Advertisement

ಬಸವಣ್ಣನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ: ಗಂಗಾಬಿಕ ಮಲ್ಲಿಕಾರ್ಜುನ

08:43 PM Jun 19, 2021 | Team Udayavani |

 ದುಬೈ :ಸಮಾನತೆಯ ಹರಿಕಾರ ಬಸವಣ್ಣ. ಮಹಿಳೆಯರನ್ನು ಅಸಮಾನರು ಅನ್ನುವ ಕಾಲದಲ್ಲೇ ಮಹಿಳೆಯರ ಸಮಾನತೆಯ ಸಲುವಾಗಿ ಕ್ರಾಂತಿ ಮಾಡಿದವರು ಬಸವಣ್ಣ. ನಾವೆಲ್ಲರೂ ಅವರ ತಣ್ತೀಗಳನ್ನು  ಬರಿ ಪ್ರಚಾರಕ್ಕೆ ಸೀಮಿತಗೊಳಿಸದೆ ನಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದ ಶರಣೆ ಗಂಗಾಬಿಕ ಮಲ್ಲಿಕಾರ್ಜುನ ಅವರು ಎಲ್ಲರಿಗೂ ಬಸವ ಜಯಂತಿಯ ಶುಭ ಹಾರೈಸಿದರು.

Advertisement

2020ರ ನ. 1ರಂದು ಔಪಚಾರಿಕವಾಗಿ ಪ್ರಾರಂಭವಾದ  ಜಾಗತಿಕ ಲಿಂಗಾಯತ ಮಹಾಸಭಾ – ಸಾಗರೋತ್ತರ ಘಟಕವು ಇತ್ತೀಚೆಗೆ 888ನೇ ಬಸವ ಜಯಂತಿಯನ್ನು ವಿನೂತನವಾಗಿ, ತಾತ್ತಿ$Ìಕವಾಗಿ, ಸರಳವಾಗಿ ಆನ್‌ಲೈನ್‌ ಮೂಲಕ ನಡೆಸಿ ಜಗತ್ತಿನ ಅನೇಕ ಕನ್ನಡಿಗರನ್ನು, ಬಸವ ಅನುಯಾಯಿಗಳನ್ನು ಒಟ್ಟಿಗೆ ಸೇರಿಸಿ ಸುಮಾರು 3 ತಾಸು ನಿರಂತರವಾಗಿ ಬಸವಣ್ಣನ ತಣ್ತೀಗಳನ್ನು  ನೆನಪಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಸಾಣೇಹಳ್ಳಿ  ವಚನಮೂರ್ತಿ ಶರಣ ಪಂಡಿತಾರಾಧ್ಯ ಶಿವಾಚಾರ್ಯ ಅವರು, ಬಸವಣ್ಣವರ ಬದುಕೇ ಒಂದೇ ಸಂದೇಶ ವಾಗಿದೆ ಎಂದು ಹೇಳುತ್ತಾ, ಸಾಮಾಜಿಕ ಸಂಬಂಧಗಳಲ್ಲಿ ಬಿರುಕು ಮೂಡಿಸಿದ ಶ್ರೇಷ್ಠತೆಯ ವ್ಯಸನವನ್ನು ಅಲ್ಲಗಳೆಯುತ್ತ, ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರ “ಹತ್ತಿರವಿದ್ದರು ದೂರ ನಿಲ್ಲುವೆವು’ ಹಾಗೂ ಮಾದಾರಾ ಚೆನ್ನಯ್ಯನವರ ವಚನ ಉತ್ಛರಿಸುತ್ತಾ “ನಡೆ ನುಡಿ ಸಿದ್ಧಾಂತವಾದರೆ, ಕುಲ ಹೊಲೆ, ಸೂತಕವೆಲ್ಲಿ ?’, ಹಾಗೆಯೇ ಬಸವಣ್ಣ ಪ್ರತಿಪಾದಿಸಿದ್ದ ವೈಜ್ಞಾನಿಕವಾದ ಲಿಂಗಾಯತ ಧರ್ಮ ಮತ್ತು ಆದರ್ಶವಾದ ಸಾಮಾಜಿಕ ಜೀವನದ ಕಲ್ಪನೆಯನ್ನು  12ನೇ ಶತಮಾನದಲ್ಲಿ ಮಾಡಿ ತೋರಿಸಿದರು. ಅದಕ್ಕೆ ಸಾಕ್ಷಿ  “ಅನುಭವ ಮಂಟಪ’ ಎಂದು ಹೇಳಿ ಎಲ್ಲ ಪ್ರೇಕ್ಷಕ ಶರಣ ಶರಣೆಯರ ಕಿವಿಯಲ್ಲಿ ಬಸವಣ್ಣನ ಕೀರ್ತಿ, ಮನದಲ್ಲಿ ಸಮ ಸಮಾಜದ ಮೌಲ್ಯಗಳನ್ನು  ತುಂಬಿದರು. ವಚನಗಳೇ ಲಿಂಗಾಯತರ ಸಂವಿಧಾನ. ಆ ಮೌಲ್ಯಗಳನ್ನು ಅಳವಡಿಸಿಕೊಂಡು ಮೌಡ್ಯವನ್ನು ಅಳಿಸಬೇಕೆಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಐ.ಎ.ಎಸ್‌. ಅಧಿಕಾರಿ, ಜಾಗತಿಕ ಲಿಂಗಾಯಿತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ, ಶರಣ ಶಿವಾನಂದ ಜಾಮದರ ಅವರು ಮಾತನಾಡಿ, ಮಹಾಮಾರಿ ಮಾಯವಾಗಲಿ ಅಂತ ಪ್ರಾರ್ಥನೆ ಮಾಡೋಣ. ಮುಂಬರುವ ದಿನಗಳಲ್ಲಿ ಭೌತಿಕವಾಗಿ ಬಸವ ಜಯಂತಿಯನ್ನು ಆಚರಿಸೋಣ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ – ಸಾಗರೋತ್ತರ ಘಟಕವು ಇನ್ನಷ್ಟು ಬೆಳೆಯಲಿ. ತಣ್ತೀ ಪ್ರಚಾರಕ್ಕೆ  ಪೂರಕವಾದ ಯೋಜನೆಗಳನ್ನು ಹಾಕಿಕೊಳ್ಳಿ ಎಂದು ಹೇಳಿ, ಮಾಜಿ ಮಹಾಪೌರ ಶರಣೆ ಗಂಗಾಬಿಕೆ ಮಲ್ಲಿಕಾರ್ಜುನ ಅವರ ಕೆಲಸಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರ‌ು.

Advertisement

ಚಿಂತಕರಾದ ಡಾ| ಜೆ.ಎಸ್‌. ಪಾಟೀಲ್‌, ನಟ ಲೋಹಿತಾಶ್ವ, ಸಾಹಿತಿ ಡಾ| ವೀರಣ್ಣ ರಾಜೂರು, ಪುರುಷೋತ್ತಮ ಬಿಳಿನೆಲೆ, ನಟ, ವಚನ ಗಾಯಕರಾದ ಶರತ್‌ ಲೋಹಿತಾಶ್ವ ಮೊದಲಾದವರು ಬಸವ ಜಯಂತಿ ಪ್ರಯುಕ್ತ ಕಳುಹಿಸಿರುವ  ಸಂದೇಶಗಳನ್ನು ಪ್ರಸಾರ ಮಾಡಲಾಯಿತು.

ಜಾಗತಿಕ ಲಿಂಗಾಯಿತ ಮಹಾಸಭಾದ ಸಾಗರೋತ್ತರ ಘಟಕದ ಮಸ್ಕತ್‌ ಅಧ್ಯಕ್ಷರಾದ ಪ್ರಕಾಶ್‌ ಉಳ್ಳೇಗಡ್ಡಿ  ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಘಟಕ ಹಾಕಿಕೊಂಡಿರುವ ಯೋಜನೆಗಳನ್ನು  ತಿಳಿಸಿದರು.

ಸಮಿತಿಯ ಉಪಾಧ್ಯಕ್ಷರಾದ ರಾವುಂದುರು ಶಿವಕುಮಾರ್‌ ಸಿಡ್ನಿಯಿಂದ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ಲಿಂಗದಳ್ಳಿ  ಯುಎಇಯಿಂದ, ಸಮನ್ವಯ ಮತ್ತು ಸಂವಹನ ಸಮಿತಿಯ ಭೀಮ ಹಂಗರಗೆ,  ಮಸ್ಕತ್‌ನಿಂದ, ಕಾರ್ಯದರ್ಶಿ ಸಂತೋಷ ಕೆ. ಸ್ಯಾನ್‌ಫ್ರಾನ್ಸಿಸ್ಕೋದಿಂದ ಪಾಲ್ಗೊಂಡಿದ್ದರು.

ಘಟಕದ ಲಂಡನ್‌ನ ಖಜಾಂಚಿ ಬಸವ ಪಾಟೀಲ್‌ ಅವರು ಜಾಗತಿಕ ಲಿಂಗಾಯಿತ ಮಹಾಸಭಾ – ಸಾಗರೋತ್ತರ ಘಟಕದ ಕಿರು ಪರಿಚಯ ಮಾಡಿಕೊಟ್ಟರು.

ಬೆಲ್ಜಿಯಂನ ಮಂಜುನಾಥ ವಣಗೆರೆ ವಂದಿಸಿದರು. ಬಳಿಕ ಬೆಂಗಳೂರಿನ ಆದರ್ಶ ಸುಗಮ ಸಂಗೀತ ತಂಡದಿಂದ ವಚನ ಗಾಯನ ನಡೆಯಿತು.

ಕಾರ್ಯಕ್ರಮದಲ್ಲಿ ಬಸವ ಸಮಿತಿ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ದುಬೈ, ಬಹರೈನ್‌, ವಚನ ಮಂಟಪ ವೇದಿಕೆ, ಮಸ್ಕತ್‌, ಓಮನ್‌, ಗ್ಲೋಬಲ್‌ ಬಸವ ಫೌಂಡೇಶನ್‌, ಇಟಲಿ ಕನ್ನಡ ಸಂಘ, ವಚನ ಕೂಟ, ಸಿಂಗಾಪುರ, ಸಾಗರೋತ್ತರ ಕನ್ನಡಿಗರು, ಯು.ಕೆ. ಸಂಘಟನೆ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next