Advertisement

Fisheries ಮತ್ಸ್ಯ ಸಂಪದ ಯೋಜನೆಯ ವಿನ್ಯಾಸ ಪರಿಷ್ಕರಣೆ: ಕೇಂದ್ರ ಮೀನುಗಾರಿಕೆ ಸಚಿವರಿಗೆ ಮನವಿ

12:40 AM Dec 23, 2023 | Team Udayavani |

ಮಂಗಳೂರು: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಆಳಸಮುದ್ರದ ಮೀನುಗಾರಿಕೆ ಗಿಲ್‌ ನೆಟ್‌ ದೋಣಿಗಳ ವಿನ್ಯಾಸದಲ್ಲಿ ಆಗಬೇಕಾದ ಬದಲಾವಣೆಗಳನ್ನು ಮುಂದಿಟ್ಟು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಕೇಂದ್ರ ಅಖಿಲ ಭಾರತ ಪರ್ಸಿನ್‌ ಮೀನುಗಾರರ ಸಂಘದ ಪದಾಧಿಕಾರಿಗಳು ಮೀನುಗಾರಿಕೆ ಸಚಿವ ಪರುಷೋತ್ತಮ್‌ ರೂಪಾಲ ಅವರಿಗೆ ಮನವಿ ಸಲ್ಲಿಸಿದರು.

Advertisement

ದೋಣಿಯ ಉದ್ದವನ್ನು 22.70 ಮೀ.ನಿಂದ 24 ಮೀ.ಗೆ, ಅಗಲವನ್ನು 6.40 ಮೀ.ನಿಂದ 7.20 ಮೀ.ಗೆ ಹೆಚ್ಚಿಸಬೇಕು, ಎಂಜಿನ್‌ ಅಶ್ವಶಕ್ತಿಯನ್ನು 200 ಎಚ್‌ಪಿಯಿಂದ 350ಕ್ಕೆ ಏರಿಸಬೇಕು, ದೋಣಿಯ ಹಿಂಭಾಗದಲ್ಲಿರುವ ಕ್ಯಾಬಿನ್‌ ಅನ್ನು ದೋಣಿಯ ಮಧ್ಯಕ್ಕೆ ಬದಲಾಯಿಸುವುದು, ಆಳ ಸಮುದ್ರದ ಮೀನುಗಾರಿಕೆ ಗಿಲ್‌ನೆಟ್‌/ಲಾಂಗ್‌ ಲೈನರ್‌ ಬೋಟ್‌ ಜತೆಗೆ ಪರ್ಸಿನ್‌ ಬೋಟ್‌ ನಿರ್ಮಾಣಕ್ಕೆ ಅನುಮತಿ ನೀಡುವುದು ಸೇರಿದಂತೆ ಮೀನುಗಾರರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಸಂಸದರ ನಿಯೋಗದ ಮನವಿಗೆ ಸ್ಪಂದಿಸಿದ ಸಚಿವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅಖೀಲ ಕರ್ನಾಟಕ ಪರ್ಸಿನ್‌ ಮೀನುಗಾರರ ಸಂಘದ ಸುನಿಲ್‌, ನವಿಲ್‌ ದಾಸ್‌, ವಿವೇಕಾನಂದ, ಲೋಕನಾಥ್‌ ಹಾಗೂ ವಿಲಿಯಂ ಫ್ರಾನ್ಸಿಸ್‌ ಅವರು ನಿಯೋಗದಲ್ಲಿದ್ದರು.

ಜಿಎಂಪಿಎಲ್‌ನಲ್ಲಿ ಉದ್ಯೋಗಕ್ಕೆ ಮನವಿ
ಗೈಲ್‌ ಮಂಗಳೂರು ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌-ಜಿಎಂಪಿಎಲ್‌ (ಹಿಂದಿನ ಜೆಬಿಎಫ್‌ ಪಿಎಲ್‌) ಕಂಪೆನಿಯಲ್ಲಿ ಎಂಎಸ್‌ಇಝಡ್‌ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟು ಸ್ಥಳಾಂತರ ಹೊಂದಿದ್ದ ಕುಟುಂಬ ಸದಸ್ಯ ರ ನೆಲೆಯಲ್ಲಿ (ಪಿಡಿಎಫ್‌) ಉದ್ಯೋಗ ಪಡೆದಿದ್ದ 115 ಮಂದಿ ಹಾಗೂ ನೇರ ನೇಮಕಾತಿಯಲ್ಲಿ ನೇಮಕಗೊಂಡ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಕೇಂದ್ರ ಪೆಟ್ರೋಲಿಯಂ
ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಎಂಎಸ್‌ಇಝಡ್‌ ಸ್ಥಾಪನೆಗೆ ಸ್ಥಳ ನೀಡಿದ್ದ ನೆಲೆಯಲ್ಲಿ ಕೆಲಸ ನೀಡಲಾಗಿದ್ದ ಎಲ್ಲ ಉದ್ಯೋಗಿಗಳಿಗೆ ಜಿಎಂಪಿಎಲ್‌ನಲ್ಲಿ ಯಾವುದೇ ಲಿಖೀತ ಪರೀಕ್ಷೆ ಹಾಗೂ ಸಂದರ್ಶನ ನಡೆಸದೆ ಉದ್ಯೋಗ ನೀಡುವುದು ಹಾಗೂ ಜೆಬಿಎಫ್‌ಪಿಎಲ್‌ನಲ್ಲಿ ನೇರ ನೇಮಕಾತಿ ಮೂಲಕ (ನಾನ್‌ ಪಿಡಿಎಫ್‌) ಉದ್ಯೋಗಿಗಳಾಗಿದ್ದ ಎಲ್ಲ ಸ್ಥಳೀಯರಿಗೂ ಖಾಯಂ ಉದ್ಯೋಗ ನೀಡುವಂತೆ ಜಿಎಂಪಿಎಲ್‌ ಆಡಳಿತ ಮಂಡಳಿಗೆ ಸೂಚಿಸುವಂತೆ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next