Advertisement

ದುಶ್ಚಟಗಳಿಂದ ಖಿನ್ನತೆ ಬಳುವಳಿ

06:26 PM Mar 07, 2021 | Team Udayavani |

ಹುಬ್ಬಳ್ಳಿ: ದುಶ್ಚಟಗಳಿಂದ ತಾತ್ಕಾಲಿಕ ಪರಿಹಾರ ಸಿಗುತ್ತದೆ. ಅಲ್ಲದೆ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತದೆ. ಯುವಜನಾಂಗ ಇವುಗಳಿಂದ ದೂರವಿರಬೇಕು ಎಂದು ಧಾರವಾಡದ ಡಿಮ್ಹಾನ್ಸ್‌ ನಿರ್ದೇಶಕ ಡಾ|ಮಹೇಶ ದೇಸಾಯಿ ಹೇಳಿದರು. ಇಲ್ಲಿಯ ವಿದ್ಯಾನಗರದ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್‌.ಎಸ್‌. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಾಮಾನ್ಯವಾಗಿ ಖನ್ನತೆಗೊಳಗಾದಾಗ ಬಹುತೇಕ ಯುವಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಇಲ್ಲವೇ ಮಾದಕ ದ್ರವ್ಯಗಳ ಸೇವನೆ ಅಥವಾ ಮದ್ಯಪಾನ, ಧೂಮ್ರಪಾನ ಮುಂತಾದ ದುಶ್ಚಟಗಳನ್ನು ಬೆಳೆಸಿಕೊಳ್ಳುತ್ತಾರೆ. ಖನ್ನತೆಗೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಕಡಿಮೆ. ಮೇಲಾಗಿ ಮಾನಸಿಕ ಅಸ್ವಸ್ಥ ಪ್ರಕರಣಗಳಲ್ಲಿ ಶೇ.50 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ಮುಂದೆ ಅದು ಅವರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ.

ಇದರಿಂದ ಜೀವನದಲ್ಲಿ ನಿರಾಸಕ್ತಿ, ಶಿಕ್ಷಣ ಮೊಟಕುಗೊಳಿಸುವುದು, ವಿವಾಹ ವಿಚ್ಛೇದನ ಕೊನೆಗೆ ಆತ್ಮಹತ್ಯೆಯಲ್ಲಿ ಅಂತ್ಯಗೊಳ್ಳುತ್ತದೆ. ಕಾರಣ ಖಿನ್ನತೆಗೊಳಗಾಗದೇ ಮಾನಸಿಕ ಸ್ವಾಸ್ಥÂ ಕಾಪಾಡಿಕೊಳ್ಳಬೇಕು ಎಂದರು. ಧಾರವಾಡದ ಡಿಮ್ಹಾನ್ಸ್‌ ಸಹಾಯಕ ಪ್ರಾಧ್ಯಾಪಕಿ ಡಾ| ಸಾಹಿತ್ಯಾ ಬಿ.ಆರ್‌. ಮಾತನಾಡಿ, ಕೋವಿಡ್‌ ನಂತರದ ಅವ  ಧಿಯಲ್ಲಿ ಯುವಜನರು ಸಹಜ ಜೀವನಕ್ಕೆ ಮರಳಿದ್ದು, ಇನ್ನು ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎಂದರು.

ತರಂಗಿಣಿ ಕುದರಿ ಪ್ರಾರ್ಥಿಸಿದರು. ಕಾಲೇಜಿನ ಮನೋಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಎಸ್‌.ಜೆ. ಹಾನಗಲ್‌ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ರೂಪಾ ಎಸ್‌. ಉಗ್ರಾಣಕರ ಪರಿಚಯಿಸಿದರು. ಯು.ಎಂ. ನಿತೀಶ ನಿರೂಪಿಸಿದರು. ಮೈಥಿಲಿ ಎನ್‌. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next