Advertisement

ನರೇಶ್‌ ಗೋಯೆಲ್‌ ವಿದೇಶ ಪ್ರಯಾಣಕ್ಕೆ ಕೊಕ್‌

12:48 AM Jul 10, 2019 | mahesh |

ಹೊಸದಿಲ್ಲಿ: ಜೆಟ್‌ ಏರ್‌ವೇಸ್‌ನ ಮಾಜಿ ಮುಖ್ಯಸ್ಥ ನರೇಶ್‌ ಗೋಯೆಲ್‌ ವಿದೇಶ ಪ್ರಯಾಣಕ್ಕೆ ಕೋರ್ಟ್‌ ತಡೆ ಹಾಕಿದೆ. ಕೇಂದ್ರ ಸರಕಾರ ಹೊರಡಿಸಿರುವ ಲುಕ್‌ಔಟ್‌ ನೋಟಿಸ್‌ ಅನ್ನು ವಜಾಗೊಳಿಸುವಂತೆ ನರೇಶ್‌ ಕೋರ್ಟ್‌ ಮೊರೆ ಹೋಗಿದ್ದರು. ಈ ಸಂಬಂಧ ದಿಲ್ಲಿ ಹೈಕೋರ್ಟ್‌ ವಿಚಾರಣೆ ನಡೆಸಿ, ವಿದೇಶಕ್ಕೆ ತೆರಳಬೇಕೆಂದಾದರೆ 18 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡಿ ತೆರಳಬಹುದು ಎಂದಿದೆ. ವಿಚಾರಣೆಯನ್ನು ಆ.23 ಕ್ಕೆ ಮುಂದೂಡಿದೆ.

Advertisement

ಮೇ 25 ರಂದು ಜೆಟ್‌ ಏರ್‌ವೇಸ್‌ಗೆ ಸಂಭಾವ್ಯ ಹೂಡಿಕೆ ದಾರರೊಂದಿಗೆ ಮಾತನಾಡಲು ವಿದೇಶಕ್ಕೆ ತೆರಳಲು ಅಣಿ ಯಾಗಿದ್ದೆ. ಆದರೆ ವಿಮಾನದಿಂದ ನನ್ನನ್ನು ಮತ್ತು ನನ್ನ ಪತ್ನಿಯನ್ನು ಕೆಳಗಿಳಿಸಿದರು. ಇದು ನನ್ನ ಮೂಲಭೂತ ಹಕ್ಕಿನ ಉಲ್ಲಂಘನೆ. ನನ್ನ ವಿರುದ್ಧ ಹೊರಡಿಸಿದ ಲುಕ್‌ಔಟ್‌ ನೋಟಿಸ್‌ನ ಪ್ರತಿಯನ್ನೂ ನೀಡಲಿಲ್ಲ ಎಂದು ನರೇಶ್‌ ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ಸುರೇಶ್‌ ಕೈತ್‌, “ನೀವು ವಿದೇಶಕ್ಕೆ ತೆರಳಬೇಕೆಂದಿದ್ದರೆ ಸಾಲದ ಮೊತ್ತ 18 ಸಾವಿರ ಕೋಟಿ ರೂ. ಜಮೆ ಮಾಡಿ ಎಂದಿದ್ದಾರೆ. ಅಲ್ಲದೆ, ಹೂಡಿಕೆದಾರರೊಂದಿಗೆ ಫೋನ್‌ ಮತ್ತು ಇತರ ಡಿಜಿಟಲ್‌ ವಿಧಾನದಲ್ಲೂ ಮಾತುಕತೆ ನಡೆಸಬಹುದು’ ಎಂದು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next