್ತರಗಳನ್ನು ಹೋಗಲಾಡಿಸುವುದು. 13. ತ್ರಯೋದಶಿ ಮುಖಿ ರುದ್ರಾಕ್ಷಿ: ಕಾಮದೇವ ಮತ್ತು ಇಂದ್ರ ಸ್ವರೂಪ, ಜನಸಂಪರ್ಕ, ಜನಾಕರ್ಷಣೆ, ಐಚ್ಛಿಕ ಮತ್ತು ಪ್ರಾಪಂಚಿಕ ಸುಖಗಳನ್ನು ಒದಗಿಸುವುದು. 14. ಚತುರ್ದಶ ಮುಖಿ: ತ್ರಿಪುರಾರಿ ರುದ್ರ ಸ್ವರೂಪವಾಗಿದ್ದು ದೇವಮಣಿಯೆಂದು ಪರಿಗಣಿಸಲ್ಲಟ್ಟಿದೆ. ಸರ್ವ ಪಾಪಹರ, ಸರ್ವ ದುಃಖನಿವಾರಕ, ಸರ್ವ ಪಿತೃ ದೋಷ ನಿವಾರಕ. ಇದಕ್ಕೆ ಮಹಾಶನಿಯೆಂದೂ ಹೆಸರಿದೆ. ಶನಿದೋಷ ಮತ್ತು ಕಾಳಸರ್ಪ ದೋಷ ನಿವಾರಕ, ಆಜ್ಞಾ ಚಕ್ರವನ್ನು ಉತ್ತೇಜಿಸಿ ಭವಿಷ್ಯವನ್ನು ಗ್ರಹಿಸುವ ಶಕ್ತಿಯು ದೊರಕುತ್ತದೆ. 15. 15 27 ಮುಖಿಗಳ ನಿಜವಾದ ರುದ್ರಾಕ್ಷಿಗಳು ಬಹಳ ಅಪರೂಪ (ಕೃತಕ ರುದ್ರಾಕ್ಷಿಗಳು ದೊರೆಯುತ್ತವೆ). ಪ್ರತಿಯೊಂದಕ್ಕೂ ವಿಶೇಷ ಪ್ರಯೋಜನಗಳಿವೆಯೆಂದು ಅನುಭವ ಸಿದ್ಧ ಹಾಗೆಯೇ ನಿಜವಾದ ಗೌರೀಶಂಕರ (ದ್ವಿ ರುದ್ರಾಕ್ಷಿ), ತ್ರಿಜಟಿ (ಬ್ರಹ್ಮ ವಿಷ್ಣು ಮಹೇಶ್ವರ), ಗಣೇಶ ರುದ್ರಾಕ್ಷಿಗಳು ವಿಶೇಷ ಗುಣಗಳಿವೆ. ಆದರೆ ತುಂಬಾ ಅಪರೂಪ. ಮುಂದುವರಿಯುವುದು… (ಮುಂದಿನ ಭಾಗದಲ್ಲಿ: ರುದ್ರಾಕ್ಷಿಯನ್ನು ಯಾರು ಬೇಕಾದರೂ ಧರಿಸಿಕೊಳ್ಳಬಹುದೇ? ಇದಕ್ಕೇನು ನಿಯಮಗಳಿವೆ?)