Advertisement

CM ಕಾರ್ಯಕ್ರಮದಲ್ಲಿ ಕರ್ತವ್ಯ ಲೋಪ: ಸೆಸ್ಕ್ ಎಂಡಿ ಅಮಾನತು!

11:24 PM Jan 24, 2024 | Team Udayavani |

ಮೈಸೂರು: ಪಿರಿಯಾಪಟ್ಟಣ ತಾಲೂಕು ಮುತ್ತಿನಮುಳಸೋಗೆ ಗ್ರಾಮದಲ್ಲಿ ಆಯೋಜಿಸಿದ್ದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುವಂತೆ ನೋಡಿಕೊಳ್ಳದ ಹಾಗೂ ಸ್ಥಳದಲ್ಲಿ ಹಾಜರಿಲ್ಲದ ಸೆಸ್ಕ್ ಎಂಡಿ ಸಿ.ಎನ್.‌ ಶ್ರೀಧರ್ ಅವರನ್ನು ಅಮಾನತು ಮಾಡಲಾಗಿದೆ.

Advertisement

ಕಾರ್ಯಕ್ರಮದಲ್ಲಿ ಸ್ವಿಚ್ ಬಟನ್ ಒತ್ತುವ ಮೂಲಕ ಮೋಟರ್ ಆನ್ ಆಗುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಿಚ್ ಬಟನ್ ಒತ್ತಿದರೂ ಕಾರ್ಯನಿರ್ವಹಿಸಲಿಲ್ಲ. ಬಳಿಕ ಡಿಸಿಎಂ ಸ್ವಿಚ್ ಒತ್ತಿದರೂ ಆಗಲೂ ಕಾರ್ಯನಿರ್ವಹಿಸಲಿಲ್ಲ. ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪನವರೂ ಪ್ರಯತ್ನಿಸಿದಾಗಲೂ ಆಗಲಿಲ್ಲ. ಇದರಿಂದ ಕೆಲಕಾಲ ಮುಖ್ಯಮಂತ್ರಿ ಆದಿಯಾಗಿ ಎಲರೂ ಮುಜಗರ ಅನುಭವಿಸುವಂತಾಯಿತು.

ಕೊನೆಗೆ ಸ್ಥಳದಲ್ಲಿದ್ದ ಇಂಜಿನಿಯರ್‌ಗಳು ತಾಂತ್ರಿಕ ಸಮಸ್ಯೆ ನಿವಾರಿಸಿದ ಬಳಿಕ ಸಿಎಂ ಯೋಜನೆಗೆ ಚಾಲನೆ ನೀಡಿದರು. ಬಳಿಕ ಅಲ್ಲಿಯೇ ಇದ್ದ ಜಿಲ್ಲಾಧಿಕಾರಿಗಳಲ್ಲಿ ಅವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಘಟನೆಯಾಗಿ ನಾಲ್ಕೈದು ಗಂಟೆಯ ಹೊತ್ತಿಗೆ ಕರ್ತವ್ಯ ಲೋಪ ಹಾಗೂ ಮುಖ್ಯಮಂತ್ರಿಗಳು ಭಾಗವಹಿಸಿರುವ ಕಾರ್ಯಕ್ರಮಕ್ಕೆ ಹಾಜರಾಗದ ಸೆಸ್ಕ್ ಎಂಡಿ ವಿರುದ್ಧ ಕ್ರಮಕೈಗೊಂಡಿದ್ದು, ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಸರ್ಕಾರದ ಅದೀನ ಕಾರ್ಯದರ್ಶಿ ಅಮಾನತು ಮಾಡಿ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next