Advertisement
ರಾಮಚಂದ್ರ ಅಗ್ರಹಾರ ಅಂದರೆ ಸಾಮಾನ್ಯವೆಂದು ಅನ್ಕೋಬೇಡಿ. ಬಹುಶಃ ಪ್ರಪಂಚದÇÉೇ ಈ 2ನೇ ಕ್ರಾಸ್ ಬೀದಿಯಲ್ಲಿ ಒಂದಲ್ಲ ಎರಡಲ್ಲ 3 ಮುದ್ರಣಾಲಯಗಳು ಇದ್ದವು. ಇದು ಬಹಳ ಅಪರೂಪವೇ ಸರಿ. ಅದರಲ್ಲೂ ಪ್ರಪಂಚದ ಏಕಮಾತ್ರ ಸಂಸ್ಕೃತ ದಿನ ಪತ್ರಿಕೆ “ಸುಧರ್ಮ’ ಇದ್ದ ಬೀದಿ. ಸುಧರ್ಮ ಪತ್ರಿಕೆಯ ಸಂಪಾದಕ ಪದ್ಮಶ್ರೀ ಕೆ.ವಿ. ಸಂಪತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ಬಹಳಷ್ಟು ಬಾಲ್ಯದ ನೆನಪುಗಳ ಮಹಾಪೂರವೇ ಹರಿದು ಬಂದಿದೆ.
Related Articles
Advertisement
ನಮ್ಮ ಪಠ್ಯಕ್ರಮದಲ್ಲಿ ಭಾಷೆಯನ್ನು ಒಂದು ವಿಷಯವನ್ನಾಗಿ ಕಲಿಸುತ್ತಾರೆ. ಹೀಗಾಗಿ ನಮಗೆ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬರುವುದರ ಬಗ್ಗೆ ಗಮನವಿರುತ್ತದೆ ಹೊರತು ಭಾಷೆಯನ್ನು ಕಲಿಯುವುದರಲ್ಲಿ ಅಲ್ಲ. ನಮ್ಮ ಕಲಿಕೆ ಕೇವಲ ಬರವಣಿಗೆಗೆ ಸೀಮಿತವಾಗಿ ಸಂಭಾಷಣೆಯ ಸ್ವರೂಪಕ್ಕೆ ಬರುವುದೇ ಇಲ್ಲ. ನಮ್ಮ ಪಠ್ಯಕ್ರಮದಲ್ಲಿ ಕೆಲವು ಬದಲಾವಣೆಗಳು ಆದರೆ 7- 8 ವರ್ಷಗಳ ಕಾಲ ನಿರಂತರವಾಗಿ ಸಂಸ್ಕೃತ ಕಲಿತು ನಾನು ಸ್ವಲ್ಪ ಮಟ್ಟಿಗೆ ಮಾತಾಡಬಹುದಿತ್ತೇನೋ ಅನ್ನಿಸುತ್ತದೆ.
ಭಾರತೀಯಳಾದ ನನಗೆ ಸಂಸ್ಕೃತ ಭಾಷೆಯ ಮೇಲೆ ಹೆಚ್ಚು ಗೌರವ ಹಾಗೂ ಅಭಿಮಾನ. ಶಾಲೆಯಲ್ಲಿ ಸಂಸ್ಕೃತ ಭಾಷೆಯನ್ನು ಸುಮಾರು 5 ವರ್ಷಗಳ ಕಾಲ ಕಲಿತು, ಅನಂತರ ಕಾಲೇಜಿನಲ್ಲೂ 3 ವರ್ಷಗಳು ಸಂಸ್ಕೃತ ವಿದ್ಯಾಭ್ಯಾಸವನ್ನು ಮುಂದುವರಿಸಿದೆ. ಅಂದು ವಿಶ್ವ ಸಂಸ್ಕೃತ ದಿನ. ನಮ್ಮ ಅಧ್ಯಾಪಕರು ನನ್ನ ಆಸಕ್ತಿಯನ್ನು ಮೆಚ್ಚಿ ನನಗೆ ಸಂಸ್ಕೃತ ಭಾಷೆಯಲ್ಲಿ ಸ್ವಾಗತ ಭಾಷಣವನ್ನು ಮಾಡುವಂತೆ ಹೇಳಿದ್ದೇ ತಡ, ನಾನು ಎಲ್ಲಿಲ್ಲದ ಉತ್ಸಾಹದಿಂದ ತಯಾರಿ ಮಾಡಿ ಅತಿಥಿಗಳ ಮುಂದೆ ಭಾಷಣ ಮಾಡಿದೆ. ಆಗ ನಮ್ಮಲ್ಲಿ ಮೊಬೈಲ್ ಫೋನ್ ಇರಲಿಲ್ಲ. ಹೀಗಾಗಿ ನನ್ನ ಮನಸಿನಲ್ಲಿ ಮಾತ್ರ ಒಂದು ಸ್ಪಷ್ಟ ಹಾಗೂ ಬಲವಾದ ಚಿತ್ರ ಉಳಿದಿದೆ. ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿ ಸಂಸ್ಕೃತದ ಮೇಲೆ ಗಮನ ಕಡಿಮೆಯಾಗಿದ್ದೇನೋ ನಿಜ, ಆದರೆ ಅಭಿಮಾನ ಮಾತ್ರ ಸದಾ ಕಾಲ ಉನ್ನತ ಮಟ್ಟದÇÉೇ ಇದೆ.
ಶಾಲೆಯಲ್ಲಿ ನಿಷ್ಠೆಯಿಂದ ಕಲಿತ ಒಂದು ಸುಂದರ ಹಾಗೂ ಶ್ರೇಷ್ಠ ಭಾಷೆಯನ್ನು ಮುಂದುವರಿಸದಿರುವ ಬಗ್ಗೆ ನನಗೆ ಬಹಳ ಬೇಸರ ಮಾಡಿದೆ. ಈಜು, ಸೈಕಲ್ ಹೇಗೆ ಒಮ್ಮೆ ಕಲಿತರೆ ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲವೋ ಸಂಸ್ಕೃತವು ಹಾಗೆ ಇದ್ದಿದರೆ ಎಷ್ಟು ಚಂದ.. ಈಗ ಎಲ್ಲ ಮರೆತಂತಾಗಿದೆ. ಸಂಸ್ಕೃತ ಎಂದೊಡನೆ ನಮ್ಮ ಸ್ವತ್ತು ಎನ್ನುವ ಭಾವ. ಆದರೆ ಕಲಿಕೆ ಬಂದಾಗ ಭೀತಿ. ಶಾಸ್ತ್ರ, ಪುರಾಣಗಳ ಪ್ರಸ್ತಾವವಾದರೆ ನಾವು ಸಂಸ್ಕೃತ ಭಾಷೆಯಲ್ಲಿರುವ ಗ್ರಂಥಗಳನ್ನು ನಮ್ಮ ಸ್ಥಳೀಯ ಭಾಷೆಗೆ ಅನುವಾದಿಸಿದ ಗ್ರಂಥದ ಕೆಲವೇ ಪಂಕ್ತಿಯನ್ನು ತ್ವರಿತ ಪರಿಹಾರಕ್ಕಾಗಿ ಓದಿ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ಇಲ್ಲವೇ ಪಂಡಿತರ ಮೊರೆ ಹೋಗುತ್ತೇವೆ. ಸಂಸ್ಕೃತ ಅಧ್ಯಯನ ಮಾಡುವುದು ಸುಲಭವಲ್ಲ. ಆದರೆ ಆಸಕ್ತಿಯಿದ್ದರೆ ಅಸಾಧ್ಯವೇನಲ್ಲ.
ಸಂಸ್ಕೃತದಲ್ಲಿ ವ್ಯವಹರಿಸುವುದು ಕಷ್ಟ ಸಾಧ್ಯವಾದ ಈಗಿನ ಸಮಾಜದಲ್ಲಿ ಒಂದು ದೈನಿಕ ವಾರ್ತಾ ಪತ್ರಿಕೆ ಶುರುಮಾಡಿ ಅದನ್ನು ಇಲ್ಲಿಯ ವರೆಗೆ ಇಷ್ಟರ ಮಟ್ಟಿಗೆ ಬೆಳಸಿ ಉಳಿಸಿದ್ದೇ ಸಂಪತ್ ಕುಮಾರ್ ಅವರ ಬಹುದೊಡ್ಡ ಸಾಧನೆ. ಮೂಲತಃ ಸಂಸ್ಕೃತ ಪದವಾದ ಸನಾತನ ಎಂದರೆ ಆದಿ ಮತ್ತು ಅಂತ್ಯವಿಲ್ಲದ, ನಿರಂತರ ನಡೆಯುತ್ತಿರುವ ಎಂಬ ಅರ್ಥ. ಸುಧರ್ಮ ಒಂದು ಪ್ರತಿಷ್ಠಾನ. ಇದು ಬರುವ ಶತ ಶತಮಾನಗಳ ಕಾಲ ಉಳಿಯಲಿ, ಬೆಳೆಯಲಿ.
ರಾಧಿಕಾ ಜೋಶಿ, ಲಂಡನ್