Advertisement

ಹಣ ಇಡಿ, ಪೆನ್ಷನ್ ಪಡಿ

12:16 PM Jun 12, 2017 | Harsha Rao |

ನೋಟ್‌ ಬ್ಯಾನ್‌ ಬಿಸಿ ಹಿರಿಯ ನಾಗರೀಕರನ್ನು ಬಿಟ್ಟಿಲ್ಲ. ಇವರ ಆರ್ಥಿಕ ಆದಾಯಕ್ಕೆ ಸಹಕಾರಿಯಾಗುವ
ಹಿತದೃಷ್ಟಿಯಿಂದ ‘ಪ್ರಧಾನ ಮಂತ್ರಿ ವಯೋ ವಂದನಾ ಯೋಜನೆ’ ರೂಪಿಸಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ
ಜೀವ ವಿಮಾ ನಿಗಮ ದ(ಎಲ್.ಐ.ಸಿ) ಮೂಲಕ ಈ ಯೋಜನೆಯನ್ನು ಜೂನ್‌ 4ನೇ ರಿಂದ ಜಾರಿಗೊಳಿಸಲಾಗಿದೆ.

Advertisement

ಒಂದು ವರ್ಷದ ಅವಧಿಗೆ ಅಂದರೆ 3ನೇ ಮೇ 2018ರ ವರೆಗೆ ಈ ಯೋಜನೆಯಲ್ಲಿ ಏಕ ಕಂತಿನ ಮೂಲಕ ಹಣ ಪಾವತಿಸಿ ಪಿಂಚಣಿಯನ್ನು ಪಡೆಯಬಹುದು.

– ವಯೋಮಿತಿ- 60ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಯೋಜನೆಗೆ ಅರ್ಹರು.
– ಏಕ ಕಂತಿನಲ್ಲಿ ಪಾವತಿಸಿ ಪ್ರತಿ ತಿಂಗಳು, ತ್ತೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಿಂಚಣಿಯನ್ನು
ತಮ್ಮ ಇಚ್ಛಾನುಸಾರ ಪಡೆಯಬಹುದು.

ಶೇಕಡಾವಾರು ಪಡೆಯುವ ಪಿಂಚಣಿದರ:
ವಾರ್ಷಿಕ ಶೇ.8.3,
ಅರ್ಧವಾರ್ಷಿಕ ಶೇ.8.13,
ತ್ತೈಮಾಸಿಕ ಶೇ.8.05 ಹಾಗೂ
ಮಾಸಿಕ ಶೇ.8ರ
–  ದರದಲ್ಲಿ ಪಿಂಚಣಿಯು ದೊರೆಯುತ್ತದೆ.

ಪಿಂಚಣಿ ಎಷ್ಟು ಸಿಗುತ್ತದೆ?
– ಮಾಸಿಕ ಕನಿಷ್ಠ ರೂ.1000 ಗರಿಷ್ಠ ರೂ.5000
– ತ್ತೈಮಾಸಿಕ ಕನಿಷ್ಠ ರೂ.3000 ಗರಿಷ್ಠ ರೂ.15,00
– ಅರ್ಧವಾರ್ಷಿಕ ಕನಿಷ್ಠ ರೂ.6,000 ಗರಿಷ್ಠ ರೂ.30,000
– ವಾರ್ಷಿಕ ಕನಿಷ್ಠ ರೂ.12,000 ಗರಿಷ್ಠ ರೂ.60,000

Advertisement

ಎಷ್ಟು ಹೂಡಿಕೆ ಮಾಡಬಹುದು?
– ಕನಿಷ್ಠ ಹೂಡಿಕೆ ರೂ.1,50,000
– ಗರಿಷ್ಠ ಹೂಡಿಕೆ ರೂ.7.50,000
– ಪಾಲಿಸಿಯ ಅವಧಿ 10ವರ್ಷಗಳಾಗಿದೆ.

ಸಾಲವೂ ಉಂಟು
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೂರು ವರ್ಷಗಳ ನಂತರ ಶೇ.75ರಷ್ಟು ಮೊತ್ತವನ್ನು ಸಾಲವಾಗಿ
ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಕೇಂದ್ರ ಸರ್ಕಾರವು ಸೇವಾ ತೆರಿಗೆಯಿಂದ ವಿನಾಯಿತಿ ನೀಡಿರುವುದು ಗಮನಾರ್ಹ ಸಂಗತಿ. ಏಕ ಕಂತಿನಲ್ಲಿ ಪಾವತಿಸಿದ ನಂತರ ತಮ್ಮ ಇಚ್ಚಾನುಸಾರ ಪಿಂಚಣಿಯನ್ನು ತಮ್ಮ ಖಾತೆಗೆ ಜಮೆಯಾಗುತ್ತದೆ. ಕೇಂದ್ರ ಸರ್ಕಾರದ ಪ್ರಯೋಜಿತ ಯೋಜನೆಯಾಗಿದೆ. ಜೊತೆಗೆ ಸಬ್ಸಿಡಿ ದರದಲ್ಲಿ ಬಡ್ಡಿ ನೀಡುವ ಕಾರಣ ಎಲ್.ಐ.ಸಿ.ಪ್ರತಿನಿಧಿಗಳಿಗೆ ಇದರಿಂದ ಲಾಭವೇನೂ ಇಲ್ಲ. ಅವರು ಈ ಯೋಜನೆಯಲ್ಲಿ ತೊಡಗಿಸುವವರಿಗೆ ಸೇವೆ ಎಂದು ತಿಳಿದು ನೆರವಾಗುತ್ತಿದ್ದಾರೆ.

ಹಾಗಾಗಿ ಹಣ ತೊಡಗಿಸುವವರು ತಮಗೆ ಪರಿಚಯವಿರುವ ಪ್ರತಿನಿಧಿಗಳನ್ನು ಸಂಪರ್ಕಿಸಿ ಈ ಯೋಜನೆಯಲ್ಲಿ ಹಣ ತೊಡಗಿಸಬಹುದು.

– ಜೆ.ಸಿ.ಜಾಧವ

Advertisement

Udayavani is now on Telegram. Click here to join our channel and stay updated with the latest news.

Next