Advertisement
ಇಂತಹ ಸಂದರ್ಭದಲ್ಲಿ ಕೆನಡಾ ದೇಶದಲ್ಲಿರುವ ಕರ್ನಾಟಕ ಮೂಲದ ಕನ್ನಡಿಗರ ಮನಗಳು ಒಂದುಗೂಡತೊಡಗಿದವು. ಜಗತ್ತಿನಲ್ಲೇ ಎರಡನೇ ಅತಿದೊಡ್ಡ ದೇಶವಾಗಿರುವ ಕೆನಡಾದ ಪೂರ್ವದಿಂದ ಪಶ್ಚಿಮದವರೆಗೂ ಜನ ಸಂಪರ್ಕ ಸಾಧಿಸಲಾಯಿತು. ಸಾಮಾಜಿಕ ತಾಣಗಳು ಕನ್ನಡಿಗರ ಸಂಪರ್ಕ ಮಾಧ್ಯಮವಾಯಿತು. ಒಂದು ಸಣ್ಣ ಸಮಿತಿ ರಚನೆಯಾಯಿತು. ಸಹೃದಯ ಕನ್ನಡಿಗರು ತಮ್ಮಿಂದ ಸಾಧ್ಯವಾಗುವ ಸಹಾಯವನ್ನು ಮಾಡಲು ನಿರ್ಧರಿಸಿದರು. ಆ ನಿರ್ಧಾರ ಒಂದು ಸೇವಾ ಕಾರ್ಯಕ್ಕೆ ನಾಂದಿಯೂ ಆಯಿತು.
Related Articles
Advertisement
ಕೊರೊನಾ ಎರಡನೇ ಅಲೆಯಲ್ಲಿ ಕಂಡು ಬಂದಿರುವ ಆಮ್ಲಜನಕದ ಕೊರತೆ ನೀಗಿಸಲು ಹೇಗಾದರೂ ಸಹಾಯ ಮಾಡಬೇಕು.
ಈಗಿನ ಪರಿಸ್ಥಿತಿಯಲ್ಲಿ ಅತ್ಯಾ ವಶ್ಯವಾದ ಆಮ್ಲಜನಕ ಉತ್ಪಾದನಾ ಸಾಧನವನ್ನು ಕರ್ನಾಟಕಕ್ಕೆ ತಲುಪಿಸಿದರೆ ಹಲವರ ಪ್ರಾಣ ಉಳಿಸಬಹುದು ಎಂದು ಭಾವಿಸಿದ ಕೆನಡಾ ಕನ್ನಡಿಗರು ಕರ್ನಾಟಕಕ್ಕೆ ಪ್ರಾಣವಾಯು ತಲು
ಪಿಸುವ ಪಣತೊಟ್ಟರು. ಈ ಕಾರ್ಯ ಕ್ಕಾಗಿ ಗ್ರೂಪ್ ಒ2 ಸಂಸ್ಥೆಯನ್ನು ಸಂಪ ರ್ಕಿಸಲಾಗಿ ಅವರಿಂದ ಆಮ್ಲಜನಕ ಉತ್ಪಾದನಾ ಯಂತ್ರಗಳನ್ನು ಕಳುಹಿಸಿ ಕೊಡುವ ಒಪ್ಪಂದವಾಯಿತು.
ಮುಂದಿನ ಗುರಿ
ಕೆನಡಾದ ಕನ್ನಡಿಗರ ಮುಂದಿನ ಗುರಿ 40,000 ಡಾಲರುಗಳೆಂದು ನಿರ್ಧ ರಿಸಲಾಯಿತು. ಇಂದಿಗೆ ಸುಮಾರು 39,659 ಡಾಲರುಗಳ ಸಂಗ್ರಹವೂ ಆಗಿದೆ. ಸೀಮಂತ್ ಕುಮಾರ್ ಸಿಂಗ್ ಅವರೇ ಕೆನಡಾ ಕನ್ನಡಿಗರ ಸಮಿತಿ ಯೊಂದಿಗೆ ನೇರ ಸಂಭಾಷಣೆಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಮಿತಿಯಿಂದ ಹೊಸ ರೀತಿಯ ಸಹಾಯ ಹಸ್ತದ ಪ್ರಸ್ತಾಪ ಮಾಡಲಾಯಿತು. ಕಷ್ಟಕಾಲದಲ್ಲಿ ಕರ್ನಾಟಕಕ್ಕೆ ಸಹಾಯ ಮಾಡುವ ಒಂದು ಸೇವಾ ಸಂಸ್ಥೆಯನ್ನು ಕಟ್ಟುವ ಮಾತೂ ಆಯಿತು.
ಸೇವಾ ಕಾರ್ಯದ ಸ್ವಯಂ ಸೇವಕರು
ಆರಂಭದಿಂದ ಇಂದಿನವರೆಗೂ ಎಲ್ಲರನ್ನು ಸಂಘಟಿಸಿ, ಧನ ಸಂಗ್ರಹಿಸಿ, ಕರ್ನಾಟಕ ಮತ್ತು ಕೆನಡಾದ ಸಂಪರ್ಕ ಸೇತುವಾಗಿ, ಸೇವಾ ಉದ್ದೇಶವನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಮುಂದಾಳತ್ವ ವಹಿಸಿದವರಲ್ಲಿ ನಂದ ಕುಮಾರ್ ಚೌಡಪ್ಪ ಅವರ ಪಾಲು ಬಹಳ ಮುಖ್ಯವಾಗಿದೆ.ಇದರೊಂದಿಗೆ ಆಮ್ಲಜನಕ ಯಂತ್ರಗಳನ್ನು ಅವಶ್ಯಕತೆ ಇರುವವರಿಗೆ ತಲುಪಿಸುವಲ್ಲಿ ಸಹಾಯಕರಾದವರಲ್ಲಿ ಸೇವಾ ಕೆನಡಾದ ವಿನೋದ್ ವರಪ್ರವನ್, ಟೀಮ್ ಒ2 ನ ದೀಪ್ತಿ ಕಾಟ್, ಕಮಲ್ ಕೆದಿಯ, ಶುಭಾಷ್ ಕೆದಿಯ, ಡಾ| ಕಿಶೋರ್ ಭಟ್, ಡಿಸಿ, ಐಆರ್‌ಎಸ್ ಒಂದೆಡೆಯಾದರೆ, ಉಸಿರಾಡಲಿ ಕರ್ನಾಟಕ ಪ್ಯಾನೆಲ್ ಸದಸ್ಯರಾದ ಡಾ| ಅರುಣ್ ಪ್ರಕಾಶ್, ಡಾ| ಹೊಸಹಳ್ಳಿ ರಾಮಸ್ವಾಮಿ, ದಿನೇಶ್ ಬೆಂಗಳೂರು, ಹಿತೇಶ್ ಪೊಡನೊಳಣ, ಕಾರ್ತಿಕ್ ಗೌಡ, ಕಿರಣ್ ಭರ್ತುರ್, ಕೃಷ್ಣಪ್ರಸಾದ್ ಬಾಳಿಕೆ, ನದೀಮ್ ಖಾಝಿ, ನಾಗೇಂದ್ರ ಕೃಷ್ಣಮೂರ್ತಿ, ನವೀನ ಕುಮಾರ್, ಪ್ರಭಾಕರ ರಾಯಪ್ಪ, ಪ್ರಶಾಂತ್ ಸುಬ್ಬಣ್ಣ, ರಶ್ಮಿ ರಾಮಣ್ಣ, ರವೀಂದ್ರ ಕುಮಾರ್, ರೂಪ ಕಿಕ್ಕೇರಿ, ಸಚಿನ್ ಭಟ್ – ಸೇವಾ ಕೆನಡಾ, ಸಂತೋಷ್ ಮಂಜುನಾಥ್, ಸಂತೋಷ್ ಪಟ್ಟಣ ಶೆಟ್ಟರ್, ಶ್ರುತಿ ಕೀರ್ತಿ (ಸೇವಾ), ಸುಬ್ರಹ್ಮಣ್ಯ ಶಿಶಿಲ, ಸುಧಿ ಹಾಗಲವಾಡಿ, ವೆಂಕಿ ಮೈಸೂರು, ವಿನಾಯಕ್ ಹೆಗ್ಡೆ, ವಿಶಾಲ್ ಗಿರಿಸಾಗರ್ ಮುಂತಾದವರು ಎಲ್ಲ ರೀತಿಯ ಪ್ರೋತ್ಸಾಹ, ಸಲಹೆ, ಸೂಚನೆಗಳನ್ನು ಕೊಡುತ್ತಿದ್ದರು. ಈ ಸಂದರ್ಭದಲ್ಲಿ ಸುಮಾರು 40,000 ಡಾಲರುಗಳಷ್ಟು ಧನ ಸಹಾಯವನ್ನು ಮಾಡಿದ ಎಲ್ಲ ದಾನಿಗಳು ಅಭಿನಂದನೆಗೆ ಅರ್ಹರಾಗಿರುವರು.
ಎರಡನೇ ಹಂತ
ಉಸಿರಾಡಲಿ ಕರ್ನಾಟಕ ತಂಡದಿಂದ ಮುಂದೆ ಅತ್ಯವಶ್ಯ ಸಹಾಯಗಳನ್ನು ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಧನ ಸಂಗ್ರಹಕ್ಕಾಗಿಯೇ ಈಗಾಗಲೇ ಒಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ಬರುವ ಜೂನ್ 12 ರಂದು “ಉಸಿರಾಡಲಿ ಕರ್ನಾಟಕ’ ಎಂಬ ಒಂದು ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ.
- ಸುಬ್ರಹ್ಮಣ್ಯ ಶಿಶಿಲ, ಟೊರೊಂಟೊ