Advertisement
ಹುಬ್ಬಳ್ಳಿ: ಸಮಾಜದಲ್ಲಿ ಸಂಪ್ರದಾಯ, ಪರಂಪರೆ, ದೇಸಿಯತೆ ಪ್ರಸರಣ ಹಾಗೂ ದೇಶಪ್ರೇಮ ಬಿತ್ತುವ ಕಾಯಕದಲ್ಲಿ ತೊಡಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ದೇಸೀ ಹಸುಗಳ ಸಂರಕ್ಷಣೆ- ಸಂವರ್ಧನೆ ನಿಟ್ಟಿನಲ್ಲಿ ರೈತರ ಮನ-ಮನೆಗಳಲ್ಲಿ ಪುಣ್ಯಕೋಟಿಯ ನಿನಾದಕ್ಕೆ ಮುಂದಾಗಿದೆ.
Related Articles
Advertisement
ಹಾಲು-ಉತ್ಪನ್ನಗಳಿಗೆ ಮಾರುಕಟ್ಟೆ: ಜೆರ್ಸಿ ಹಾಗೂ ಎಚ್‌ಎಫ್ ಆಕಳುಗಳಿಗೆ ಹೋಲಿಸಿದರೆ ದೇಸೀ ಹಸು ಗಳು ಹಾಲು ನೀಡುವಿಕೆ ಪ್ರಮಾಣ ಕಡಿಮೆ. ಇದೇ ಉದ್ದೇಶಕ್ಕೆ ರೈತರು ದೇಸೀ ಹಸುಗಳ ಬದಲು ಜೆರ್ಸಿ, ಎಚ್‌ಎಫ್‌ಗಳನ್ನು ಸಾಕುತ್ತಾರೆ. ರೈತರು ದೇಸೀ ಹಸು ಸಾಕಣೆಗೆ ಮುಂದಾದರೆ ದೇಸೀ ಹಸುಗಳ ಹಾಲು, ಗೋಮೂತ್ರ, ಸಗಣಿ ಬಳಸಿ ಮಾಡಬಹುದಾದ ವಿವಿಧ ಉತ್ಪನ್ನಗಳ ತಯಾರಿಕೆಗೆ ಅಗತ್ಯ ಕಚ್ಚಾ ಸಾಮಗ್ರಿಗಳನ್ನು ನೀಡಿ ಸಿದ್ಧ ಉತ್ಪನ್ನಗಳನ್ನು ಖರೀದಿ ಸಲು ನಿರ್ಧರಿಸಲಾಗಿದೆ. ರೈತರಿಂದ ದೇಸೀ ಹಸುಗಳ ಹಾಲು ಪ್ರತಿ ಲೀ.ಗೆ 60 ರೂ.ನಂತೆ ಮಾರಾಟವಾ ದರೂ ರೈತರಿಗೆ ಜೆರ್ಸಿ, ಎಚ್‌ಎಫ್ ಆಕಳುಗಳ ಹಾಲಿನಿಂದ ಎಷ್ಟು ಆದಾಯ ಬರುತ್ತದೆಯೋ ಅದಕ್ಕೆ ಸರಿಸಮಾನ ರೀತಿಯಲ್ಲಿ ಆದಾಯ ಬರಲಿದೆ.
ದೇಸೀ ಹಸುಗಳ ಮೂತ್ರ, ಸಗಣಿಬಳಸಿ ಗೋಆರ್ಕ, ಜೀವಾಮೃತ, ಘನಾಮೃತ, ಸೊಳ್ಳೆ ಬತ್ತಿ, ಅಗ್ನಿಹೋತ್ರ, ಹೋಮಕ್ಕೆ ಬೇಕಾಗುವ ಭರಣಿ, ಫಿನಾಯಿಲ್ ಹೀಗೆ ವಿವಿಧ ಉತ್ಪನ್ನಗಳ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ನೀಡಿ, ಸಿದ್ಧ ಉತ್ಪನ್ನ ಖರೀದಿಸುವ, ರೈತರಿಗೆ ಮಾರುಕಟ್ಟೆ ಒದಗಿಸಲು ಟ್ರಸ್ಟ್ ನಿರ್ಧರಿಸಿದೆ. ಈಗಾಗಲೇ ಕೆಲವು ರೈತರಿಂದ ದೇಸೀ ಹಸುಗಳ ಹಾಲು ಖರೀದಿ, ಹುಬ್ಬಳ್ಳಿಯಲ್ಲಿ ಅನೇಕರಿಗೆ ನೀಡಲಾಗುತ್ತಿದೆ.