Advertisement
ಜೈನ ಚಿಂತನೆಗಳಿಂದ ಪ್ರೇರಿತರಾದವರಿಗೆ ಅವರ ಆಹಾರಕ್ರಮದಲ್ಲಿಯೂ ಕೆಲ ಕಟ್ಟುನಿಟ್ಟುಗಳು ಇವೆಯೆನ್ನುವುದು ಗೊತ್ತಿರುತ್ತೆ. ಅವುಗಳಲ್ಲಿ ಮುಖ್ಯವಾದುದು ತಾವು ಸೇವಿಸುವ ಆಹಾರ “ನೀರುಳ್ಳಿ ಮತ್ತು ಬೆಳ್ಳುಳ್ಳಿ ರಹಿತ’ವಾಗಿರಬೇಕು ಎನ್ನುವುದು. ಅದಕ್ಕೇ ಅವರು ಬಹಳಷ್ಟು ಹೋಟೆಲ್ಲುಗಳಲ್ಲಿ ಆಹಾರ ಸೇವಿಸಲು ಹಿಂದೇಟು ಹಾಕುವುದು. ಅವರ ಈ ಕ್ರಮ ದೇಹ- ಮನಸ್ಸಿಗೆ ಪೂರಕ ಎನ್ನುತ್ತದೆ ವಿಜ್ಞಾನ. ಬೆಂಗಳೂರಿನಲ್ಲಿ ಜೈನರ ಸಾತ್ವಿಕ ಆಹಾರ ಪೂರೈಸುವ ಕೆಲ ತಾಣಗಳಿವೆ…
ಎಲ್ಲಿ?: ಬುಲ್‌ಟೆಂಪಲ್ ರಸ್ತೆ, ಮೋರ್ ಮಳಿಗೆಯ ಪಕ್ಕ, ಬಸವನಗುಡಿ ಗ್ರಾಮೀಣ್: ಹೆಸರಿಗೆ ತಕ್ಕ ಹಾಗೆ ಈ ಖಾನಾವಳಿಯ ಒಳಗೆ ಕಾಲಿಟ್ಟರೆ ಹಳ್ಳಿಯ ಗುಡಿಸಲಿನೊಳಗೆ ಕಾಲಿಟ್ಟ ಅನುಭವವಾಗುತ್ತೆ. ಉತ್ತರ ಭಾರತೀಯ ಶೈಲಿಯ ಸಸ್ಯಾಹಾರಿ ಅಡುಗೆಗೆ ಗ್ರಾಮೀಣ್ ಹೆಸರಾಗಿದೆ. ಈ ರೆಸ್ಟೋರೆಂಟಿನ ಇನ್ನೊಂದು ವೈಶಿಷ್ಟವೆಂದರೆ ಹೆಚ್ಚು ಬಗೆಯ ಖಾದ್ಯಗಳು. ಇಲ್ಲಿ ಭೇಟಿ ನೀಡುವವರಿಗೆ ಒಂದು ಖಾದ್ಯ ಇಷ್ಟವಾಗಲಿಲ್ಲವೆಂದಾದರೆ ಇಲ್ಲಿನ ಉದ್ದ ಮೆನುವಿನಿಂದ ತಮಗಿಷ್ಟವಾದುದನ್ನು ಆರಿಸಿಕೊಳ್ಳಬಹುದು.
ಎಲ್ಲಿ?: ರಹೇಜಾ ಆರ್ಕೇಡ್, ಗಣಪತಿ ಟೆಂಪಲ್ ರಸ್ತೆ, 7ನೇ ಬ್ಲಾಕ್, ಕೋರಮಂಗಲ
Related Articles
ಎಲ್ಲಿ?: ಕಿರ್ಲೋಸ್ಕರ್ ರಸ್ತೆ, ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾ
Advertisement
ಗೋಕುಲ್ ಕುಟೀರ: ಜೇಬಿಗೆ ಹೊರೆಯಾಗದೆ ಸವಿಯಬಹುದಾದ ಸಸ್ಯಾಹಾರಿ ಭೋಜನಕ್ಕಾಗಿ ಈ ರೆಸ್ಟೋರೆಂಟಿಗೆ ಭೇಟಿ ನೀಡಬಹುದು. ಸಸ್ಯಾಹಾರಿ ಮೆನುವಿನಲ್ಲಿ ಖಾದ್ಯಗಳ ಪಟ್ಟಿ ತುಂಬಾ ಉದ್ದವಿಲ್ಲದಿದ್ದರೂ, ಇಲ್ಲಿ ಸಿಗೋದೆಲ್ಲವೂ ರುಚಿಕರವಾಗಿರುತ್ತೆ ಮತ್ತು ಆರೋಗ್ಯಕ್ಕೆ ಹಿತಕರವೂ ಆಗಿರುತ್ತೆ ಅನ್ನೋದು ಇಲ್ಲಿನ ಗ್ರಾಹಕರ ಅಭಿಪ್ರಾಯ. ಎಲ್ಲಿ?: ನಂ. 21, ಸಿ.ಎಂ.ಎಚ್ ರಸ್ತೆ, 2ನೇ ಹಂತ ಇಂದಿರಾನಗರ ಕೃಷ್ಣ ವೈಭವ: ಮಾರತ್ತಹಳ್ಳಿ ಬ್ರಿಡ್ಜ್ ಬಳಿಯ ಲ್ಯಾಂಡ್‌ಮಾರ್ಕ್ ಈ ಹೋಟೆಲ್. ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದ ರೇಟಿನಲ್ಲಿ ಸಸ್ಯಾಹಾರವನ್ನು ಇಲ್ಲಿ ನೀಡಲಾಗುತ್ತೆ. ಉತ್ತರ ಭಾರತೀಯ ಖಾದ್ಯಗಳು ಇಲ್ಲಿ ಸಿಗುತ್ತವಾದರೂ, ದಕ್ಷಿಣ ಶೈಲಿಯ ಅಡುಗೆಗೆ ಈ ರೆಸ್ಟೋರೆಂಟು ಹೆಸರುವಾಸಿ. ಕಾಜು ಕರ್ರಿ ಇಲ್ಲಿನ ಸ್ಪೆಷಾಲಿಟಿ.
ಎಲ್ಲಿ?: ಮಾರತ್ತಹಳ್ಳಿ ಬ್ರಿಜ್ ಬಳಿ, ಸಂಜಯನಗರ ಬೆಂಗಳೂರು ಅಗರ್‌ವಾಲ್ ಭವನ್: ಶುದ್ಧ ಶಾಕಾಹಾರಿ ಆಹಾರ ಮತ್ತು ಸಿಹಿತಿಂಡಿಗಳನ್ನು ಒಂದೇ ಕಡೆ ಸವಿಯುವ ಅವಕಾಶವನ್ನು ಅಗರ್‌ವಾಲ್ ಭವನ್ ರೆಸ್ಟೋರೆಂಟ್ ಒದಗಿಸುತ್ತೆ. ಇದು ಸಿಹಿತಿಂಡಿಗಳಿಗೇ ಹೆಸರುವಾಸಿಯಾದ ತಾಣ. ರಾಜಸ್ಥಾನಿ ಥಾಲಿ ಇಲ್ಲಿನ ವೈಶಿಷ್ಟéತೆ. ಜೊತೆಗೇ ಉತ್ತರಭಾರತೀಯ ಶೈಲಿಯ ಚಾಟ್ಸ್ ಸವಿಯೋದನ್ನು ಮರೆಯದಿರಿ.
ಎಲ್ಲಿ?: 9ನೇ ಮುಖ್ಯರಸ್ತೆ, ಸೆಕ್ಟರ್7, ಎಚ್‌ಎಸ್‌ಆರ್ ಲೇಔಟ್ ಕೇಸರ್ ರಾಜಸ್ಥಾನಿ ಪರೋಟ ಪಾಯಿಂಟ್: ದರ್ಶಿನಿ ಮಾದರಿಯಲ್ಲಿರುವ ಈ ಕಾನಾವಳಿ ಪರೋಟಾಗೆ ಹೆಸರು ಪಡೆದಿದೆ. ವಿ.ವಿ. ಪುರಂನ ಫುಡ್‌ಸ್ಟ್ರೀಟ್ ಬಳಿಯೇ ಇರುವುದರಿಂದ ದಕ್ಷಿಣ ಭಾರತೀಯ ಶೈಲಿಯ ಆಹಾರ ಸವಿದ ನಂತರ ಇಲ್ಲಿಗೆ ಬಂದು ರಾಜಸ್ಥಾನಿ ಸವಿರುಚಿಯನ್ನೂ ಟ್ರೈ ಮಾಡಬಹುದು. ಪಾಲಕ್ ಪರೋಟ ಮತ್ತು ಹಳದಿ ಸಬ್ಜಿ, ಜಾಲ್ ಬತಿ ಚುರ್ಮಾ ಸೇರಿದಂತೆ ಹತ್ತು ಹಲವು ರಾಜಸ್ತಾನಿ ಖಾದ್ಯಗಳು ಇಲ್ಲಿನ ಸ್ಪೆಷಾಲಿಟಿ.
ಎಲ್ಲಿ?: ಫುಡ್‌ಸ್ಟ್ರೀಟ್, ವಿ.ವಿ.ಪುರಂ ಜೈನರ ಆಹಾರ ಪದ್ಧತಿ ಜಗತ್ತಿನ ಆರೋಗ್ಯಕರ ಆಹಾರಾಭ್ಯಾಸಗಳಲ್ಲಿ ಒಂದೆಂದು ಹೆಸರಾಗಿದೆ. ವಿದೇಶಗಳಲ್ಲಿ ಈ ಕುರಿತು ಬಹಳಷ್ಟು ಸಂಶೋಧನೆಗಳು ನಡೆದಿದ್ದು, ಅಲ್ಲಿನವರೇ ಈ ಸಂಗತಿಯನ್ನು ದೃಢಪಡಿಸಿದ್ದಾರೆ. ಸಸ್ಯಾಹಾರ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆಯಾದರೂ ಅದನ್ನು ಜೈನ ಆಹಾರವೆಂದು ಪರಿಗಣಿಸಲಾಗದು. ಏಕೆಂದರೆ, ಜೈನರ ಆಹಾರ ಪದ್ಧತಿಯಲ್ಲಿ ನೀರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಈ ಥರಹದ ಹಲವು ಕಂಡೀಷನ್‌ಗಳು ಅವರ ಆಹಾರ ಪದ್ಧತಿಯಲ್ಲಿದೆ. ಅವುಗಳನ್ನು ಪಾಲಿಸುವುದರಿಂದ ಲಾಭಗಳು ಹಲವು. 1. ಹೊಟ್ಟೆ ಭಾರವೆನಿಸುವುದಿಲ್ಲ. ಹೀಗಾಗಿ, ಚುರುಕಾಗಿ ನಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು.
2. ಮನಸ್ಸು ಶಾಂತಿ ಸಮಾಧಾನದಿಂದಿರುತ್ತೆ.
3. ಫ್ರೆಶ್ ಆದ ಆಹಾರವನ್ನೇ ಸೇವಿಸುವುದರಿಂದ ಆರೋಗ್ಯವೃದ್ಧಿಯೂ ಆಗುತ್ತೆ.
4. ಬೊಜ್ಜಿನ ಸಮಸ್ಯೆ ಉಂಟಾಗೋದಿಲ್ಲ. ಈ ಕಾರಣಕ್ಕೇ ಜೈನ ಆಹಾರ ಪದ್ಧತಿಯನ್ನು ವೇಗನ್ ಆಹಾರ ಪದ್ಧತಿಗೆ ಹೋಲಿಸಲಾಗುತ್ತೆ.
5. ಪೌಷ್ಟಿಕಾಂಶಭರಿತ ಆಹಾರ ಪದಾರ್ಥಗಳನ್ನು ಒಳಗೊಳ್ಳುವುದರಿಂದ, ಅದನ್ನು ಸೇವಿಸಿದಾಗ ದೇಹ ಬಲಿಷ್ಠಗೊಳ್ಳುವುದು. ಜೈನ ಆಹಾರ ಪದ್ಧತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಜಾಲತಾಣದಿಂದ ಪಡೆದುಕೊಳ್ಳಬಹುದು.: goo.gl/weZwDM * ಹವನ