Advertisement
ಸೌಂದರ್ಯ ಎಂಬುದು ಬರೀ ಕಣ್ಣಿನ ತುತ್ತಲ್ಲ ಕಣ್ಣಿಗೂ ಕಣ್ಣಾಗಿ ಒಳಗಿಹುದು ಎಂದು ಬೇಂದ್ರೆಯವರು ಹೇಳಿದ್ದಾರೆ. ಪ್ರತಿ ಮನುಷ್ಯನಲ್ಲಿ ಇದು ಅವ್ಯಕ್ತವಾಗಿ ನೆಲೆಸಿರುತ್ತದೆ. ಯಾವಾಗ ಬೇಕಾದರೂ ಜಾಗೃತಗೊಳ್ಳಬಹುದು.
Related Articles
Advertisement
ಅದೊಂದು ದಿನ ಎಂದಿನಂತೆ ಯುನಿವರ್ಸಿಟಿ ತಲುಪಿದಾಗ ಗೇಟಿನಲ್ಲಿ ಮುಖ ಮುಚ್ಚಿ ಕುಳಿತಿದ್ದರು. ಕೇಫ್ ಅಲ್ ಹಾಲ್ ? (ಹೇಗಿದ್ದೀರಿ) ಎಂದು ಕೇಳಿ ಹೊರಟೆ. ಮಾರನೇ ದಿನವೂ ಮುಖ ಮುಚ್ಚಿಕೊಂಡೇ ಕುಳಿತಿದ್ದರು. ಏನಾಯಿತು ಇವರಿಗೆ? ಮನದೊಳಗೆ ಪ್ರಶ್ನೆ ಮೂಡಿತು, ಕೇಳಲಿಲ್ಲ. ಮಾರನೇ ದಿನವೂ ಹೀಗೆ ….
ಮನಸು ಸುಮ್ಮನಿರಲಿಲ್ಲ. ಓಶು ಹಾದ? ಖೋಯಸ್? ( ಏನಿದು, ಚೆನ್ನಾಗಿದ್ದೀರಾ?) ಎಂದಾಗ ಕುಲ್ಲು ಕುಲ್ಲು ಮುಶ್ಕಿಲಾ ಎಂದು ಉತ್ತರಿಸುತ್ತ ಮುಖದ ಕವರ್ ತೆಗೆದರು. ನನಗೆ ಮಾತೇ ಹೊರಡಲಿಲ್ಲ. ತುಟಿ ಊದಿಕೊಂಡಿತ್ತು, ಕಿನ್ನೆತ್ತರು ಕಟ್ಟಿತ್ತು, ಮೂಗೂ ಊದಿತ್ತು. ಮಾತನಾಡಲೂ ಕಷ್ಟ. ಐಸ್ ಕ್ಯೂಬ್ ಇಟ್ಟುಕೊಂಡು ಮೆಲ್ಲನೆ ಮಾತನಾಡಿದರು.
ನಾನು ಬೊಟಾಕ್ಸ್ ಚಿಕಿತ್ಸೆ ಮಾಡಿಸಿಕೊಂಡಿರುವೆ. ಅದು ತೊಂದರೆಯಾಗಿಬಿಟ್ಟಿತು. ಬಹಳ ನೋವಿದೆ ಎಂದರು. ಏನು ಹೇಳಲು ತೋಚಲಿಲ್ಲ, ಸಹಾಯ ಬೇಕಾದರೆ ತಿಳಿಸಿ ಎಂದು ಹೊರಬಂದೆ.
ಪೌಟಿ ಲಿಪ್ಸ್ ಇದು ಇಂದಿನ ಟ್ರೆಂಡ್. ತುಟಿಯ ಆಕಾರ ಬದಲಿಸಲು, ದಪ್ಪ ತುಟಿ ಬೇಕೆಂದರೆ, ಈ ಪೌಟಿ ಲಿಪ್ಸ್ ಟ್ರೆಂಡ್‌ಗೆ ಮೊರೆಹೋಗುತ್ತಾರೆ. ಇದನ್ನು ಪಡೆಯಲು ಎರಡು ಕ್ರಮವಿದೆ. ಒಂದು ಪ್ಲಾಸ್ಟಿಕ್ ಸರ್ಜರಿ ಇದು ದುಬಾರಿ. ಒಮ್ಮೆ ಮಾಡಿದರೆ ಮತ್ತೆ ಮೊದಲಿನ ರೂಪ ಮರಳದು. ಎರಡನೆಯದು ಬೊಟಾಕÕ… ಇಂಜೆಕ್ಷನ್. ಕಡಿಮೆ ವೆಚ್ಚದಲ್ಲಿ ಲಭ್ಯವಿದೆ. ಆದರೆ ಇದು ತಾತ್ಕಾಲಿಕ. ಆರು ತಿಂಗಳ ಅವಧಿಯ ಅನಂತರ ಪುನಃ ಉಪಚಾರ ಪಡೆಯಬೇಕು.
ಸರಿಯಾದ ವೈದ್ಯಕೀಯ ವಿಧಾನದ ಜತೆಗೆ ಈ ಎರಡೂ ಕ್ರಮದಲ್ಲಿ ನೈಪುಣ್ಯದ ಅವಶ್ಯಕತೆಯಿದೆ. ಸರಿಯಾದ ಕ್ರಮ ಅನುಸರಿಸದಿದ್ದರೆ ಇದು ಮಾರಕ. ಅವರ ತುಟಿ ಅದೆಷ್ಟು ಊದಿಕೊಂಡಿತೆಂದರೆ ಚಹಾ, ಕಾಫಿ ಕುಡಿಯಲು ಆಗದೆ ತಂಪು ಪಾನೀಯ ಸ್ಟ್ರಾ ಉಪಯೋಗಿಸಿ ಕುಡಿಯುತ್ತಿದ್ದರು. ಸಾಂತ್ವನದ ಜತೆಗೆ ಕೆಲವು ವೈದ್ಯರು ಅವರಿಗೆ ಉಪಚಾರ ಪ್ರಾರಂಭಿಸಿದರು.
ಈ ಘಟನೆ ನಮ್ಮ ಯುನಿವರ್ಸಿಟಿ ಕ್ಯಾಂಪಸ್ ಒಳಗೆ ಕಾಳಿYಚ್ಚಿನಂತೆ ಹರಡಿಕೊಂಡಿತು. ನಿಧಾನ ವಾಗಿ ಚೇತರಿಸಿಕೊಂಡರು. ಮತ್ತೆ ಅವರ ಮುಖದಲ್ಲಿ ನಗು ಅರಳಿತು. 15 ದಿನಗಳ ಅನಂತರ ಗೊತ್ತಾದ ಸತ್ಯ ಅವರು ತಾವೇ ಆಟಠಿಟx ಜಿnjಛಿcಠಿಜಿಟn ಮಾಡಿಕೊಂಡಿದ್ದರು.
ಇವರಿಗೆ ವೈದ್ಯಕೀಯ ಪದ್ಧತಿ ಗೊತ್ತಿಲ್ಲ. ನಿರ್ದಿಷ್ಟ ಬಿಂದುಗಳಲ್ಲಿ ಇಂಜೆಕ್ಷನ್ ಕೊಡದಿದ್ದರೆ ಅಡ್ಡ ಪರಿಣಾಮ ಖಚಿತ. ಇವರಿಗೂ ಅದೇ ಆಗಿದ್ದು. ಇವರಿಗೆ ಇದು ಬೇಕಿತ್ತಾ? ಎಂದು ಮನಸಿನಲ್ಲೇ ಅಂದುಕೊಂಡು ಸುಮ್ಮನಾದೆ.
ಸೌಂದರ್ಯ ಪ್ರಜ್ಞೆ ಇರುವುದು ತಪ್ಪಲ್ಲ ಆದರೆ ಸೌಂದರ್ಯ ವರ್ಧಕ, ಸಾಧನ ನಮ್ಮ ದೇಹ, ಆರೋಗ್ಯಕ್ಕೆ ಮಾರಕವಾಗಬಾರದು. ಸರಿಯಾದ ಸಲಹೆ, ಉಪಚಾರ ಈ ಕೃತಕ ಅಡವಳಿಗೆ ಹಾನಿಕಾರವಲ್ಲದ ರೀತಿಯಲ್ಲಿ ಅನ್ವಯ ಆಗಬೇಕು. ಇದೆಲ್ಲದರ ಒಳಿತು ಕೆಡಕುಗಳನ್ನೂ ನಾವು ಅರಿತಿರಬೇಕು. ಪ್ರಕೃತಿಯ ನಿಯಮದಂತೆ ಮಹಿಳೆಯಾಗಲಿ, ಪುರುಷರಾಗಲಿ ಎಲ್ಲರೂ ಸೌಂದರ್ಯದೆಡೆಗೆ ಆಕರ್ಷಿತರೇ.
2019ರಲ್ಲಿ ಮೂರು ವಾರ ನಾನು ಟರ್ಕಿಯ ರಾಜಧಾನಿ ಇಸ್ತಾಂಬುಲದಲ್ಲಿ ನೆಲೆಸಿದ್ದೆ. ನಗರ ಸುತ್ತುವಾಗ ಪ್ರಾರಂಭದಲ್ಲಿ ಮೂಗು, ತುಟಿಗೆ ಬ್ಯಾಂಡೇಜ್ ಮಾಡಿಕೊಂಡ ಯುವಕ ಯುವತಿಯರ ದರ್ಶನವಾಗಿತ್ತು. ಏನೋ ಗಾಯ ಮಾಡಿಕೊಂಡಿರಬಹುದೆಂದು ಅಂದುಕೊಂಡೆ. ಆದರೆ ಮತೆೆ¤ ಅರಿವಾಗಿದ್ದು ಟರ್ಕಿ ಪ್ಲಾಸ್ಟಿಕ್ ಸರ್ಜರಿಗೆ ಪ್ರಸಿದ್ಧವಾಗಿದೆ ಎಂದು. ಯುರೋಪ್‌ದೇಶದಲ್ಲಿ ಇದು ಬಹಳ ವೆಚ್ಚದ ವೈದ್ಯಕೀಯ ಉಪಚಾರ. ಹೀಗಾಗಿ ಯುರೋಪ್‌ನಿಂದ ಮತ್ತು ಅರೆಬಿಕ್ ದೇಶಗಳಿಂದ ಜನರು ಟರ್ಕಿಗೆ ಬರುತ್ತಾರೆ. ಇಲ್ಲಿ 7- 15 ದಿನಗಳ ಪ್ಯಾಕೇಜ್ ಇರುತ್ತದೆ. ಊಟ ತಿಂಡಿ, ನಿವಾಸದ ಜತೆಗೆ ಸರ್ಜರಿ. ಪ್ರವಾಸಿ ತಾಣ ಸುತ್ತಾಡಿ ತಮ್ಮ ದೇಶಕ್ಕೆ ಮರಳುತ್ತಾರೆ. ಬಿಟ್ಟನೆಂದರೂ ಬಿಡದೀ ಮಾಯೆ ಎನ್ನುವಂತೆ ಕೃತಕ ಸೌಂದರ್ಯ ವರ್ಧಕಗಳಿಗೆ ಮನುಷ್ಯ ಅರಿವಿಲ್ಲದೇ ಶರಣಾಗುತ್ತಾನೆ.
ಸೆಕ್ಯುರಿಟಿ ಮಹಿಳೆಯ ಈ ಘಟನೆ ಅನಂತರ ಯುನಿವರ್ಸಿಟಿ ವಿದ್ಯಾರ್ಥಿಗಳಲ್ಲಿಯೂ ಕ್ರೇಜ್ ಕಡಿಮೆಯಾಗಿದೆ. ತಮ್ಮ ನೈಸರ್ಗಿಕ ಸೌಂದರ್ಯಕ್ಕೆ ತೊಂದರೆ ಆಗಬಹುದು ಎನ್ನುವುದು ಅರಿತಿದ್ದಾರೆ. ಕೊನೆಯಲ್ಲಿ ಬಿಸಿ ಬಿಸಿ ಚಹಾ, ಕಾಫಿ ಕುಡಿಯುವಂತಾಗಿದೆ. ಆದರೆ ಮೊದಲಿನ ತುಟಿ ಮರಳಲಿಲ್ಲ. ಈಗ ನಾನು ಬೇರೊಂದು ಯುನಿಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಪ್ರತಿದಿನ ಇವರ ದರ್ಶನವಾಗದು.
ಜೀವನದಲ್ಲಿ ಕೇವಲ ಧನಾತ್ಮಕ ವಿಚಾರದಿಂದ ಒಳ್ಳೆ ವಿಷಯ ಕಲಿಯವುದು ಇಲ್ಲವೇ ಸ್ಫೂರ್ತಿಯಾಗಬೇಕೆಂದಿಲ್ಲ, ಋಣಾತ್ಮಕ ಘಟನೆ, ವಿಚಾರ ಸಹ ನಮಗೆ ನೀತಿಯಾಗಿ ಬಿಡುತ್ತವೆ. ಮನಃಪಟಲದಲ್ಲಿ ಶಾಶ್ವತ ಪಾಠವಾಗಿ ಬೇರು ಬಿಡುತ್ತವೆ. ಬಾಹ್ಯ ಸೌಂದರ್ಯದ ಆರಾಧಕರು ನಾವೆಲ್ಲ.
ಸೌಂದರ್ಯ ಎಂಬುದು ಬರೀ ಕಣ್ಣಿನ ತುತ್ತಲ್ಲ ಕಣ್ಣಿಗೂ ಕಣ್ಣಾಗಿ ಒಳಗಿಹುದು ಎಂದು ಬೇಂದ್ರೆಯವರು ಹೇಳಿದ್ದಾರೆ. ಪ್ರತಿ ಮನುಷ್ಯನಲ್ಲಿ ಇದು ಅವ್ಯಕ್ತವಾಗಿ ನೆಲೆಸಿರುತ್ತದೆ. ಯಾವಾಗ ಬೇಕಾದರೂ ಜಾಗೃತಗೊಳ್ಳಬಹುದು.
Beauty lies in the eyes of beholder ಎನ್ನುವ ಪ್ರಸಿದ್ಧ ಉಕ್ತಿಯನ್ನು ಎಲ್ಲರೂ ಕೇಳಿದ್ದೇವೆ. ನಾವು ಬರೆಯುತ್ತೇವೆ, ಉಪದೇಶ ಮಾಡುತ್ತೇವೆ, ಎಲ್ಲಿಯೋ ಕೇಳಿರುತ್ತೇವೆ, ಹೇಳಿರುತ್ತೇವೆ ಅಂತ್ಯದಲ್ಲಿ ಮನ ಬಯಸುವುದು, ಆಕರ್ಷಿತವಾಗುವುದು ಬಾಹ್ಯ ಸೌಂದರ್ಯಕ್ಕೇ. ನನ್ನಂತೆಯೇ ಈ ರೀತಿಯ ಘಟನೆ ಅಲ್ಲದಿದ್ದರೂ ಬಾಹ್ಯ ಸೌಂದರ್ಯವೇ ಮುಖ್ಯ ಎನ್ನುವ ಅನುಭವ ನಿಮಗೂ ಆಗಿರಬಹುದಲ್ಲವೇ?\
ವಾಣಿ ಸಂದೀಪ, ಸೌದಿ ಅರೇಬಿಯ