Advertisement

ಜಾಗೃತಿ ನಡುವೆಯೂ ಹೆಚ್ಚಾಗಿತ್ತು ವಾಯು ಮಾಲಿನ್ಯ

12:20 PM Nov 05, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವರ್ಷ ಜಾಗೃತಿ ನಡುವೆಯೂ ದೀಪಾವಳಿಯಲ್ಲಿ ಸಾಮಾನ್ಯಕ್ಕಿಂತ ಶೇ.52ರಷ್ಟು ವಾಯು ಮಾಲಿನ್ಯ ಉಂಟಾಗಿತ್ತು. ಆ ಹಿನ್ನೆಲೆಯಲ್ಲಿ ಈ ಬಾರಿಯೂ ಮಾಲಿನ್ಯ ನಿಯಂತ್ರಣ ಮಂಡಳಿ ಜಾಗೃತಿ ಕ್ರಮಗಳನ್ನು ಕೈಗೊಂಡಿದ್ದು, ನಗರದ 21 ಕಡೆ ವಾಯು ಗುಣಮಟ್ಟ ತಪಾಸಣೆ ನಡೆಸಲಿದೆ. 

Advertisement

ಕಳೆದ ವರ್ಷ ಮಾಲಿನ್ಯ ನಿಯಂತ್ರಣ ಮಂಡಳಿಯ 13 ವಾಯು ಗುಣಮಟ್ಟ ಪರಿವೇಷ್ಟಕ ತಪಾಸಣೆ ನಡೆಸಿದಾಗ, 8 ಕೇಂದ್ರಗಳಲ್ಲಿ ನ್ಯಾಷನಲ್‌ ಆಂಬಿಯೆಂಟ್‌ ಏರ್‌ ಕ್ವಾಲಿಟಿ ಸ್ಟಾಂಡರ್ಡ್ಸ್‌ (ಎನ್‌ಎಎಕ್ಯೂಎಸ್‌) ನಿಗದಿಪಡಿಸಿರುವ ಮಿತಿಗಿಂತಲೂ ಹೆಚ್ಚಿನ ಮಾಲಿನ್ಯ ದಾಖಲಾಗಿತ್ತು.

ಈ ಬಾರಿ ನಗರದ 21 ವಾಯು ಮಾಲಿನ್ಯ ಮಾಪನ ಕೇಂದ್ರಗಳಲ್ಲಿ ಹಾಗೂ ಮಂಡಳಿಯ ಎರಡು ಮೊಬೈಲ್‌ ಕೇಂದ್ರಗಳ ಮೂಲಕ, ಹಬ್ಬಕ್ಕೆ ಮುನ್ನ ಮೂರು ದಿನ ಹಾಗೂ ಹಬ್ಬದ ದಿನಗಳಲ್ಲಿ ಮಾಲಿನ್ಯ ತಪಾಸಣೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತದೆ. ಈ ವೇಳೆ ವಾಯು ಹಾಗೂ ಶಬ್ದ ಮಾಲಿನ್ಯದೊಂದಿಗೆ, ಮಾಲಿನ್ಯಕಾರಕ ಅಂಶಗಳ ಕುರಿತು ಅಧ್ಯಯನ ನಡೆಸಲಾಗುತ್ತದೆ.

ಎನ್‌ಎಎಕ್ಯೂಎಸ್‌ ಪ್ರಕಾರ ಗಂಧಕದ ಡೈಆಕ್ಸೆ„ಡ್‌(ಎಸ್‌ಒ2) ಹಾಗೂ ಸಾರಜನಕ ಡೈ ಆಕ್ಸೆ„ಡ್‌(ಎನ್‌ಒ2) ಪ್ರಮಾಣ ಪ್ರತಿ ಸಾವಿರ ಲೀಟರ್‌ ಗಾಳಿಯಲ್ಲಿ 80 ಮೈಕ್ರೋ ಗ್ರಾಂ ಇರಬೇಕು. ಅದೇ ರೀತಿ ಪರ್ಟಿಕ್ಯೂಲೇಟ್‌ ಮ್ಯಾಟರ್‌ (ಪಿಎಂ10) ಹಾಗೂ ಶ್ವಾಸಕೋಶಕ್ಕೆ ಭಾರಿ ಹಾನಿಯುಂಟು ಮಾಡುವ ಪಿಎಂ2.5 ಪ್ರಮಾಣವನ್ನು 60 ಮೈಕ್ರೋ ಗ್ರಾಂಗಳಿಗಿಂತ ಹೆಚ್ಚಿರುವುದು ಆತಂಕ ಮೂಡಿಸಿತ್ತು. 

ಮಾಲಿನ್ಯ ನಿಯಂತ್ರಣ ಮಂಡಳಿಯ ನಗರ ರೈಲು ನಿಲ್ದಾಣ, ಸಾಣೆ ಗುರುವನಹಳ್ಳಿ, ಕಾಡಬೀಸನಹಳ್ಳಿಯ ಜಲಮಂಡಳಿ ಕಚೇರಿ ಹಾಗೂ ಬಿಟಿಎಂ ಲೇಔಟ್‌ನಲ್ಲಿ ವಾಯುಮಾಲಿನ್ಯ ಮಿತಿ ಮೀರಿರುವುದು ದಾಖಲಾಗಿದೆ. ಅ.18 ರಿಂದ ಅ.20 ರವರೆಗಿನ ಮಾಹಿತಿಗಳನ್ನು ನೋಡಿದರೆ ಬಹುತೇಕ ಕೇಂದ್ರಗಳಲ್ಲಿ ಮಾಲಿನ್ಯ ಪ್ರಮಾಣ ಏರಿರುವುದು ಕಂಡುಬಂದಿದೆ.

Advertisement

ಆದರೆ, ನಗರ ರೈಲು ನಿಲ್ದಾಣದ ಮಾಪನದಲ್ಲಿ ಅ.18ರಂದು ಪಿಎಂ-10 ಪ್ರಮಾಣ ಸರಾಸರಿ 193.60 ಮೈ.ಗ್ರಾಂ ದಾಖಲಾಗಿದ್ದು, ಉಳಿದಂತೆ ಅ.19ರಂದು 200.58 ಮೈ.ಗ್ರಾಂ ಹಾಗೂ ಅ.20 ರಂದು ರಾತ್ರಿ 8 ಗಂಟೆ ವೇಳೆಗೆ ದಾಖಲಾದ ಮಾಹಿತಿಯಂತೆ 198 ಮೈ.ಗ್ರಾಂ ದಾಖಲಾಗುವ ಮೂಲಕ ನಿಗದಿತ ಮಿತಿಗಿಂತ ದುಪ್ಪಟ್ಟು ದಾಖಲಾಗಿರುವುದು ಆತಂಕ ಮೂಡಿಸಿತ್ತು. 

ಪಿಎಂ-2.5 ಹೆಚ್ಚು ಅಪಾಯಕಾರಿ: ಪರ್ಟಿಕ್ಯೂಲೇಟ್‌ ಮ್ಯಾಟರ್‌ 2.5 ಅತ್ಯಂತ ಅಪಾಯಕಾರಿ ಕಣಗಳಾಗಿದ್ದು, ಅವು ನೇರವಾಗಿ ಶ್ವಾಸಕೋಶ ಸೇರಿ ಹಾನಿಯುಂಟು ಮಾಡುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಪಿಎಂ 2.5 ಗಿಂತಲೂ ಅತ್ಯಂತ ಸೂಕ್ಷ್ಮವಾದ ಕಣಗಳು ವಾತಾವರಣದಲ್ಲಿ ಹೆಚ್ಚಾಗಿದ್ದು, ಅವು ನೇರವಾಗಿ ಮೆದುಳಿಗೆ ಸೇರಿ ದೇಶಕ್ಕೆ ಹೆಚ್ಚಿನ ಅಪಾಯ ತರಲಿವೆ ಎಂದು ಹೇಳಲಾಗಿದೆ. ಆ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಕೇಂದ್ರಗಳಲ್ಲಿ ವರದಿ ಪಡೆಯಲು ಮಂಡಳಿ ನಿರ್ಧರಿಸಿದೆ. 

-ಅಸ್ತಮ, ಹೃದ್ರೋಗಿಗಳು ಅನುಸರಿಸಬೇಕಾದ ಕ್ರಮಗಳು
-ಪಟಾಕಿ ಹೊಗೆಯಿಂದ ಸಂಪೂರ್ಣವಾಗಿ ದೂರವಿರಬೇಕು
-ಪಟಾಕಿ ಸಿಡಿತದ ಸಮಯದಲ್ಲಿ ಕಿವಿಗೆ ಹತ್ತಿ ಅಥವಾ ಇಯರ್‌ ಪ್ಲೆಗ್‌ ಇಟ್ಟುಕೊಳ್ಳುವುದು
-ಹಬ್ಬದ ಮೂರು ದಿನಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವುದು
-ಪಟಾಕಿ ಸಿಡಿಸುವ ವೇಳೆ ಅಂತರ ಕಾಯ್ದುಕೊಳ್ಳುವುದು
-ರೋಗಿಗಳಿರುವ ಕೊಠಡಿಗಳ ಬಾಗಿಲು ಹಾಕಿಕೊಳ್ಳುವುದು

ಅಸ್ತಮ, ಹೃದ್ರೋಗ, ಶ್ವಾಸಕೋಶ ಸಮಸ್ಯೆ ಇರುವವರು ಮುಂಜಾಗ್ರತೆ ವಹಿಸುವುದು ಸೂಕ್ತ. ಒಂದೊಮ್ಮೆ ಕಲುಷಿತ ಪಟಾಕಿ ಹೊಗೆ ಸೇವಿಸಿ ಉಸಿರಾಟ ಸಮಸ್ಯೆ ಎದುರಾದರೆ, ಅಂಥವರಿಗೆ ಹೆಚ್ಚಿನ ಆಮ್ಲಜನಕ ಅಗತ್ಯವಿರುತ್ತದೆ. ಜತೆಗೆ ವೈದ್ಯರು ಸೂಚಿಸಿದ ಔಷಧ ತಕ್ಷಣ ನೀಡಬೇಕು.
-ಡಾ.ಮೋಹನ್‌, ಕೆ.ಸಿ.ಜನರಲ್‌ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ

ಮಂಡಳಿಯ 21 ಕೇಂದ್ರಗಳು ಹಾಗೂ ಎರಡು ಮೊಬೈಲ್‌ ಕೇಂದ್ರಗಳಲ್ಲಿ ದಾಖಲಾದ ಮಾಲಿನ್ಯ ಪ್ರಮಾಣವನ್ನು ಅಧಿಕಾರಿಗಳು ವರದಿ ಮಾಡಲಿದ್ದಾರೆ. ಅದರಂತೆ ಹಬ್ಬಕ್ಕೆ ಮೊದಲ ಮೂರು ದಿನ ಹಾಗೂ ಹಬ್ಬದ ಮೂರು ದಿನಗಳ ನಡುವಿನ ವ್ಯತ್ಯಾಸದ ಕುರಿತು ವರದಿ ಸಿದ್ಧಪಡಿಸಲಾಗುವುದು. 
-ಲಕ್ಷ್ಮಣ್‌, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

ಕಳೆದ ಬಾರಿ ಹೆಚ್ಚು ಮಾಲಿನ್ಯ ದಾಖಲಾದ ಕೇಂದ್ರಗಳು
ಕೇಂದ್ರ    ಮಾಲಿನ್ಯ ಪ್ರಮಾಣ ಹೆಚ್ಚಳ (ಶೇಕಡವಾರು)

-ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ    168
-ದೊಮ್ಮಲೂರು    103
-ಕೆ.ಆರ್‌.ವೃತ್ತ    86
-ಮೈಸೂರು ರಸ್ತೆ    69.4
-ಖಾಜಿಸೊಣ್ಣೆನಹಳ್ಳಿ ಐಟಿಪಿಎಲ್‌    86
-ಯಶವಂತಪುರ    57
-ಪೀಣ್ಯ    44.2
-ಐಟಿಪಿಎಲ್‌ ಕೈಗಾರಿಕಾ ಪ್ರದೇಶ    51

ರಾಷ್ಟ್ರೀಯ ಮಿತಿ (ಸಾವಿರ ಲೀಟರ್‌ ಗಾಳಿಯಲ್ಲಿ)
-ಪಿಎಂ-10ಗೆ 100 ಮೈಕ್ರೋ ಗ್ರಾಂ
-ಪಿಎಂ-2.5ಗೆ 60 ಮೈಕ್ರೋ ಗ್ರಾಂ

Advertisement

Udayavani is now on Telegram. Click here to join our channel and stay updated with the latest news.

Next