Advertisement

ಆರಂಭಿಕ ಚಿಕಿತ್ಸೆಯಿಂದ ಖಿನ್ನತೆ ನಿವಾರಣೆ: ಡಾ|ಪಿ.ವಿ. ಭಂಡಾರಿ

03:55 AM Jul 03, 2017 | Team Udayavani |

ಮಂಗಳೂರು: ಖಿನ್ನತೆ ಒಂದು ಕಾಯಿಲೆ. ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಸಂಪೂರ್ಣ ತಡೆಯಲು ಸಾಧ್ಯವಿದೆ ಎಂದು ಉಡುಪಿ ಡಾ| ಎ.ವಿ. ಬಾಳಿಗಾ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಶನ್‌ನ ನಿರ್ದೇಶಕ ಮತ್ತು ಕನ್ಸಲ್ಟೆಂಟ್‌ ಸೈಕಿಯಾಟ್ರಿಸ್ಟ್‌ ಡಾ| ಪಿ. ವಿ. ಭಂಡಾರಿ ಹೇಳಿದರು. ಮಂಗಳೂರು ಮ್ಯಾನೇಜ್‌ಮೆಂಟ್‌ ಅಸೋಸಿಯೇಶನ್‌ ಮತ್ತು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಶನಿವಾರ ಮುಖ್ಯ ಅತಿಥಿಯಾಗಿದ್ದರು.

Advertisement

ದಿನನಿತ್ಯ ವ್ಯಾಯಾಮ, ದೈಹಿಕವಾಗಿ ಚಟುವಟಿಕೆಯಿಂದಿರುವುದು, ಒತ್ತಡದ ಕೆಲಸಗಳಿಂದ ದೀರ್ಘ‌ ಬಿಡುವು ಪಡೆದುಕೊಳ್ಳುವುದು, ಸರಿಯಾಗಿ ನಿದ್ದೆ ಮಾಡುವುದರಿಂದ ಖನ್ನತೆಯನ್ನು ಆದಷ್ಟು ಕಡಿಮೆ ಮಾಡಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು. ಮಂಗಳೂರು ಮ್ಯಾನೇಜ್‌ಮೆಂಟ್‌ ಅಸೋಸಿಯೇಶನ್‌ನ ಅಧ್ಯಕ್ಷ ಎಂ. ಆರ್‌. ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜೆ. ಎಚ್‌. ಜಿ. ಅಂಚನ್‌, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ | ಪ್ರಶಾಂತ್‌ ಮಾರ್ಲ ಮೊದಲಾದವರು ಉಪಸ್ಥಿತರಿದ್ದರು. ಎ.ಜೆ. ಆಸ್ಪತ್ರೆಯ ನಿರ್ದೇಶಕಿ ಡಾ| ಅಮಿತಾ ಮಾರ್ಲ ಸ್ವಾಗತಿಸಿದರು. ಎಂಎಂಎ ಸದಸ್ಯ ಕೆ. ರಮೇಶ್‌ ರಾವ್‌ ವಂದಿಸಿದರು. ಸುಪ್ರೀತಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next