ಕತಾರ್ :ಭಾರತದ 75 ವರ್ಷಗಳ ಸ್ವಾತಂತ್ರ್ಯ ಉತ್ಸವ “ಆಜಾದಿ ಕಾ ಅಮೃತ್ ಮಹೋತ್ಸವ್’ ನ ಅಂಗವಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರವು ವಿಶ್ವ ಪರಿಸರ ದಿನ ಯೋಜನೆಯ ಮೂಲಕ ಕತಾರ್‌ನಾದ್ಯಂತ 75 ಗಿಡಗಳನ್ನು ನೆಡುವ ಯೋಜನೆ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ಐಸಿಸಿ ಆವರಣದಲ್ಲಿ ಮತ್ತು ವಿವಿಧ ಭಾರತೀಯ ಶಾಲೆಗಳಲ್ಲಿ ವಾರಪೂರ್ತಿ ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಂಭ್ರಮಾಚರಣೆಯ ಭಾಗವಾಗಿ ಐಸಿಸಿಯು, ಸಾರ್ವಜನಿಕ ಉದ್ಯಾನವನಗಳ ಇಲಾಖೆ, ಕತಾರ್ ಪುರಸಭೆ ಮತ್ತು ಪರಿಸರ ಮಂಡಳಿಯ ಸಹಯೋಗದೊಂದಿಗೆ ಮರ ನೆಡುವಿಕೆ ಸಮಾರಂಭವನ್ನು ಮಾಮುರಾ ಪಾರ್ಕ್‌ನಲ್ಲಿ ಜೂ. 14ರಂದು ಆಯೋಜಿಸಲಾಗಿತ್ತು.
ಕತಾರ್‌ನ ಭಾರತದ ರಾಯಭಾರಿ ದೀಪಕ್ ಮಿತ್ತಲ್, ಕಾನ್ಸುಲರ್ ಮತ್ತು ಸಮುದಾಯ ವ್ಯವಹಾರಗಳ ಮೊದಲ ಕಾರ್ಯದರ್ಶಿ ಎಸ್. ಕ್ಸೇವಿಯರ್ ಧನರಾಜ್, ಅಲ್‌ಸಾದ ಸಾರ್ವಜನಿಕ ಉದ್ಯಾನವನ ಇಲಾಖೆಯ ಸಹಾಯಕ ನಿರ್ದೇಶಕರಾದ ಮೊಹಮ್ಮದ್ ಇಬ್ರಾಹಿಂ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ದೀಪಕ್ ಮಿತ್ತಲ್ ಅವರು ಮಾತನಾಡಿ, ದೇಶಾದ್ಯಂತ ಒಂದು ಮಿಲಿಯನ್ ಸಸಿ ನೆಡುವಿಕೆ ಗುರಿಯ ಪರಿಶ್ರಮವನ್ನು ಉತ್ತೇಜಿಸಿದ ಸಾರ್ವಜನಿಕ ಉದ್ಯಾನವನ ಇಲಾಖೆ ಯನ್ನು ಅಭಿನಂದಿಸಿ, ಕತಾರಲ್ಲಿ ವಾಸಿಸುವ ಎಲ್ಲ ನಾಗರಿಕರು ಇದರ ಪ್ರಯೋಜನವನ್ನು ಪಡೆಯುತ್ತಾರೆ ಎಂದರು.
ಈ ಸಂದರ್ಭದಲ್ಲಿ ಐಸಿಸಿಯ ಅಧ್ಯಕ್ಷರಾದ ಪಿ.ಎನ್. ಬಾಬು ರಾಜನ್, ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು, ಕೃಷ್ಣ ಕುಮಾರ್ ಜಿ.ಎಸ್. ಮತ್ತು ಇತರ ವ್ಯವಸ್ಥಾಪಕ ಸಮಿತಿ ಸದಸ್ಯರಾದ ಅನಿಶ್ ಜಾರ್ಜ್ ಮ್ಯಾಥ್ಯೂ, ಅಫÕಲ್ ಅಬ್ದುಲ್ ಮಜೀದ್ ಮತ್ತು ಸಜೀವ್ ಸತ್ಯಸೀಲನ್ ಉಪಸ್ಥಿತರಿದ್ದರು.