Advertisement

ಕಾಡಾನೆಯಿಂದ ಬೆಳೆ ನಾಶ

04:02 PM Apr 12, 2020 | mahesh |

ಮದ್ದೂರು: ಪಟ್ಟಣದ ಹೊರವಲಯದ ಶಿಂಷಾ ನದಿಯಲ್ಲಿ ಶುಕ್ರವಾರದಿಂದ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಶನಿವಾರ ಸಂಜೆಯ ವೇಳೆಗೆ ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಫ‌ಲರಾಗಿದ್ದಾರೆ.

Advertisement

ಕಾಡಾನೆಗಳನ್ನು ಕಾಡಿಗಟ್ಟುವ ಸಮಯದಲ್ಲಿ ಮಾರ್ಗಮಧ್ಯೆ ಆನೆಗಳ ಹಿಂಡು ರೈತರ ಬಾಳೆತೋಟ ಹಾಗೂ ಭತ್ತದ ಗದ್ದೆಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ. ತಾಲೂಕಿನ ಸೋಮನಹಳ್ಳಿಯ ರೈತ ಜಗನ್ನಾಥರ ಬಾಳೆ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಅರ್ಧ ಎಕರೆ ಜಮೀನಿನಲ್ಲಿ ಬೆಳೆದಿದ್ದು ಫ‌ಸಲು ಭರಿತ 300 ಬಾಳೆಗಿಡ ಹಾಗೂ ತೋಟವನ್ನು ನಾಶಪಡಿಸಿವೆ. ಇದೇ ವೇಳೆ ಜಗ ನ್ನಾಥ್‌ಗೆ ಸೇರಿದ 1 ಎಕರೆ ಭತ್ತದ ಗದ್ದೆಯನ್ನೂ ಸಹ ತುಳಿದು ನಾಶಪಡಿಸಿವೆ. ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ರೈತ ಜಗನ್ನಾಥ್‌ 3 ಲಕ್ಷ ರೂ. ಸಾಲ ಮಾಡಿ ಬಾಳೆ ಮತ್ತು ಭತ್ತ ಬೆಳೆದಿದ್ದರು. ಆನೆಗಳ ದಾಳಿಯಿಂದ ಕೈಗೆ ಬಂದ ಫ‌ಸಲು ನಾಶವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತ ರೈತ ಜಗನ್ನಾಥ ಒತ್ತಾಯಿಸಿದರು.

ಬಳಿಕ ಆನೆಗಳ ಹಿಂಡನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೆ.ಕೋಡಿಹಳ್ಳಿ, ತೈಲೂರು ಮಾರ್ಗವಾಗಿ ಬ್ಯಾಡರಹಳ್ಳಿ ಮೂಲಕ ಚನ್ನಪಟ್ಟಣ ತಾಲೂಕಿನ ಗಡಿ ದಾಟಿಸಿದರು. ಆನೆಗಳು ಸಾಗಿದ ಮಾರ್ಗದಲ್ಲಿ ಭತ್ತ ಮತ್ತು ಭತ್ತದ ಫ‌ಸಲನ್ನು ತುಳಿದು ನಾಶಪಡಿಸಿವೆ. ಸಂಜೆ 6.20ರ ಸುಮಾರಿಗೆ ಹೊರಟ ಆನೆಗಳ ಹಿಂಡು ರಾತ್ರಿ 11 ಗಂಟೆ ವೇಳೆಗೆ ಚನ್ನ ಪಟ್ಟಣ ತಾಲೂಕಿನ ಕೊಂಬಿನಕಲ್ಲು ಅರಣ್ಯ ಪ್ರದೇಶದ ಆನೆ ಕಾರಿಡಾರ್‌ಗೆ ಸೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next