Advertisement

ನಿವೇಶನ ದರ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

03:19 PM Dec 11, 2018 | Team Udayavani |

ದಾವಣಗೆರೆ: ದೊಡ್ಡಬಾತಿ ಸಮೀಪ ಖರೀದಿಸಲು ಉದ್ದೇಶಿಸಿರುವ 100 ಎಕರೆ ಜಾಗದ ದರ ಪ್ರಸ್ತಾವನೆಯನ್ನು ಒಂದು ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೊಡ್ಡಬಾತಿ ಸಮೀಪ ಖರೀದಿಸಲಾಗಿರುವ 41 ಎಕರೆ ಜಾಗಕ್ಕೆ 15 ಕೋಟಿ ಅನುದಾನ ಬಂದಿದೆ. ಇನ್ನೂ 100 ಎಕರೆಯಷ್ಟು ಜಾಗ ಖರೀದಿಸಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ
ಒಂದು ವಾರದಲ್ಲಿ ದರದ ಪ್ರಸ್ತಾವನೆಯನ್ನ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ನಗರಪಾಲಿಕೆ ಉಪ ಆಯುಕ್ತ ರವೀಂದ್ರ ಬಿ. ಮಲ್ಲಾಪುರ ಅವರಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಲಿಕ್ಕೆ ಬಂದವರಿಂದ ಅರ್ಜಿ ಪಡೆಯುವುದು ನಗರಪಾಲಿಕೆಯ ಕರ್ತವ್ಯ. ನೋಟಿμಕೇಷನ್‌ ಆದ ನಂತರವೇ ಅರ್ಜಿ ತೆಗೆದುಕೊಳ್ಳಬೇಕು ಎಂಬ ನಿಯಮವೇನು ಇಲ್ಲ, ಮಹಾನಗರ ಪಾಲಿಕೆಯಲ್ಲಿ ಅರ್ಜಿ ತೆಗೆದುಕೊಳ್ಳುತ್ತಿಲ್ಲ ಎಂದು ಅನೇಕರು ಜಿಲ್ಲಾಡಳಿತಕ್ಕೆ ಕೊಡುತ್ತಿದ್ದಾರೆ. ನಾವು ಸ್ವೀಕಾರ ಮಾಡುತ್ತಿದ್ದೇವೆ. 

ಅರ್ಜಿ ತೆಗೆದುಕೊಳ್ಳದೇ ಇರುವುದಕ್ಕೆ ನಿಮಗೇನು ಅಡ್ಡಿ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತರನ್ನ ಪ್ರಶ್ನಿಸಿದ ಜಿಲ್ಲಾಧಿಕಾರಿ, ನಿವೇಶನ ಕೋರಿ ಸಲ್ಲಿಸುವ ಅರ್ಜಿ ಸ್ವೀಕರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ದಾವಣಗೆರೆ ತಾಲೂಕಿನ ಆಲೂರು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ತಾಲೂಕು ಆಡಳಿತ ಪೊಲೀಸ್‌ ಇಲಾಖೆಯಲ್ಲಿ ದೂರು ದಾಖಲಿಸಿದ ನಂತರವೂ ಮುಂದುವರೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಗಟ್ಟಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.
 
ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಗಮನಕ್ಕೆ ಬಂದ ನಂತರ 12 ಜನರ ವಿರುದ್ಧ ದೂರು ಸಲ್ಲಿಸಲಾಗಿದೆ. ಮತ್ತೆ ಮುಂದುವರೆಸಲಾಗುತ್ತಿದೆ ಎಂದು ತಹಶೀಲ್ದಾರ್‌ ಜಿ. ಸಂತೋಷ್‌ಕುಮಾರ್‌ ತಿಳಿಸಿದರು. ಈಗಾಗಲೇ ದೂರು ನೀಡಿದ್ದರೂ ಮತ್ತೂಮ್ಮೆ ದೂರು ಸಲ್ಲಿಸಿ, ಸ್ಥಳ ತನಿಖೆ ನಡೆಸಿ,
ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಸೂಕ್ತ ದಂಡ ವಿಧಿಸಿ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಉಪಕರಣ, ಜಾಗ ವಶಕ್ಕೆ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
 
ದಾವಣಗೆರೆ ತಾಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಎಕರೆ 20 ಗುಂಟೆ ಜಾಗ ನೀಡಲಾಗಿದ್ದು, ಆಸ್ಪತ್ರೆಗೆ ತಮ್ಮ ಅಜ್ಜನ ಹೆಸರಿಡಬೇಕು ಎಂದು ಸರ್ಕಾರದ ಆದೇಶವಿದ್ದರೂ ಗ್ರಾಮ ಪಂಚಾಯತಿಯವರು ಅವಕಾಶ ನೀಡುತ್ತಿಲ್ಲ. ತಮ್ಮ ಅಜ್ಜನ ಹೆಸರನ್ನು ಆಸ್ಪತ್ರೆಗೆ ಹೆಸರಿಡಬೇಕು ಎಂದು ಕೆ.ಎಂ. ಬಣಕಾರಪ್ಪ ಮನವಿ ಮಾಡಿದರು.

ವಾಗ್ಧಾನ ನೀಡಿರುವಂತೆ ಆಸ್ಪತ್ರೆಗೆ ನೀಡಬೇಕಾಗಿರುವ 2 ಎಕರೆ 20 ಗುಂಟೆ ಜಾಗವನ್ನ ಸಂಪೂರ್ಣವಾಗಿ ನೀಡಿದರೆ ಆಸ್ಪತ್ರೆಗೆ ನಿಮ್ಮ ಅಜ್ಜನ ಹೆಸರಿಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ತಕ್ಷಣಕ್ಕೆ ಎಲ್ಲಾ ಜಾಗವನ್ನ ಬಿಟ್ಟುಕೊಡುತ್ತೇವೆ. ಆಸ್ಪತ್ರೆಗೆ ನಮ್ಮ ಅಜ್ಜನ ಹೆಸರಿಡಬೇಕು ಎಂದು ಬಣಕಾರಪ್ಪ ಕೋರಿದರು. ಕೂಡಲ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಜಿಲ್ಲಾ ಆರೋಗ್ಯಾಧಿಕಾರಿ ಡಾ| ತ್ರಿಪುಲಾಂಬಗೆ ಸೂಚಿಸಿದರು. 

Advertisement

ಒಂದು ವರ್ಷದಿಂದ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯನ್ನೇ ನಡೆಸಿಲ್ಲ. ಪಿಡಿಒ ಜಯಕುಮಾರ್‌ ಯಾವುದೇ ಮಾಹಿತಿ ನೀಡುತ್ತಿಲ್ಲ. 2-3 ಕೋಟಿ ಅವ್ಯವಹಾರ ಆಗಿದೆ ಎಂದು ಜಗಳೂರು ತಾಲೂಕಿನ ಹನುಮಂತಾಪುರ ಗ್ರಾಮ ಪಂಚಾಯತ್‌ ನ ಭರಮಸಮುದ್ರ ಗ್ರಾಮದ ಪಂಚಾಯತಿ ಸದಸ್ಯರು ದೂರು ಸಲ್ಲಿಸಿದರು. ಗ್ರಾಮ ಪಂಚಾಯತಿಯಲ್ಲಿ 2-3 ಕೋಟಿ ಹಣ ಇರುತ್ತದೆಯಾ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ ಮುಗಮ್ಮಾಗಿ ಅವ್ಯವಹಾರ ನಡೆದಿದೆ ಎಂದು ದೂರಬಾರದು. ಗ್ರಾಮ ಸಭೆ ನಡೆಸದೇ ಇರುವ ಬಗ್ಗೆ ಗಮನ ಹರಿಸುವಂತೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿಗೆ ಸೂಚಿಸಿದರು. ಜಗಳೂರು ತಾಲೂಕಿನ 14 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ. ಭರಮಸಮುದ್ರದಲ್ಲಿ ಸಮಸ್ಯೆಯಾಗಿದ್ದರೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಬ್ಯಾಂಕ್‌ ಖಾತೆ, ಆಧಾರ್‌ ನಂಬರ್‌ ಮಾಹಿತಿ ನೀಡಿದ್ದರೂ ತಮ್ಮ ಖಾತೆಗೆ ಜಮೆಯಾಗಬೇಕಿದ್ದ 13,600 ರೂಪಾಯಿ ಬರ ಪರಿಹಾರ ಅನುದಾನ ಜಮೆ ಆಗಿಲ್ಲ ಎಂದು ಜಗಳೂರು ತಾಲೂಕಿನ ಬಗ್ಗೇನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ಮನವಿ ಮಾಡಿದರು. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ
ಹೆಗಡೆ ನಗರದ ರಿಂಗ್‌ ರಸ್ತೆಯಲ್ಲಿ ಬೀದಿ ಬದಿಯಲ್ಲಿರುವ ನಿರಾಶ್ರಿತ ಕುಟುಂಬಗಳಿಗೆ ಸರ್ವೇ ನಂಬರ್‌ 144/2 ರಲ್ಲಿ ಲಭ್ಯಇರುವ 5 ಎಕರೆ ಜಾಗದಲ್ಲಿ ಶಾಶ್ವತ ಸೂರಿನ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಯವರೇ ಸೂಚಿಸಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದಾವಣಗೆರೆ
ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್‌ ಅಧ್ಯಕ್ಷ ಜೆ. ಅಮಾನುಲ್ಲಾಖಾನ್‌ ಸಲ್ಲಿಸಿದ ಮನವಿಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆ ಉಪ ಆಯುಕ್ತರಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಉಪ ಕಾರ್ಯದರ್ಶಿ ಜಿ.ಎಸ್‌. ಷಡಕ್ಷರಪ್ಪ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಜಿ. ನಜ್ಮಾ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next