Advertisement

ಪ್ರೀತಂ ಆಘಾತಕಾರಿ ಸೋಲಿನ ನಡುವೆಯೂ ಹಾಸನದಲ್ಲಿ ಅರಳಿದ ಕಮಲ

05:56 PM May 13, 2023 | Team Udayavani |

ಹಾಸನ : ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀತಂ ಗೌಡ ಅವರು ಆಘಾತಕಾರಿ ಸೋಲು ಅನುಭವಿಸಿದರೂ ಹಾಸನದಲ್ಲಿ ಕಮಲ ಅರಳಿದೆ.

Advertisement

ಸಕಲೇಶಪುರ ಎಸ್ ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು (58604), ಜೆಡಿಎಸ್ ನ ಎಚ್.ಕೆ. ಕುಮಾರಸ್ವಾಮಿ ಎದುರು (56548) ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುರಳಿ ಮೋಹನ್ 42811 ಮತಗಳನ್ನು ಪಡೆದಿದ್ದಾರೆ.

ರಾಜ್ಯದಲ್ಲೇ ಜಿದ್ದಾಜಿದ್ದಿನ ಕಣವಾಗಿದ್ದ ಹಾಸನದಲ್ಲಿ ಪ್ರೀತಂ ಗೌಡ( 77322 ಮತ) ವಿರುದ್ಧ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ (85176 ಮತ) ಜಯಭೇರಿ ಬಾರಿಸಿದರು. ಕಾಂಗ್ರೆಸ್ ಅಭ್ಯರ್ಥಿ ಬನವಾಸಿ ರಂಗಸ್ವಾಮಿ ಕೇವಲ 4241 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಕೆ. ಸುರೇಶ್ ಅವರು (63571)ಕಾಂಗ್ರೆಸ್ ಅಭ್ಯರ್ಥಿ ಬಿ. ಶಿವರಾಮು ವಿರುದ್ಧ (55835) ಜಯ ಗಳಿಸಿದ್ದಾರೆ. ಜೆಡಿಎಸ್ ನ ಕೆ.ಎಸ್. ಲಿಂಗೇಶ ಅವರು (38446) ಮೂರನೇ ಸ್ಥಾನ ಪಡೆದಿದ್ದಾರೆ.

ಹೊಳೆನರಸೀಪುರದಲ್ಲಿ ಹೆಚ್.ಡಿ. ರೇವಣ್ಣ ಪ್ರಯಾಸದ ಗೆಲುವು ಕಂಡಿದ್ದಾರೆ(88103 ಮತ).ಕಾಂಗ್ರೆಸ್ ಭರ್ಜರಿ ಅಲೆಯ ನಡುವೆಯೂ 3 ಸಾವಿರ ಮತಗಳ ಅಂತರದ ಗೆಲುವು ಅವರದ್ದಾಗಿದೆ. ಜಿದ್ದಾ ಜಿದ್ದಿನ ಸ್ಪರ್ಧೆ ನೀಡಿದ ಶ್ರೇಯಸ್ ಎಂ.ಪಟೇಲ್(84951) ಸೋಲುಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಜಿ.ದೇವರಾಜೇಗೌಡ(4850) ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

Advertisement

ಅರಕಲಗೂಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ಗೆಲುವು ಸಾಧಿಸಿದ್ದಾರೆ(74643 ಮತ). ಸ್ಪರ್ಧೆ ನೀಡಿದ ಪಕ್ಷೇತರ ಎಂ.ಟಿ. ಕೃಷ್ಣೇಗೌಡ 55038 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ಎಚ್.ಯೋಗಾ ರಾಮೇಶ್ 19575 ಮತಗಳನ್ನು ಪಡೆದರು. ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಶ್ರೀಧರಗೌಡ ಅವರು 35731 ಮತಗಳನ್ನು ಪಡೆದಿದ್ದಾರೆ.

ಅರಸೀಕೆರೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಕೆ.ಎಂ. ಶಿವಲಿಂಗೇಗೌಡ ಅವರು ಗೆಲುವು ಸಾಧಿಸಿದ್ದಾರೆ. (98375 ಮತ) ಅವರಿಗೆ ಜೆಡಿಎಸ್ ಅಭ್ಯರ್ಥಿ ಎನ್.ಆರ್. ಸಂತೋಷ್ ಸ್ಪರ್ಧೆ ಒಡ್ಡಿದರು.(78198), ಬಿ.ಎಸ್. ಯಡಿಯೂರಪ್ಪ ಅವರ ಸಂಬಂಧಿಯಾಗಿರುವ ಸಂತೋಷ್ ಬಿಜೆಪಿ ಟೆಕೆಟ್ ಸಿಗದಿದ್ದಾಗ ಜೆಡಿಎಸ್ ಸೇರ್ಪಡೆಯಾಗಿದ್ದರು. ಬಿಜೆಪಿ ಅಭ್ಯರ್ಥಿ ಜಿ.ವಿ.ಟಿ. ಬಸವರಾಜ ಅವರು ಠೇವಣಿ ಕಳೆದುಕೊಂಡಿದ್ದಾರೆ. (6538 ಮತಗಳು)

ಶ್ರವಣಬೆಳಗೊಳದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಬಾಲಕೃಷ್ಣ ಅವರು (85668 ಮತ) ಪಡೆದು ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಎ.ಗೋಪಾಲಸ್ವಾಮಿ (79023 ಮತ) ಪಡೆದು ಸೋಲು ಅನುಭವಿಸಿದರೆ, ಬಿಜೆಪಿ ಅಭ್ಯರ್ಥಿ ಚಿದಾನಂದ ಠೇವಣಿ ಕಳೆದುಕೊಂಡಿದ್ದಾರೆ. (5648 ಮತ)

Advertisement

Udayavani is now on Telegram. Click here to join our channel and stay updated with the latest news.

Next