Advertisement
ಪ್ಲವ ನಾಮ ಸಂವತ್ಸರ ವಸಂತೋತ್ಸವದ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಿತು. ಇದೇ ಸಮಯದಲ್ಲಿ ಸುದರ್ಶನ ಬಂಟಪಲ್ಲಿ ಅವರು ನ್ಯೂಜರ್ಸಿಗೆ ಭೇಟಿ ನೀಡಿದ್ದರು.
Related Articles
Advertisement
ಬೃಂದಾವನ ಕನ್ನಡ ಕೂಟ ಮಕ್ಕಳಿಗೆ ಸದಾ ಪ್ರೋತ್ಸಾಹಿಸುತ್ತಲೇ ಬಂದಿದೆ. ಸಂಗೀತ ಸುಧೆ ಕಾರ್ಯಕ್ರಮದಲ್ಲಿ ಮೂವರು ಯುವ ಬೃಂದಾವನ ಪ್ರತಿಭೆಗಳು ಭಾಗವಹಿಸಿದರು.
ಅನಿಶ್ ಆಚಾರ್ಯ, ಈಶಾನ್ ಕೃಷ್ಣಮೂರ್ತಿ ಹಾಗೂ ವೇದ್ರತ್. ಇವರಿಗೆ ಕರ್ನಾಟಕದಿಂದ ಬಂದಿರುವ ಕಲಾವಿದರ ಜತೆಗೆ ವಾದ್ಯ ನುಡಿಸಲು ಅವಕಾಶವೂ ಸಿಕ್ಕಿತು. ಹಾಗೆಯೇ ಹೊಸ ಕಲಿಕೆಯ ಅನುಭವವೂ ಆಯಿತು. ಈ ಕಾರ್ಯಕ್ರಮವನ್ನು ವೀಕ್ಷಿಸಿದ ಎಲ್ಲ ಪ್ರೇಕ್ಷಕರು ಸಂಗೀತಲೋಕದಲ್ಲಿ ಮುಳುಗಿದ್ದರು.
– ನಾಗಶ್ರೀ ಶಾಸ್ರೀ
ಅಮೆರಿಕದ ನ್ಯೂಜರ್ಸಿಯಲ್ಲಿ ಎ. 25ರಂದು ಬೃಂದಾವನ ಕನ್ನಡ ಕೂಟದ ಪ್ರಗತಿ ತಂಡದಿಂದ ವಸಂತೋತ್ಸವ ಕಾರ್ಯಕ್ರಮದ ಮೂಲಕ ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಭಾರತ- ಅಮೆರಿಕ ದೇಶಗಳ ರಾಷ್ಟ್ರಗೀತೆ ಹಾಗೂ ಬೃಂದಾವನ ಕನ್ನಡ ಕೂಟದ ಸಾಂಕೇತಿಕ ಗೀತೆ ಕನ್ನಡದ ಕುಲದೇವಿ ಕಾಪಾಡು ಬಾ ತಾಯೇ ಹಾಡನ್ನು ಹಾಡಿ ಪುಟಾಣಿ ಮಕ್ಕಳು ಕನ್ನಡಾಂಬೆಗೆ ನಮಿಸಿದರು. ಅನಂತರ ಆಧ್ಯಾತ್ಮಿಕ ಮಾರ್ಗದರ್ಶಕರು, ತಣ್ತೀಶಾಸ್ತ್ರ, ವೇದಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ದಲ್ಲಿ ನಿಪುಣರಾದ ಶ್ರೀ ಕೃಷ್ಣ ವೃಂದ ಮಠದ ಪ್ರಧಾನ ಅರ್ಚಕರು ಆದ ಯೋಗೀಂದ್ರ ಭಟ್ ಅವರ ಆಶೀರ್ವಚನ ಮತ್ತು ಪಂಚಾಂಗ ಶ್ರವಣ ಹಬ್ಬದ ಉತ್ಸುಕತೆಯನ್ನು ಹೆಚ್ಚಿಸಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ| ತೇಜಸ್ವಿನಿ ಅನಂತಕುಮಾರ್ ಅವರು ಪಾಲ್ಗೊಂಡು, ಅಮೆರಿಕದಲ್ಲಿ ನೆಲೆಸಿರುವ ತಾಯಿನಾಡಿನ ಮಕ್ಕಳಿಗೆ ಪರಿಸರ ಸಂರಕ್ಷಣೆ, ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳೆಸಿ, ಉಳಿಸಿ, ಕಡಿಮೆ ಪ್ಲಾಸ್ಟಿಕ್ ಉಪಯೋಗಿಸಿ ಪರಿಸರ ನೈರ್ಮಲ್ಯ ಕಾಪಾಡುವ ಬಗ್ಗೆ ಮಾರ್ಗದರ್ಶನ ನೀಡಿದರು ಹಾಗೂ ಕಸದಿಂದ ರಸ ಎನ್ನುವಂತೆ ಡಸ್ಟ್‌ಬಿನ್ ಕಸಗಳನ್ನು ಬಳಸಿಕೊಂಡು ಹೇಗೆ ಇಂಧನ ತಯಾರಿಸಬಹುದು ಎನ್ನುವ ಹೊಸ ವಿಚಾರದ ಜ್ಞಾನ ವನ್ನು ನೀಡಿದರು. ಜತೆಗೆ ಅದಮ್ಯ ಚೇತನ ಸಂಸ್ಥೆಯ ಯಶಸ್ಸಿನ ದಾರಿ ಯನ್ನು ವಿವರಿಸಿದರು. ವಿದೇಶಿ ಮಕ್ಕಳ ಕನ್ನಡ ಕಲಿಕೆಯನ್ನು ಕಂಡು ಸಂತೋಷಪಟ್ಟರು. ಭಾರತೀಯರ ಸಂಸ್ಕೃತಿ, ಆಚರಣೆ ನಮ್ಮ ಹೆಮ್ಮೆ ಇದನ್ನು ನಾವೂ ಹೇಗೆ ರೂಢಿಸಿಕೊಂಡು ಬೆಳೆಸಬಹುದು ಎಂಬುದನ್ನು ಅತ್ಯದ್ಭುತವಾಗಿ ವಿವರಿಸಿದರು.
ನ್ಯೂಜರ್ಸಿ ಬೃಂದಾವನ ಕನ್ನಡ ಶಾಲೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ವರ್ಣರಂಜಿತವಾಗಿ ಮೂಡಿಬಂದವು. ಎಡಿಸನ್ ಶಾಲೆ ಮಕ್ಕಳು ಜೀವನವೇ ಬೇವು ಬೆಲ್ಲ ಎನ್ನುತ್ತಾ ಅವರ ಮನೆಗಳಲ್ಲಿ ಯುಗಾದಿ ಹೇಗೆ ಆಚರಿಸುತ್ತಾರೆ ಎಂಬುದನ್ನು ಹಾಡು, ನೃತ್ಯ, ಹಾಸ್ಯ- ಜೋತಿಷ್ಯ ಮೂಲಕ ತೋರಿಸಿದ್ದರು. ಹಿಲ್ಸ್ ಬರೋ ಶಾಲೆ ಮಕ್ಕಳು ಯುಗಾದಿಯ ಸಡಗರದ ಆಚರಣೆಯ ವಿವರಣೆಯ ಜತೆಗೆ ಸಹೋದರಿಯರು ಹಾಡಿದ ರಾಮ ನವಮಿಯನ್ನು ನೆನಪಿಸುವ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಅತ್ಯಂತ ಮಧುರವಾಗಿತ್ತು,
ಪಿಯಾನೋ ವಾದನ, ಕೀಬೋರ್ಡ್ ವಾದನ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತ್ತು. ಹೊಸ ರುಚಿಯಲ್ಲಿ ಅವಲಕ್ಕಿ ಪಾಯಸ ಎಲ್ಲರ ಬಾಯಲ್ಲಿ ನೀರೂರಿಸಿದ್ದು ಸುಳ್ಳಲ್ಲ. ಸೌತ್ ಬ್ರ®Õ… ವಿಕ್ ಶಾಲೆಯ ಮಕ್ಕಳ ಪರೋಪಕಾರಂ ಇದಂ ಶರೀರಂ ಎಂಬ ಸಂದೇಶ ಹೊತ್ತ ಗೀತರೂಪಕ “ವಿನಮ್ರ ಹಣತೆ’ ಪ್ರೇಕ್ಷಕರ ಮನಸೂರೆಗೊಳಿಸಿತು. ಇಂಗ್ಲಿಷ್ ಎಷ್ಟು ಮುಖ್ಯವೋ ಅಷ್ಟೇ ಕನ್ನಡವೂ ಮುಖ್ಯ ಎಂದ ಟಿ.ಪಿ. ಕೈಲಾಸಂ ಅವರ ಕನ್ನಡ ಪ್ರೀತಿಯನ್ನು ತೋರಿಸುವ ಕಿರುನಾಟಕವನ್ನು ಮಾಲ್ಬೊìರೋ ಶಾಲೆಯ ಪುಟಾಣಿ ಮಕ್ಕಳು ಸೊಗಸಾಗಿ ಅಭಿನಯಿಸಿ ತೋರಿಸಿದ್ದರು. ಮಕ್ಕಳ ಸಾಹಿತ್ಯ ರಚನೆಯ ಮೂಲಕ ಮಕ್ಕಳ ಮನಸ್ಸನ್ನು ಗೆದ್ದ ಎನ್. ಶ್ರೀನಿವಾಸ ಉಡುಪರ ಕುಂಭಕರ್ಣನ ನಿ¨ªೆ ಕವನವನ್ನು ನಾಟಕದ ಮೂಲಕ
ಈಸ್ಟ್‌ವಿಂಡರ್ಸ್ ಶಾಲೆಯ ಮಕ್ಕಳು ಹಾಸ್ಯ ತುಂಬಿ ಅಭಿನಯಿಸಿ ತೋರಿಸಿದ್ದು, ವಿಶೇಷವಾಗಿ ನೋಡುಗರ ಮನಸ್ಸನ್ನು ಗೆದ್ದಿತ್ತು. ಭೋ ಶಂಭೋ ಶಿವ ಶಂಭೋ ಹಾಡನ್ನು ಬೃಂದಾವನ ಯುವ ತಂಡ ಹಾಡಿದ್ದು ಅತ್ಯಂತ ಭಕ್ತಿಪೂರ್ವಕವಾಗಿತ್ತು. ಕುಟುಂಬಗಳ ನಡುವಿನ ಬಾಂಧವ್ಯ ಬೆಸೆಯುವ ಯುಗಾದಿ ಹಬ್ಬವನ್ನು ಬೃಂದಾವನ ಕನ್ನಡ ಕೂಟದ ಸದಸ್ಯರು ಎÇÉೆಲ್ಲೂ ಹಬ್ಬ ಹಬ್ಬ- ಬಂತು ಯುಗಾದಿ ಹಬ್ಬ ಹಾಡನ್ನು ಹಾಡುತ್ತಾ, ಬೃಂದಾವನ ಕನ್ನಡ ಕೂಟದ ಸುಂದರ ಕುಟುಂಬಗಳನ್ನು ಪರಿಚಯಿಸುವ ಪ್ರಯತ್ನ ವಸಂತೋತ್ಸವಕ್ಕೆ ಹೆಚ್ಚಿನ ಮೆರಗನ್ನು ನೀಡಿತ್ತು.
“ಒಂದು ಲಾಕ್ ಡೌನ್ ಕಥೆ’ ಈ ಕಿರುನಾಟಕ ಕುಟುಂಬ ಎಂಬ ಪುಟ್ಟ ಜಗತ್ತಿನಲ್ಲಿ ಲಾಕ್ ಆದಾಗ ಹೇಗೆ ಹೊಸ ಜಗತ್ತು ತೋರುತ್ತದೆ ಎಂಬ ಸತ್ಯವನ್ನು ಹಾಸ್ಯಮಯವಾಗಿ ಮನರಂಜಿಸಿದರು. “ಬಣ್ಣ…ಒಲವಿನ ಬಣ್ಣ’ ಹಾಡಿಗೆ ಚೆಲುವೆಯರ ಬಣ್ಣಬಣ್ಣದ ಸೀರೆಯ ಫ್ಯಾಶನ್ ಶೋ ಅತ್ಯಂತ ಸುಂದರವಾಗಿ ಮೂಡಿ ಬಂದಿತ್ತು. ಪ್ರಗತಿ ತಂಡದ ಅಧ್ಯಕ್ಷರಾದ ಪದ್ಮಿನಿ ಹೇಮಂತ್ ಮತ್ತು ಸತೀಶ್ ಹೊಸನಗರ ಇವರ ಕಾರ್ಯಕ್ರಮ ನಿರೂಪಣೆ ತುಂಬಾ ಚೆನ್ನಾಗಿತ್ತು. ಹೀಗೆ ಅಮೆರಿಕಾದ ನ್ಯೂಜರ್ಸಿ ಯಲ್ಲಿ ಕನ್ನಡದ ಕಂಪು – ಇಂಪಾಗಿ ಮೂಡಿತ್ತು.
- ಪೂರ್ಣಿಮಾ ರಮೇಶ್ ಭಟ್, ನ್ಯೂಜರ್ಸಿ