ಸಕಲೇಶಪುರ: ಕಾಡಾನೆಗಳ ಹಾವಳಿ ಯನ್ನು ತಡೆಗಟ್ಟಲು ಕೆಲವು ಬೆಳೆಗಾರರು ಹಾಕಿಕೊಂಡಿರುವ ಸೋಲಾರ್ ಬೇಲಿಗಳ ಮೇಲೆ ಮರಗಳನ್ನು ಬೀಳಿಸಿ ಕಾಡಾನೆಗಳು ಮುಂದು ಹೋಗುವ ಪ್ರಯತ್ನ ಮಾಡುತ್ತಿರುವುದು ಬೆಳೆಗಾರರಲ್ಲಿ ಆತಂಕ ನಿರ್ಮಾಣವಾಗಲು ಕಾರಣವಾಗಿದೆ.
ಕಳೆದ ಎರಡು ದಶಕಗಳ ಹಿಂದೆ ಯಸಳೂರು ಹೋಬಳಿಯಲ್ಲಿ ಮಾತ್ರವೆ ಇದ್ದ ಕಾಡಾನೆಗಳ ಸಂತತಿ ಹೆಚ್ಚಿದಂತೆ ಇಂದು ತಾಲೂಕಿನ ಪ್ರತಿಯೊಂದು ಗ್ರಾಮವು ಕಾಡಾನೆ ಹಾವಳಿ ಪೀಡಿತಗೊಂಡಿದೆ. ಅದರಲ್ಲೂ ಶೇಷವಾಗಿ ಬೆಳಗೋಡು ಹೋಬಳಿಯ ಕಬ್ಬಿನಗದ್ದೆ, ವಡೂರು, ಹೊಸಕೆರೆ, ಹಳೇಕೆರೆ, ಜಮ್ಮನಹಳ್ಳಿ, ಹೊಂಕರವಳ್ಳಿ ಸುತ್ತಲಿನ ಗ್ರಾಮಸ್ಥರು ಕಾಡಾನೆ ಗಮನಿಸಿಯೆ ಮನೆಯಿಂದ ಹೊರಗಡೆ ಇಡಬೇಕಿದೆ.
ಕತ್ತಲಾಗುವ ಮುನ್ನ ಮನೆ ಸೇರಬೇಕು ಹಾಗೂ ಸಂಪೂರ್ಣ ಬೆಳಕು ಹರಿದ ನಂತರ ಮನೆಯಿಂದ ಹೊರಹೋಗುವಂತಹ ದಿಗ್ಬಂಧನದಲ್ಲಿ ತಾಲೂಕಿನ ಬಹುತೇಕ ನಾಗರಿಕರು ಜೀವನ ನಡೆಸುತ್ತಿದ್ದಾರೆ. ಕಾಡಾನೆಗಳು ವಿಪರೀತವಾಗಿ ಬೆಳೆ ನಾಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಹಲವು ಬೆಳೆಗಾರರು ಸೋಲಾರ್ ಬೇಲಿಗಳನ್ನು ಹಾಕಿಕೊಂಡಿದ್ದರು.
ಇದನ್ನೂ ಓದಿ;- 418 ಟೆಸ್ಟ್ ವಿಕೆಟ್ ಗಳೊಂದಿಗೆ ಹರ್ಭಜನ್ ಸಿಂಗ್ ದಾಖಲೆ ಮುರಿದ ರವಿ ಅಶ್ವಿನ್
ಆದರೆ ಕಾಡಾನೆಗಳು ಸೋಲಾರ್ ಬೇಲಿಗಳ ಮೇಲೆ ಮರವನ್ನು ಬೀಳಿಸಿ ಮುಂದೆ ಹೋಗಲು ಪ್ರಯತ್ನಿಸುತ್ತಿರುವುದು ಬೆಳೆಗಾರರಲ್ಲಿ ಆತಂಕ ಉಂಟಾಗಿದೆ. ಕಬ್ಬಿನಗದ್ದೆ, ಹೊಂಕರವಳ್ಳಿ, ಹಳೆಕೆರೆ ಸೇರಿದಂತೆ ಇನ್ನು ಹಲವೆಡೆ ಸೋಲಾರ್ ಬೇಲಿಗಳನ್ನು ಭೇದಿಸುವ ಯತ್ನವನ್ನು ಕಾಡಾನೆಗಳು ಮಾಡುತ್ತಿದೆ. ಕಾಡಾನೆಗಳ ಉಪಟಳ ತಪ್ಪಿಸಿ ಎಂಬ ಕೂಗಿಗೆ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
ಇದರಿಂದಾಗಿ ತಾಲೂಕಿನ ಜನರು ಕಾಡಾನೆಗಳೊಂದಿಗೆ ಹೊಂದಾಣಿಕೆ ಬಧುಕು ನಡೆಸ ಬೇಕಿದ್ದು, ಪ್ರತಿವರ್ಷ ಹತ್ತಾರು ಸಾವು ಹಾಗೂ ಕೋಟ್ಯಂತರ ರೂ. ಬೆಳೆನಷ್ಟ ಉಂಟಾ ಗುತ್ತಿದೆ. ಆದರೂ, ಸರ್ಕಾರ ಎಚ್ಚೆತ್ತದಿ ರುವುದು ಬೇಸರದ ಸಂಗತಿಯಾಗಿದೆ.