Advertisement
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬುಧವಾರ ನಡೆದ ಪವಾಹ-ಬರ ಪರಿಹಾರ ಕ್ರಮಗಳು ಹಾಗೂ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂತ್ರಸ್ತರ ಹಾಗೂ ಪರಿಹಾರ ವಿತರಣೆಗೆ ಸಂಬಂಧಿಸಿದ ಪಟ್ಟಿಯನ್ನು ಜನಪ್ರತಿನಿಧಿ ಗಳಿಗೆ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಆದೇಶಿಸಿ 15 ದಿನಗಳು ಕಳೆದರೂ ಇದುವರೆಗೂ ಆ ಪಟ್ಟಿ ಕೈಸೇರದಿರುವ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಸುನಿಲ್ ಸುಬ್ರಮಣಿ ಗಮನಸೆಳೆದರು. ಒಂದು ಹಂತದಲ್ಲಿ ಸಚಿವ ದೇಶಪಾಂಡೆ ಅವರಂತೂ, ನಿಮಗೆ ಅಮಾನತು ಬೇಕೋ ಅಥವಾ ವರ್ಗಾವಣೆ ಬೇಕೋ ಎಂದು ನೇರವಾಗಿ ತಹಶೀಲ್ದಾರ್ ಗೋವಿಂದರಾಜು ಅವರನ್ನು ಪ್ರಶ್ನಿಸಿದದರು.
Related Articles
Advertisement
ಈ ಸಂದರ್ಭ ಮಾತನಾಡಿದ ದೇಶಪಾಂಡೆ ಅವರು, ವೀರಾಜಪೇಟೆ ತಹಶೀ ಲ್ದಾರರ ಬಗ್ಗೆ ಜನರ ಆಕ್ರೋಶವಿರು ವುದು ನನ್ನ ಗಮನಕ್ಕೂ ಬಂದಿದೆ. ತಾ. ಪಂ.ಸಭೆ ಗಳಿಗೂ ಹಾಜರಾಗದೆ ಉದ್ದಟತನ ಪ್ರದರ್ಶಿಸಿ ರುವ ಬಗ್ಗೆ ತಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಮುಂಜಾನೆಯೇ ದೂರು ನೀಡಿದ್ದಾರೆ. ನೀವಿನ್ನೂ ಯುವಕ. ಅದಲ್ಲದೆ ಪೊ›ಬೆಷನರಿ ಅವಧಿಯಲ್ಲಿದ್ದೀರಿ. ಜನರ ಪರವಾಗಿ ಕೆಲಸ ಮಾಡುವುದನ್ನು ಈಗಿನಿಂದಲೇ ಕಲಿತುಕೊಳ್ಳಿ. ನೀವು ಜನರಿಗೆ ಗೌರವ ನೀಡಿದರೆ ಜನರೂ ನಿಮ್ಮನ್ನು ಗೌರವಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನಿಮಗೆ ಸಸ್ಪೆಂಡ್ ಬೇಕೋ ಟ್ರಾನ್ಸ್ ಫರ್ ಬೇಕೋ ಎಂಬು ದನ್ನು ನಿರ್ಧರಿಸಿ. ನಿಮ್ಮ ಬಗ್ಗೆ ಬಂದಿರುವ ದೂರುಗಳ ಬಗ್ಗೆ ಜಿಲ್ಲಾಧಿಕಾರಿ ಯವರಿಂದಲೂ ವರದಿ ತರಿಸಿದ್ದೇನೆ ಎಂದರು.
ಸಾ.ರಾ. ಮಹೇಶರಿಂದ ಅಧಿಕಾರಿಗೆ ತರಾಟೆಈ ನಡುವೆ ಸಭೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಕೂಡಾ ಮರಿಯ ಕ್ರಿಸ್ತರಾಜು ಅವರ ವಿರುದ್ಧ ಹರಿಹಾಯ್ದರು. ಜಿಲ್ಲಾ ಉಸ್ತುವಾರಿ ಸಚಿವನಾಗಿ ತಾನು ಕರೆದ ಸಭೆಗೆ ಹಾಜರಾಗದೆ ಎಲ್ಲಿ ಹೋಗಿದ್ದಿರಿ ಎಂದು ತರಾಟೆಗೆ ತೆಗೆದುಕೊಂಡರು. ತಾನು ಸರಕಾರದ ಕಾರ್ಯದರ್ಶಿಯವರ ಸಭೆಯಲ್ಲಿ ಭಾಗವಹಿಸಿದ್ದುದಾಗಿ ಅಧಿಕಾರಿ ಸಮಜಾಯಿಷಿಕೆ ನೀಡಿದರಾದರೂ, ನೀವು ಎಲ್ಲಿಗೆ ಹೋಗಿದ್ದೀರಿ, ಏನು ಮಾಡಿದ್ದೀರಿ ಎಂಬುದರ ಬಗ್ಗೆ ವರದಿ ನೀಡುವಂತೆ ಈಗಾಗಲೇ ಸಂಬಂಧಿಸಿದವರಿಗೆ ತಿಳಿಸಿದ್ದೇನೆ ಎಂದು ಸಚಿವ ಮಹೇಶ್ ಅವರು ತಿಳಿಸಿದರು. ಇತ್ತೀಚೆಗೆ ನಡೆದ ತಾಲೂಕು ಪಂಚಾಯತ್ ಸಭೆಗೆ ಹಾಜರಾಗದ ವೀರಾಜಪೇಟೆ ತಹಶೀಲ್ದಾರರು ಹಾಗೂ ಉಸ್ತುವಾರಿ ಸಚಿವರು ಕರೆದಿದ್ದ ಸಭೆಗೆ ಹಾಜರಾಗದ ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಸಚಿವರು ಹಾಗೂ ಶಾಸಕರಿಂದ ತರಾಟೆಗೆ ಒಳಗಾದರು.