Advertisement

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

05:32 PM Dec 14, 2024 | Team Udayavani |

ಫ್ಲೋರಿಡಾ:ಟ್ಯಾಂಪಾ ಸಾಂಸ್ಕೃತಿಕ ವೇದಿಕೆಯ ವತಿಯಿಂದ ನ.9ರಂದು ಹರಿಕಥೆ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಈ ದಿನಗಳಲ್ಲಿ ಸಿನೆಮಾ, ಓಟಿಟಿಗಳ ಹಾವಳಿಯಿಂದ ಹಬ್ಬ, ಹರಿದಿನ, ಭಜನೆ, ಕೀರ್ತನೆ, ಹರಿಕಥೆಗಳಂತಹ ಕಾರ್ಯಕ್ರಮಗಳಿಗೆ ಜನ ಸೇರುವುದು ಕಷ್ಟ ಎನ್ನುವ ಮಾತನ್ನು ಸುಳ್ಳಾಗಿ ಸಿದ್ದು ಟ್ಯಾಂಪಾ ಮತ್ತು ಒರ್ಲ್ಯಾಂಡೊದ ಕಲಾಭಿಮಾನಿಗಳು.
ಮೇಧಾರವರ ಮಧುರ ಕಂಠದಿಂದ ಗಣೇಶ್‌ ಸ್ತುತಿಯೊಂದಿಗೆ ಕಾರ್ಯಕರ್ಮದ ಆರಂಭವಾಯಿತು. ವೇಣು ಕುಲಕರ್ಣಿಯವರು ಕಾರ್ಯಕರ್ಮಕ್ಕೆ ಎಲ್ಲರನ್ನು ಸ್ವಾಗತಿಸಿದರು.

Advertisement

ಅನಂತರ ನಮ್ಮನ್ನಗಲಿದ ದಿ|ಡಾ| ರೇಣುಕಾ ರಾಮಪ್ಪನವರಿಗೆ ಒಂದು ನಿಮಿಷದ ಮೌನಕೋರಿ ಅಗಲಿದ ಆತ್ಮಕ್ಕೆ ಚಿರಶಾಂತಿ ಪ್ರಾರ್ಥಿಸಲಾಯಿತು. ಡಾ| ರೇಣುಕಾ ರಾಮಪ್ಪ ಮತ್ತು ಕುಟುಂಬ ಕೊಡುಗೈ ದಾನಿಯೆಂದು ಹೆಸರಾಗಿದ್ದರು. ಅವರ ಸೇವೆ ಅಪಾರ. ಸದಾ ಪಾದರಸದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಹಸನ್ಮುಖದೊಂದಿಗೆ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಈ ಹರಿಕಥೆ ಕಾರ್ಯಕ್ರಮವನ್ನು ದಿ|ಡಾ|ರೇಣುಕಾ ರಾಮಪ್ಪ ಅವರ ಸ್ಮರಣಾರ್ಥ ಸಮರ್ಪಿಸಲಾಯಿತು.

ಕಲಾವಿದರಾದ ಕೀರ್ತನಕಾರ್ತಿ, ಶಾರ್ವರಿ, ಮೃದಂಗ ವಾದಕರಾಗಿ ಆದಿತ್ಯ ಶ್ರೀನಿವಾಸನ್‌, ವರ್ಧನ್‌ ಹೆಸರುಘಟ್ಟ , ತಾಳಕ್ಕಾಗಿ ಸಂಜಯ್‌ ಶ್ರೀನಿವಾಸನ್‌ ಮತ್ತು ಹಾರ್ಮೋನಿಯಂ ವಾದಕರಾಗಿ ಅರುಣ್‌ ರಾವ್‌ರನ್ನು ಅವರನ್ನು ಸಭೆಗೆ ಪರಿಚಯಿಸಲಾಯಿತು. ಮೇಘಶ್ಯಾಮ್‌ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು.

ಶಾರ್ವರಿಯವರು ಹರಿಕಥೆಯನ್ನು ತಮ್ಮ ಮಧುರ ಕಂಠಶ್ರೀಯಲ್ಲಿ ಪ್ರಾರಂಭಿಸಿ ಸಭಿಕರನ್ನೆಲ್ಲ ಮಂತ್ರಮುಗ್ಧರನ್ನಾಗಿಸಿದರು. ಎಳೆಯ ವಯಸ್ಸಿನಲ್ಲಿ ಹರಿಕಥೆಯನ್ನು ಲೀಲಾಜಾಲವಾಗಿ ಹೇಳುವುದು ಸುಲಭದ ಮಾತಲ್ಲ. ಕಿರಿಯವಳಾದರೂ ತಮ್ಮ ಕಠಿನ ಪರಿಶ್ರಮದಿಂದ ಅರಿತು, ಕಲಿತು, ಅದೆಷ್ಟು ಭಾವಪೂರ್ಣವಾಗಿ ಹಾಡಿದಳೆಂದರೆ, ಕಬ್ಬಿಣ ಸೆಳೆಯುವ ಸೂಜಿಗಲ್ಲಂತೆ ಕೇಳುಗರನ್ನು ಹೃನ್ಮನಗಳ ತನ್ನತ್ತ ಸೆಳೆದಳು. ಭಕ್ತ ಪ್ರಹ್ಲಾದ ಕೀರ್ತನೆಯ ನರಸಿಂಹ ಅವತಾರ ಭಾಗದಲ್ಲಿ, ಪ್ರಹ್ಲಾದ, ಹಿರಣ್ಯ ಕಶ್ಯಪ್‌ ಮತ್ತು ಸಾಕ್ಷಾತ್‌ ನರಸಿಂಹ ಕಣ್ಣೆದುರಿಗೆ ಬಂದಂತೆ ಭಾಸವಾಯಿತು. ಆಧುನಿಕ ಯುಗದಲ್ಲಿ ಸಹ ಕೀರ್ತನೆ/ಭಜನೆಗಳು ಜನರ ಸೇರಿಸಬಲ್ಲವೆಂಬುದಕ್ಕೆ ಸಾಕ್ಷಿಯಾಯಿತು.

ಲಯಬದ್ಧ ಮೃದಂಗ, ತಕ್ಕಂತೆ ತಾಳ ಮತ್ತು ಹಿತವಾದ ಹಾರ್ಮೋನಿಯಂ ಕಾರ್ಯಕರ್ಮದ ಕಳೆಯನ್ನು ಹೆಚ್ಚಿಸಿದವು. ಎಳೆಯ ಪ್ರತಿಭೆಗಳ ಆಹ್ವಾನಿಸಿ, ವೇದಿಕೆಯೊದಗಿಸಿಕೊಟ್ಟ ಕನ್ನಡ ಅಭಿಮಾನಿಗಳು ಅಭಿನಂದನಾರ್ಹರು. ಅರುಣ ಹಾರ್ಮೋನಿಯಂ ಸಂಯೋಜನೆ ಬಲು ಅದ್ಭುತವಾಗಿತ್ತು.

Advertisement

ಕೀರ್ತನೆ ಕೇಳುತ್ತ ಕಾರ್ಯಕ್ರಮ ಯಾವಾಗ ಮುಗಿತು ಗೊತ್ತಾಗಲಿಲ್ಲ. ಕಾರ್ಯಕ್ರಮದ ಕೊನೆಗೆ ಕೀರ್ತನೆಯ ಕಲಾವಿದರನ್ನು ಹೂಗುತ್ಛ ಮತ್ತು ಕಿರು ಕಾಣಿಕೆಯೊಂದಿಗೆ ಸಮ್ಮಾನಿಸಲಾಯಿತು. ಕೊನೆಗೆ ಚಂದ್ರಶೇಖರ್‌ ಅಡಿಗರವರ ಸವಿಯಾದ ಊಟ.

ಈ ಕಾರ್ಯಕ್ರಮಕ್ಕೆ ಯಶಸ್ವಿಯಾಗಲು ಶ್ರಮಿ ಸಿದ ಸಕಲರಿಗೂ, ಟ್ಯಾಂಪಾ ಬೇ ಸಾಂಸ್ಕೃತಿಕ ವೇದಿಕೆಯ ಎಲ್ಲ ಸ್ವಯಂಸೇವಕರಿಗೂ, ಶ್ರೀಕಾಂತ, ಚಂದ್ರಕಾಂತ, ಉಮಾ, ವಿಶ್ವನಾಥ, ಮಹೇಶ, ಸಿದ್ಧಾರ್ಥ್, ಸಂಜಯ ಕುಲಕರ್ಣಿ ಮುಂತಾದವರು ಮತ್ತು ಆಗಮಿಸಿದ ಸಕಲ ಸಭಿಕರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಯಿತು. ಇಂತಹ ಅನೇಕ ಕಾರ್ಯಕ್ರಮ ಮೂಡಿಬರಲಿ ಅದಕ್ಕೆ ಕನ್ನಡ ಅಭಿಮಾನಿಗಳ ಸಹಕಾರ ಮತ್ತು ಆಶೀರ್ವಾದ ಸದಾ ಸಿಗುತ್ತಿರಲಿ ಎಂದು ಹಾರೈಸಲಾಯಿತು.

ವರದಿ: ಸಂಕೆ ಸಂತೋಷ್‌ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next