Advertisement

ಡೇರಾ ಐಟಿ ಮುಖ್ಯಸ್ಥ ಸೆರೆ; ಹನಿಪ್ರೀತ್‌ಗಾಗಿ ಬಿರುಸಿನ ಶೋಧ

03:08 PM Sep 13, 2017 | Team Udayavani |

ಸಿರ್ಸಾ : ಇಬ್ಬರು ಸಾಧ್ವಿಯರ ಮೇಲಿನ ಅತ್ಯಾಚಾರಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರು ಡೇರಾ ಸಚ್ಚಾ ಸೌಧಾದ ವಿವಾದಾತ್ಮಕ ದೇವ ಮಾನವ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ನ ವಿರುದ್ಧದ ಕಾನೂನು ಕ್ರಮಗಳು ತೀವ್ರವಾಗಿರುವ ನಡುವೆಯೇ ಹರಿಯಾಣ ಪೊಲೀಸರು ಇಂದು ಬುಧವಾರ ಡೇರಾ ಪಂಗಡದ ಐಟಿ ಮುಖ್ಯಸ್ಥನನ್ನು ಸಿರ್ಸಾದಿಂದ ಬಂಧಿಸಿದ್ದಾರೆ.

Advertisement

ಎಎನ್‌ಐ ವರದಿಯ ಪ್ರಕಾರ ಬಂಧನಕ್ಕೆ ಗುರಿಯಾಗಿರುವ ಡೇರಾ ಐಟಿ ಮುಖ್ಯಸ್ಥನನ್ನು ವಿನೀತ್‌ ಎಂದು ಗುರುತಿಸಲಾಗಿದೆ. ಡೇರಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ ಜೈಲು ಪಾಲಾದ ಬಳಿಕ ತಲೆಮರೆಸಿಕೊಂಡಿದ್ದ ಐಟಿ ಮುಖ್ಯಸ್ಥ  ವಿನೀತ್‌ ನನ್ನು ಹರಿಯಾಣ ಪೊಲೀಸರು ಇಷ್ಟು ದಿನವೂ ಶೋಧಿಸುತ್ತಿದ್ದರು. ಕೊನೆಗೂ ಆತ ಸೆರೆಯಾಗಿರುವುದು ಗಮನಾರ್ಹವಾಗಿದೆ.

ಇದೇ ವೇಳೆ ಇನ್ನೂ ತಲೆ ಮರೆಸಿಕೊಂಡಿರುವ ಡೇರಾ ಮುಖ್ಯಸ್ಥನ ದತ್ತು ಪುತ್ರಿ ಮತ್ತು ಆತನ ಸಕಲ ದುಷ್ಕೃತ್ಯಗಳಿಗೆ ನೆರವಾಗುತ್ತಿದ್ದ ಹನಿಪ್ರೀತ್‌ ಸಿಂಗ್‌ ಗಾಗಿ ಪೊಲೀಸರ ಶೋಧ ಕಾರ್ಯ ಚುರುಕಿನಿಂದ ಸಾಗಿದೆ. ಪಂಚಕುಲ ನ್ಯಾಯಾಲಯದಲ್ಲಿ 20 ವರ್ಷಗಳ ಜೈಲು ಶಿಕ್ಷೆ ತೀರ್ಪು ಪ್ರಕಟವಾದಾಗ ಕೋರ್ಟ್‌ ಆವರಣದಿಂದಲೇ ಡೇರಾ ಮುಖ್ಯಸ್ಥನ ಪಲಾಯನಕ್ಕೆ ಸಂಚು ರೂಪಿಸಿದ್ದ ಹನಿಪ್ರೀತ್‌ ಸಿಂಗ್‌ ಪೊಲೀಸರಿಗೆ ಅಂದಿನಿಂದ ಬೇಕಾದವಳಾಗಿದ್ದಾಳೆ. 

ಇದಕ್ಕೆ ಮೊದಲು ಪಂಜಾಬ್‌ ಪೊಲೀಸರು ಭಟಿಂಡಾ ಜಿಲ್ಲೆಯ ಶಲಬತ್‌ಪುರದಲ್ಲಿನ ಡೇರಾ ಸಚ್ಚಾ ಸೌಧಾ ಕೇಂದ್ರದ ಪ್ರಭಾರ ಮುಖ್ಯಸ್ಥನಾಗಿರುವ ಝೋರಾ ಸಿಂಗ್‌ನನ್ನು ಬಂಧಿಸಿರುವುದಾಗಿ ಭಟಿಂಡಾ ವಲಯದ ಐಟಿ ಎಂ ಎಸ್‌ ಛಿನ್ನ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next