Advertisement

ಮರಗಳ ಮಾರಣ ಹೋಮ

10:56 AM Jan 04, 2019 | Team Udayavani |

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮರಗಳ್ಳರು ಹಾಡಹಗಲೇ ಬಹು ಮೌಲ್ಯದ ಮರಗಳನ್ನು ರಾಜಾರೋಷವಾಗಿ ಕಡಿಯುತ್ತಿದ್ದರೂ ಕ್ರಮಕ್ಕೆ ಮುಂದಾಗದ ಅರಣ್ಯ ಇಲಾಖೆ ಅಧಿಕಾರಿಗಳ ಮೌನ ಪರಿಸರ ಪ್ರೇಮಿಗಳನ್ನು ಕೆರಳಿಸುವಂತೆ ಮಾಡಿದೆ.

Advertisement

ಗೋಗೇರಿ, ಮಾಟರಂಗಿ, ದಿಂಡೂರ, ಲಕ್ಕಲಕಟ್ಟಿ, ನಾಗೇಂದ್ರಗಡ, ನೆಲ್ಲೂರ, ಕುಂಟೋಜಿ, ವದೇಗೋಳ ಗ್ರಾಮಗಳ ಬಳಿಯ ಬಹು ಅಮೂಲ್ಯ ಅರಣ್ಯ ಸಂಪತ್ತು ಮತ್ತು ರಸ್ತೆ ಬದಿ ಗಿಡಮರಗಳನ್ನು ದುಷ್ಕರ್ಮಿಗಳು ಕೊಳ್ಳೆ ಹೊಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ನಮಗೇನು ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಬದಿಯ ಸರ್ಕಾರಿ ಸ್ವಾಮ್ಯದ ಗಿಡ ಮರಗಳನ್ನು ದುಷ್ಕರ್ಮಿಗಳು ಹಾಡಹಗಲೇ ಕಡಿದು ಲೂಟಿ ಮಾಡುತ್ತಿರುವುದನ್ನು ವಿರೋಧಿಸಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ವರ್ಷಗಳ ಹಿಂದೆ ಅರಣ್ಯ ಇಲಾಖೆ ವತಿಯಿಂದ ನೆಟ್ಟಿರುವ ಈ ಮರಗಳು ದಾರಿ ಹೂಕರಿಗೆ ಮತ್ತು ದಣಿದ ಕೃಷಿಕರಿಗೆ ನೆರಳು ನೀಡುತ್ತಿದ್ದವು. ಆದರೀಗ ಅವುಗಳನ್ನು ದುಷ್ಕರ್ಮಿಗಳು ಕಾನೂನು ಬಾಹಿರವಾಗಿ ನಿತ್ಯ ಮರಗಳ ಮಾರಣ ಹೋಮ ನಡೆಸಿದ್ದಾರೆ. ದುಷ್ಕೃತ್ಯ ಹೀಗೆ ಬಿಟ್ಟರೆ ಕೆಲ ದಿನದಲ್ಲಿ ಎಲ್ಲ ಹಸಿರು ಸಂಪತ್ತು ನಾಶವಾಗುವುದರಲ್ಲಿ ಸಂದೇಹವೇ ಇಲ್ಲ.

ಸಸ್ಯ ಸಂಪತ್ತನ್ನು ಹಲವಾರು ವರ್ಷಗಳಿಂದ ದುಷ್ಕರ್ಮಿಗಳು ಕೊಳ್ಳೆ ಹೊಡೆಯುತ್ತಿರುವುದು ಇನ್ನೂ ಬೆಳಕಿಗೆ ಬಂದಿಲ್ಲ. ಆಯುರ್ವೇದಿಕ ಔಷಧಿ ಗುಣ ಸಸ್ಯಗಳು ಹೊಂದುವುದರ ಜತೆ ಸುತ್ತಲಿನ ಹಳ್ಳಿಗಳ ಜಾನುವಾರುಗಳಿಗೆ ಸಂಜೀವಿನಿಯಾಗಿವೆ. ಆದರೆ ಇವುಗಳ ರಕ್ಷಣೆ ಹೊಣೆ ಹೂತ್ತ ಸರ್ಕಾರ, ಬೇಜವಾಬ್ದಾರಿ ತೋರಿದ್ದರಿಂದ ಪರಿಸರ ಸಂಪತ್ತು ನಾಶವಾಗಿ ಬೋಳಾಕಾರ ಹಂತ ತಲುಪಿದೆ.

ಕಾಡು ಬೆಳೆಸಿ ನಾಡು ಉಳಿಸಿ ಎಂದು ಅರಣ್ಯ ಇಲಾಖೆ ಘಂಟಾಘೋಷಣೆ ಕೇವಲ ದಾಖಲೆಯಲ್ಲಿ ಉಳಿದಿದೆ. ಅನುಷ್ಠಾನದಲ್ಲಿ ಜಾರಿಯಾಗಿಲ್ಲ ಎಂಬುದಕ್ಕೆ ಸಾಕ್ಷಿಗಳು ಸಾಕಷ್ಟು ಸಿಗುತ್ತವೆ. ಅವಸಾನದ ಅಂಚಿಗೆ ತಲುಪಿರುವ ಅರಣ್ಯ ಸಂಪತ್ತು ಉಳಿಸಿ ಬೆಳೆಸದಿದ್ದರೆ ಜನ ಹೋರಾಟಕ್ಕೆ ಮುಂದಾಗಲಿದ್ದಾರೆ ಎನ್ನುವುದು ಪರಿಸರ ವಾದಿಗಳ ಎಚ್ಚರಿಕೆಯಾಗಿದೆ.

Advertisement

ಮನುಷ್ಯನ ಸ್ವಾರ್ಥಕ್ಕೆ ಪ್ರಕೃತಿ ನಿರ್ಮಿತ ಅರಣ್ಯ ಸಂಪತ್ತು ನಸಿಸುತ್ತಿದೆ. ತಾಲೂಕಿನಲ್ಲಿ ಅರಣ್ಯ ಇಲಾಖೆ ಇದೇಯೋ, ಇಲ್ಲವೋ ಎನ್ನುವ ಹಲವಾರು ಪ್ರಶ್ನೆಗಳು ಕಾಡುತ್ತಿವೆ. ನಿತ್ಯ ನಡೆಯುತ್ತಿರುವ ಗಿಡ ಮರಗಳ ಮಾರಣ ಹೋಮ ತಡೆಯುವರು ಯಾರು?
ಮಹಾಂತೇಶ್ವರ ಹೊಸಮನಿ, ಪರಿಸರ ಪ್ರೇಮಿ

ಪ್ರಕೃತಿ ನಿರ್ಮಿತ ಮತ್ತು ಅರಣ್ಯ ಇಲಾಖೆ ಸುಪರ್ದಿಯಲ್ಲಿನ ಗಿಡ ಮರಗಳನ್ನು ಕಡಿಯುವ ಮುನ್ನ ಅರಣ್ಯ ಇಲಾಖೆ ಪರವಾನಗಿ ಅಗತ್ಯ. ಕೆಲವರು ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ ಮರಗಳ ರಕ್ಷಣೆಗೆ ಇಲಾಖೆ ಜೊತೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ.
∙ಕಿರಣ ಅಂಗಡಿ,
ಪ್ರಾದೇಶಿಕ ವಲಯ ಅರಣ್ಯಾಧಿಕಾರಿ

ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next