Advertisement

ಕ್ರಿಯಾ ಯೋಜನೆ ತ್ವರಿತ ಜಾರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚನೆ

10:13 AM Jul 30, 2020 | mahesh |

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಲ್ಲ ನಿಗಮಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಸಚಿವರಾದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚನೆ ನೀಡಿದರು.

Advertisement

ವಿಧಾನಸೌಧದಲ್ಲಿ ಬುಧವಾರ ಕರ್ನಾಟಕ ಮಹರ್ಷಿ ವಾಲ್ಮೀಕಿ ಪ.ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಗತಿ
ಪರಿಶೀಲನಾ ಸಭೆ ನಡೆಸಿ, ಭೂ ಒಡೆತನ, ಸಮಗ್ರ ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ, ಕೊಳವೆಬಾವಿ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಸೂಕ್ಷ್ಮ ಸಾಲ (ಪ್ರೇರಣಾ) ಯೋಜನೆ, ತರಕಾರಿ, ಹಣ್ಣು- ಹಂಪಲು, ಹೈನುಗಾರಿಕೆಯಂತಹ ಕಿರು ಆರ್ಥಿಕ ಯೋಜನೆಗಳಿಗಾಗಿ ನಿಗಮಗಳಿಂದ ನೇರ ಸಾಲ ಯೋಜನೆಗೆ ಗುರಿ ನಿಗದಿಪಡಿಸ ಲಾಗಿದ್ದು, ಅದರಂತೆ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ಅರಣ್ಯ ಆಧಾರಿತ ಆದಿವಾಸಿ, ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜನಾಂಗದವರಿಗೆ ಮೈಕ್ರೋ ಕ್ರೆಡಿಟ್‌ ಯೋಜನೆಗಳಡಿ ನಿಗಮಗಳಿಗೆ ಗುರಿ ಗೊತ್ತು ಪಡಿಸಲಾಗಿದ್ದು, ಅದರಂತೆ ಸೌಲಭ್ಯ ಕಲ್ಪಿಸ ಬೇಕು. ಕೋವಿಡ್‌- 19 ಹಿನ್ನೆಲೆಯಲ್ಲಿ ಪ. ಜಾತಿ ಪಂಗಡದ ಸಮುದಾಯದವರು ತೀವ್ರ ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವಂತೆ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಬಾಕಿ ಉಳಿದಿರುವ ಕೊಳವೆ ಬಾವಿಗಳನ್ನು ತ್ವರಿತವಾಗಿ ಕೊರೆಸಿ ಫ‌ಲಾನುಭವಿಗಳಿಗೆ ನೆರ ವಾಗ ಬೇಕು. ಭೂ ಒಡೆತನ ಯೋಜನೆಯಡಿ ಆಯ್ಕೆಯಾಗಿರುವ
ಎಲ್ಲ ಪ್ರಸ್ತಾವನೆಗಳಿಗೆ ಕೂಡಲೇ ಮಂಜೂರಾತಿ ನೀಡಿ, ಅನುದಾನ ಬಿಡುಗಡೆ ಮಾಡ  ಬೇಕು. ನಿಗಮಗಳ ವ್ಯವಸ್ಥಾಪಕರು ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನೆ ನಡೆಸಬೇಕು. ಜಿಲ್ಲಾಧಿಕಾರಿಗಳೊಂದಿಗೂ ಸಮನ್ವಯ ಸಾಧಿಸಿಕೊಂಡು ಭೂ ಒಡೆತನ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸ  ಬೇಕು ಎಂದು ಸೂಚನೆ ನೀಡಿದರು.

ಎಸ್‌ಸಿಪಿ- ಟಿಎಸ್‌ಪಿ ಯೋಜನೆ ಸಲಹೆಗಾರ ಇ.ವೆಂಕಟಯ್ಯ, ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹನುಮ ನರಸಯ್ಯ, ಕರ್ನಾಟಕ
ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಮಾಯಾದೇವಿ ಗಲಗಲಿ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next