Advertisement

ಸದ್ದಿಲ್ಲದೇ ಮಂಗಳಯಾನ ಮುಕ್ತಾಯ? ಭೂಮಿ ಜತೆಗಿನ ಸಂಪರ್ಕ ಬಂದ್‌

08:13 PM Oct 02, 2022 | Team Udayavani |

ನವದೆಹಲಿ: ಎಂಟು ವರ್ಷಗಳ ಹಿಂದೆ ಭೂಮಿಯಿಂದ ನಭಕ್ಕೆ ನೆಗೆದು, ಮಂಗಳನ ಸುತ್ತ ಸುತ್ತುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಾರ್ಸ್‌ ಆರ್ಬಿಟರ್‌(ಮಂಗಳಯಾನ) ನೌಕೆ ಇದೀಗ ಭೂಮಿಯೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಿಕೊಂಡಿದೆ ಎನ್ನಲಾಗಿದೆ.

Advertisement

ನೌಕೆಯಲ್ಲಿನ ಬ್ಯಾಟರಿ ಸಾಮರ್ಥ್ಯ ಸಂಪೂರ್ಣವಾಗಿ ಬರಿದಾಗಿರುವ ಹಿನ್ನೆಲೆ ಸಂಪರ್ಕ ಕಡಿತವಾಗಿದೆ ಎಂದು ಇಸ್ರೋದ ಮೂಲಗಳು ತಿಳಿಸಿವೆ.

ಮಂಗಳಯಾನ ನೌಕೆಯನ್ನು 450 ಕೋಟಿ ರೂ. ವೆಚ್ಚದಲ್ಲಿ 2013ರ ನವೆಂಬರ್‌ನಲ್ಲಿ ಉಡಾವಣೆ ಮಾಡಲಾಗಿತ್ತು. ಪಿಎಸ್‌ಎಲ್‌ವಿ-ಸಿ25 ರಾಕೆಟ್‌ ಹೊತ್ತೂಯ್ದಿದ್ದ ಈ ನೌಕೆಯನ್ನು 2014ರ ಸೆ.24ರಂದು ಮಂಗಳನ ಕಕ್ಷೆಯಲ್ಲಿ ಕೂರಿಸಲಾಗಿತ್ತು. ಗ್ರಹಣ ವೇಳೆ ಬ್ಯಾಟರಿ ಬಳಸಿಕೊಳ್ಳುತ್ತಿದ್ದ ನೌಕೆಗೆ ಒಟ್ಟು 1 ಗಂಟೆ 40 ನಿಮಿಷಗಳ ಕಾಲ ಬಳಸುವಷ್ಟು ಬ್ಯಾಟರಿ ಸಾಮರ್ಥ್ಯವಿತ್ತು. ಇದೀಗ ಅದು ಸಂಪೂರ್ಣವಾಗಿ ಬರಿದಾಗಿದೆ. ಇತ್ತೀಚೆಗೆ ಹೆಚ್ಚು ಗ್ರಹಣಗಳು ಸಂಭವಿಸಿವೆ. ಅದರಲ್ಲೂ ಒಂದು ಗ್ರಹಣವು ಏಳೂವರೆ ತಾಸುಗಳಷ್ಟು ಕಾಲ ಆವರಿಸಿತ್ತು. ಅದರಿಂದಾಗಿ ಬ್ಯಾಟರಿ ಖಾಲಿಯಾಗಿದೆ ಎಂದು ಮೂಲವು ತಿಳಿಸಿದೆ.

ಈ ಬಗ್ಗೆ ಇಸ್ರೋ ಆಗಲೀ ಅಥವಾ ಸರ್ಕಾರವಾಗಲೀ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ.

ಈ ನೌಕೆಯು ಆರು ತಿಂಗಳ ಕಾಲ ಕೆಲಸ ಮಾಡುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ಉಡಾವಣೆ ಮಾಡಲಾಗಿತ್ತಾದರೂ ಇದು ಬರೋಬ್ಬರಿ 8 ವರ್ಷಗಳ ಕಾಲ ಅತ್ಯುತು½ತವಾಗಿ ಕೆಲಸ ಮಾಡಿದೆ ಎಂದೂ ತಿಳಿಸಲಾಗಿದೆ.

Advertisement

ಏನೇನು ಕಳುಹಿಸಿಕೊಟ್ಟಿದೆ?
ಮಂಗಳಯಾನ ನೌಕೆಯಲ್ಲಿ ವಿವಿಧ ವಿದ್ಯಮಾನಗಳ ಪರೀಕ್ಷೆಗೆಂದು ಒಟ್ಟು ಐದು ರೀತಿಯ ಸಲಕರಣೆಗಳನ್ನು ಕಳುಹಿಸಿಕೊಡಲಾಗಿತ್ತು. ಇವುಗಳು ಮಂಗಳ ಗ್ರಹದ ಎರಡು ಚಂದ್ರಗಳಲ್ಲಿ ಒಂದಾದ ಡಿಮೋಸ್‌ನ ಚಿತ್ರವನ್ನು ಕಳುಹಿಸಿಕೊಟ್ಟಿದೆ. ಗ್ರಹದಲ್ಲಿ ಎಷ್ಟೋ ವರ್ಷಗಳ ಹಿಂದೆ ಇದ್ದ ಟಿಹೆìನಸ್‌ ಮಾನ್ಸ್‌ ಅಗ್ನಿಪರ್ವತ ಹಾಗೂ ಅದರಿಂದ ಆದ ಕುಳಿ, ಕಾಲುವೆಗಳ ಚಿತ್ರ, ಗ್ರಹದ ಅತಿದೊಡ್ಡ ಕಣಿವೆ ವ್ಯಾಲ್ಲಿಸ್‌ ಮರೈನರಿಸ್‌ ಚಿತ್ರಗಳನ್ನೂ ಕಳುಹಿಸಿದೆ. ಒಟ್ಟಾರೆಯಾಗಿ ಮಂಗಳನ ಸಾವಿರಕ್ಕೂ ಅಧಿಕ ಚಿತ್ರಗಳು ಈ ನೌಕೆಯಿಂದ ಸಿಕ್ಕಿದೆ.

ಮತ್ತೊಂದು ಮಂಗಳಯಾನ:
ಮಂಗಳಯಾನ ಎರಡರ ನೌಕೆಯನ್ನು ನಭಕ್ಕೆ ಕಳುಹಿಸಬೇಕೆಂದು ಇಸ್ರೋ 2016ರಲ್ಲಿಯೇ ಯೋಜನೆ ರೂಪಿಸಿತ್ತು. ಆದರೆ ಗಗನಯಾನ, ಚಂದ್ರಯಾನ-3 ಮತ್ತು ಆದಿತ್ಯಾ-ಎಲ್‌1 ಯೋಜನೆಗಳ ಹಿನ್ನೆಲೆ ಈ ಯೋಜನೆ ತಡವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next