Advertisement

ಕಡಿಮೆ ಅಂಕ ಬಂದದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

12:31 PM Jun 09, 2018 | Team Udayavani |

ನಾಶಿಕ್‌ : ಹತ್ತನೇ ತರಗತಿಯ ಪರೀಕ್ಷೆಯಲ್ಲಿ ತನಗೆ ಸಿಕ್ಕಿದ ಅಂಕಗಳಿಂದ ನಿರಾಶಳಾದ ನಗರದ 16 ವರ್ಷ ಪ್ರಾಯದ ವಿದ್ಯಾರ್ಥಿನಿ, ಸಾಕ್ಷಿ ಏಕನಾಥ್‌ ಬೆಂಡ್‌ಕುಳೆ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಮಹಾರಾಷ್ಟ್ರಮಂಡಳಿಯ 10ನೇ ತರಗತಿ ಪರೀಕ್ಷಾ ಫ‌ಲಿತಾಂಶಗಳು ಪ್ರಕಟಗೊಂಡ ಕೆಲವೇ ತಾಸುಗಳಲ್ಲಿ ಸಾಕ್ಷಿ ತನ್ನ ಮನೆಯಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಸಾಕ್ಷಿ ತನಗೆ ಶೇ.80 ಅಂಕ ಬಂದೀತೆಂಬ ನಿರೀಕ್ಷೆಯಲ್ಲಿದ್ದಳು; ಆದರೆ ಬಂದದ್ದು ಶೇ.56 ಅಂಕ. ಇದರಿಂದ ನಿರಾಶಳಾದ ಆಕೆ ಆತ್ಮಹತ್ಯೆಗೆ ಮುಂದಾದಳು. ಆಕೆಯ ಮನೆಯವರಿಗೆ ಇದರಿಂದ ತೀವ್ರ ಆಘಾತ ಉಂಟಾಗಿದೆ. ಸಾಕ್ಷಿಗೆ ಶೇ.56 ಅಂಕ ಬಂದುದಕ್ಕೆ ಮನೆಯಲ್ಲಿ ಯಾರೂ ನಿರಾಶೆ ತೋರಿರಲಿಲ್ಲ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next