Advertisement
ಮಾನವೀಯವಾಗಿ ನೋಡಿವ್ಯಾಪಕ ಮಳೆಯಿಂದ ಕೃಷಿ ಹಾನಿ, ಮನೆಗಳಿಗೆ ಹಾನಿ, ಧರೆ ಕುಸಿತದಿಂದ ನಷ್ಟ ಸಂಭವಿಸಿದವರಿಗೆ ಕಾನೂನನ್ನು ನೋಡದೆ ಮಾನವೀಯ ನೆಲೆಯಲ್ಲಿ ಗಮನ ಹರಿಸಿ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಅಸಹಾಯಕರು, ಬಡವವರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಬೇಕು ಎಂದರು.
ಸರಕಾರಿ ಜಾರಿಗೆ ತಂದಿರುವ 94ಸಿ ಹಾಗೂ 94ಸಿಸಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದವರಿಗೆ ಸತಾಯಿಸುವುದು ಬೇಡ. ಹೊಸ ಮನೆ ಕಟ್ಟಿದ್ದಾರೆ ಎಂದು ತೊಂದರೆ ಕೊಡಬೇಡಿ. ಫಲಾನುಭವಿಗಳಿಗೆ ಹಕ್ಕುಪತ್ರದ ಜತೆಗೆ ಖಾತೆಯನ್ನೂ ನೀಡಲು ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್‌ಗೆ ಸಚಿವ ಆರ್.ವಿ. ದೇಶಪಾಂಡೆ ಸೂಚನೆ ನೀಡಿದರು.