Advertisement
ಮರುದಿನ ಮುಖ್ಯೋಪಾಧ್ಯಾಯಿನಿಯ ಛೇಂಬರಿನ ಹೊರಗೆ ಈ ತಾಯಿ ಸಂಕೋಚದಿಂದ ಕೂತಿದ್ದಳು. ಆಕೆಯನ್ನು ಕಂಡ ಕ್ಲಾಸ್ ಟೀಚರ್- ಮಿಸ್ ಬಾರ್ಬರಾ, ಬನ್ನಿ ಬನ್ನಿ’ ಎಂದರು. ಈಕೆ ಮೌನವಾಗಿ ನಡೆದುಹೋಗಿ ಅನಂತರ ಕ್ಲಾಸ್ ಟೀಚರ್ ಮಾತಾಡಿದರು: ನಿಮ್ಮ ಮಗಳಿಗೆ ಓದುವುದರಲ್ಲಿ ಆಸಕ್ತಿ ಇಲ್ಲ. ಆಕೆ ಓದಿನಲ್ಲಿ ತುಂಬಾ ಹಿಂದುಳಿದಿದ್ದಾಳೆ. ಪಾಠ ಮಾಡ್ತಾ ಇದ್ರೆ ಅವಳ ಪಾಡಿಗೆ ಅವಳು ಕಾಲು ಅಲ್ಲಾ ಡಿಸಿಕೊಂಡು ಕೂತಿರ್ತಾಳೆ. ಪ್ರಶ್ನೆ ಕೇಳಿದ್ರೆ ಸುಮ್ನೆ ಎದ್ದು ನಿಂತ್ಕೊತಾಳೆ. ಏನಂದ್ರೆ ಏನು ಉತ್ತರ ಹೇಳಲ್ಲ. ನಾವು ಬೈದರೆ ಅದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಹೋಂವರ್ಕ್ ಕೊಡ್ತೇವೆ. ಮಾಡಿಕೊಂಡು ಬರಲ್ಲ. ಅವಳ ಅಕ್ಷರವೋ, ಯಾರೊಬ್ಬರಿಗೂ ಅರ್ಥ ಆಗುವುದಿಲ್ಲ. ಟೀಚರ್ಸ್ ಏನಾದ್ರೂ ಬೈಯ್ಯಬಹುದು ಎಂಬ ಕಾಮನ್ ಸೆನ್ಸ್ ಕೂಡ ಅವಳಿಗಿಲ್ಲ. ಒಂಥರಾ ವಿಲಕ್ಷಣ ವರ್ತನೆ ಅವಳದ್ದು. ನನಗೆ ಅನಿಸುವ ಪ್ರಕಾರ, ನಿಮ್ಮ ಮಗುವಿಗಿರುವ ಸಮಸ್ಯೆ ಮಾನಸಿಕ ಅಸ್ವಸ್ಥತೆಯದ್ದು ಅನಿಸುತ್ತೆ. ಹಲವು ಬಗೆಯಲ್ಲಿ ಪ್ರಯತ್ನಿಸಿದ್ದಾಯ್ತು. ಅವಳು ಸರಿಹೋಗಲೇ ಇಲ್ಲ. ವೆರಿ ಸಾರಿ. ಅವಳನ್ನು ಸಂಭಾಳಿಸಲಿಕ್ಕೆ ನಮ್ಮಿಂದ ಸಾಧ್ಯವಿಲ್ಲ. ಅವಳಿಗೆ ಪಾಠ ಕಲಿಸು ವುದಂತೂ ದೂರದ ಮಾತು. ಈಗ ನೀವು ಒಂದು ಕೆಲಸ ಮಾಡಿ. ಮಾನಸಿಕ ಅಸ್ವಸ್ಥ ಸಮಸ್ಯೆ ಹೊಂದಿದ ಮಕ್ಕಳ ಶಾಲೆಗೇ ಇವಳನ್ನು ಆದಷ್ಟು ಬೇಗ ಸೇರಿಸುವ ಪ್ರಯತ್ನ ಮಾಡಿ. ಹಾಗೆಯೇ ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಕೊಡಿಸಿ. ಯಾವುದೇ ತೊಂದರೆ ಆಗಲಿ: ಅದನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆದರೆ ಸಮಸ್ಯೆ ಪರಿಹಾರ ಆಗುತ್ತೆ. ಇಲ್ಲ ಅಂದ್ರೆ ಬದುಕಿಡೀ ಸಮಸ್ಯೆ ಆಗಬಹುದು. ತಡ ಮಾಡಬೇಡಿ. ಈ ವಾರವೇ ಯಾರಾದರೂ ತಜ್ಞ ವೈದ್ಯರ ಬಳಿಗೆ ಮಗಳನ್ನು ಕರ್ಕೊಂಡು ಹೋಗಿ. ಆಲ್ ದಿ ಬೆಸ್ಟ್ ……’***
ಸೈಕಾಲಜಿಸ್ಟ್ ರ ಮುಂದೆ ಆ ತಾಯಿ ಸುಮ್ಮನೆ ಕೂತಿದ್ದಳು. ಕ್ಲಾಸ್ ಟೀಚರ್ ತನ್ನ ಮಗಳ ಬಗ್ಗೆ ಹೇಳಿದ್ದನ್ನು ಮತ್ತು ಅವರ ಸಲಹೆಯಂತೆಯೇ ನಿಮ್ಮನ್ನು ಭೇಟಿಯಾಗಿದ್ದೇನೆ ಸರ್. ದಯವಿಟ್ಟು ನನ್ನ ಮಗಳನ್ನು ಒಮ್ಮೆ ಚೆಕ್ ಮಾಡಿ ಅವಳಿಗೆ ಯಾವ ಸಮಸ್ಯೆ ಇದೆ ಎಂದು ತಿಳಿಸಿ’- ಇದಿಷ್ಟನ್ನೂ ಆಕೆ ಒಂದು ಹಾಳೆಯಲ್ಲಿ ಬರೆದುಕೊಂಡು ಬಂದಿದ್ದಳು. ಆ ಪತ್ರವನ್ನು ವೈದ್ಯರಿಗೆ ಕೊಟ್ಟು ಮೌನವಾಗಿ ಕೂತಿದ್ದಳು.ಪತ್ರವನ್ನು ಓದಿದ ವೈದ್ಯರು, ಅಮ್ಮನ ಪಕ್ಕ ಕುಳಿತಿದ್ದ ಎಂಟು ವರ್ಷದ ಆ ಬಾಲಕಿಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರು. ಈ ಸಂಭಾಷಣೆಗೂ, ತನಗೂ ಯಾವುದೇ ಸಂಬಂಧವೂ ಇಲ್ಲ ಎಂಬಂತೆ ಆಕೆ ಕೂತಿದ್ದಳು. ಆಸ್ಪತ್ರೆಯಲ್ಲಿ ಕೂತಿದ್ದಾ ಗಲೂ ಅವಳು ಕಾಲು ಕುಣಿಸುತ್ತಿದ್ದಾಳೆ, ಆ ಕುರಿತು ಅವಳಿಗೆ ಯಾವುದೇ ಹಿಂಜರಿಕೆಯಾಗಲಿ, ಸಂಕೋಚವಾಗಲಿ ಇಲ್ಲ ಎಂದು ವೈದ್ಯರಿಗೆ ಅರ್ಥವಾಯಿತು. ಆಗಿಂದಾಗ್ಗೆ ಅಲುಗಾಡುತ್ತಿದ್ದ ಆಕೆಯ ಶರೀರ, ಈ ಅನಿಸಿಕೆಗೆ ಸಾಕ್ಷಿ ಒದಗಿಸುತ್ತಿತ್ತು.
***
ಈ ಘಟನೆ ನಡೆದದ್ದು ಇಂಗ್ಲೆಂಡಿನಲ್ಲಿ, 1932 ಸುಮಾರಿನಲ್ಲಿ. ಅಂದರೆ 90 ವರ್ಷಗಳ ಹಿಂದೆ. ಬಾರ್ಬರಾ ವೈದ್ಯರ ಮಾತಿನಲ್ಲಿ ನಂಬಿಕೆ ಇಟ್ಟಳು. ಮರುದಿನವೇ ಶಾಲೆಗೆ ಹೋಗಿ ಮಗಳ ಟಿ.ಸಿ. ಪಡೆದು ಆಕೆಯನ್ನು ಡ್ಯಾನ್ಸ್ ಶಾಲೆಗೆ ಸೇರಿಸಿಯೇ ಬಿಟ್ಟಳು. ಡ್ಯಾನ್ಸ್ ಶಾಲೆಗೆ ಸೇರಿದಳಲ್ಲ; ಆ ಮಗುವಿನ ಹೆಸರು- ಗಿಲಿಯನ್ ಲಿನ್!
Related Articles
Advertisement
ಇಷ್ಟಾಗುತ್ತಿದ್ದಂತೆಯೇ ಇಂಗ್ಲೆಂಡ್‌ನ ನಾಟಕ ಮತ್ತು ಸಿನೆಮಾ ರಂಗ ಈಕೆಯ ಹಿಂದೆ ಬಿತ್ತು. ತಮ್ಮ ನಾಟಕಕ್ಕೆ, ಕಾರ್ಯಕ್ರಮಗಳಿಗೆ ಸಂಗೀತ ಸಂಯೋಜನೆ ಮಾಡುವಂತೆ ನಿರ್ಮಾಪಕ-ನಿರ್ದೇಶಕರು ಒತ್ತಾಯಿಸಿದರು. ಎಲ್ಲಾ ಬಗೆಯ ಸವಾಲುಗಳಿಗೂ ತೆರೆದುಕೊಂಡಳು. ನೃತ್ಯ ನಿರ್ದೇಶನ, ಚಿತ್ರ ನಿರ್ಮಾಣ, ಗೀತೆ ರಚನೆ, ಮ್ಯೂಸಿಕ್ ಆಲ್ಬಮ್ ನಿರ್ಮಾಣದಲ್ಲಿ ತೊಡಗಿಸಿಕೊಂಡಳು. ಪ್ರತಿಯೊಂದು ಪ್ರಯತ್ನದಲ್ಲೂ ಯಶ ಕಂಡಳು. ಆಕೆ ನೃತ್ಯ ನಿರ್ದೇಶಕಿಯಾಗಿ ರೂಪಿಸಿದ ಮಾರ್ಜಾಲ ನಡಿಗೆಯ ನರ್ತನವಂತೂ ಇಂಗ್ಲೆಂಡ್‌ನಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಭಾರೀ ಮೆಚ್ಚುಗೆ ಪಡೆಯಿತು. ಪತ್ರಿಕೆಗಳು, ವಿಮರ್ಶಕರು ಆಕೆಯ ಸಾಧನೆಯನ್ನು ಹಾಡಿ ಹೊಗಳಿದರು. 8ನೇ ವಯಸ್ಸಿಗೇ ಶಾಲೆ ಬಿಟ್ಟ ಈ ಬಾಲೆ, ವಿಶಿಷ್ಟ ಡ್ಯಾನ್ಸ್ ಮೂಲಕವೇ ಮನೆ ಮಾತಾದಳು. ಖ್ಯಾತಿ, ಹಣ, ಅಭಿಮಾನ, ಪ್ರಶಸ್ತಿ, ಪಾರಿತೋಷಕಗಳು ಆಕೆಯ ಕಾಲಬುಡಕ್ಕೆ ದಂಡಿಯಾಗಿ ಬಂದು ಬಿದ್ದವು.
ತನ್ನ ಬದುಕಿನ ಬಗ್ಗೆ ವಿಮರ್ಶಕನೊಬ್ಬ ಕೇಳಿದ ಪ್ರಶ್ನೆಗೆ ಲಿನ್ ಉತ್ತರಿಸಿದ್ದು ಹೀಗೆ ಶಾಲೆಯಿಂದ ಹೊರದಬ್ಬಿಸಿಕೊಂಡು ಬಂದೆನಲ್ಲ,: ಆನಂತರದಲ್ಲಿ ಜನ ನಮ್ಮನ್ನು ಆಡಿಕೊಂಡರು. ಹಂಗಿಸಿದರು. ತಿರಸ್ಕಾರದಿಂದ ನೋಡಿ ದರು. ನನ್ನತ್ತ ಬೆಟ್ಟು ಮಾಡಿ, ಅರೆಹುಚ್ಚಿ ಅಂದರು. ಜನರ ಟೀಕೆ, ಅವರ ಮಾತಲ್ಲಿದ್ದ ನಂಜು ನನ್ನನ್ನು ತಾಕದಂತೆ ಅಮ್ಮ ಎಚ್ಚರ ವಹಿಸಿ ದ್ದೇ ಅಲ್ಲದೆ ಟೀಕೆಗಳತ್ತ ತಿರುಗಿ ನೋಡದೆ, ಸಾಧನೆಯ ಕಡೆಗೆ ಗಮನಕೊಡು…’ಎಂದು ಕಿವಿಮಾತು ಹೇಳಿದಳು. ಅನಂತರದ ಕೆಲವೇ ದಿನಗಳಲ್ಲಿ ಅಮ್ಮ ತೀರಿಕೊಂಡಳು. ಆದರೆ, ಆಕೆ ಹೇಳಿದ್ದ ಮಾತುಗಳು ನನ್ನೊಳಗೆ ಗಟ್ಟಿಯಾಗಿ ಉಳಿದು ಬಿಟ್ಟವು. ಡ್ಯಾನ್ಸ್ ಮಾಡಲೆಂದು ಸ್ಟೇಜ್ ಹತ್ತಿದಾಕ್ಷಣ ನನಗೆ ಕಾಣುತ್ತಿದ್ದುದು ಒಬ್ಬಳೇ- ನನ್ನ ಅಮ್ಮ! ಆಕೆಗೆ ತೃಪ್ತಿಯಾಗು ವಂತೆ ಕುಣಿಯಬೇಕೆಂದೇ ಹೆಜ್ಜೆಯಿಡುತ್ತಿದ್ದೆ. ಒಂದ ರ್ಥದಲ್ಲಿ ಟ್ರಾನ್ಸ್ ಗೆ ಹೋಗಿ ಬಿಡುತ್ತಿದ್ದೆ. ನನ್ನ ಯಶಸ್ಸು ಏನಿದ್ದರೂ ಅಮ್ಮನಿಗೇ ಸಲ್ಲಬೇಕು….****
ಕಡಿಮೆ ಮಾರ್ಕ್ಸ್ ತಗೊಂಡರು ಎಂಬ ಕಾರಣಕ್ಕೆ ಮಕ್ಕಳನ್ನು ಬೈಯ್ಯುವ ಪೋಷಕರು- ಶಿಕ್ಷಕರನ್ನು, ಕಡಿಮೆ ಮಾರ್ಕ್ಸ್ ಬಂತೆಂಬ ಕಾರಣಕ್ಕೇ ಓದು ನಿಲ್ಲಿಸುವ, ಮನೆ ಬಿಟ್ಟು ಹೋಗಿ ಬಿಡುವ ಮಕ್ಕಳನ್ನು ಕಂಡಾಗ ಶಾಲೆಯಿಂದ ದೂರವಿದ್ದೂ ಮಹಾನ್ ಸಾಧಕಿಯಾದ ಗಿಲಿಯನ್ ಲಿನ್‌ಳ ಕಥೆ ಹೇಳಬೇಕು ಅನ್ನಿಸಿತು… – ಎ.ಆರ್.ಮಣಿಕಾಂತ್