ಕೋಲಾರ: ತಾಯಂದಿರು ಸಾಲ ಮರುಪಾವತಿಯಲ್ಲಿ ತೋರುತ್ತಿರುವ ಪ್ರಾಮಾಣಿಕತೆಯಿಂದಲೇ ಡಿಸಿಸಿ ಬ್ಯಾಂಕ್ ರಾಜ್ಯಮಟ್ಟದ ಗೌರವಕ್ಕೆ ಪಾತ್ರವಾಗಿದ್ದು, ಮಹಿಳೆಯರು ತಮ್ಮ ಉಳಿತಾಯ ಹಣವನ್ನು ಇಲ್ಲೇ ಠೇವಣಿ ಇಡುವ ಮೂಲಕ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ತಾಲೂಕಿನಕ್ಯಾಲನೂರು ರೇಷ್ಮೆಬೆಳೆಗಾರರ ಹಾಗೂ ರೈತ ಸೇವಾ ಸಹಕಾರದಿಂದ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ, ಸಾಲ ವಿತರಿಸಿ ಮಾತನಾಡಿದರು. ಡಿಸಿಸಿ ಬ್ಯಾಂಕಿನಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸಾಲ ಸಿಗುತ್ತದೆ, ಇದಕ್ಕೆ ಅವರಲ್ಲಿನ ಪ್ರಾಮಾಣಿಕತೆ, ಸಾಲ ಪಡೆಯಲು ತೋರುವ ಉತ್ಸಾಹವನ್ನೇ ಸಾಲ ಮರುಪಾವತಿಯಲ್ಲಿ ತೋರುತ್ತಿರುವುದರಿಂದ ಬ್ಯಾಂಕ್ ಉನ್ನತಿ ಸಾಸಲುಕಾರಣ ಎಂದರು. ತಾಯಂದಿರೇ ಶಕ್ತಿ: ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಬ್ಯಾಂಕನ್ನು ದೇವಾಲಯ ಎಂದು ತಿಳಿದು ಅತ್ಯಂತ ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿರುವ ಮಹಿಳೆಯರೇ ಬ್ಯಾಂಕಿಗೆ ಶಕ್ತಿಯಾಗಿದ್ದಾರೆ ಎಂದರು.
ಮಹಿಳೆಯರಿಗೆ ಅತಿ ಹೆಚ್ಚು ಸಾಲ ನೀಡಿದ ರಾಜ್ಯದ ಮೊದಲ ಬ್ಯಾಂಕ್ ನಮ್ಮದಾಗಿದೆ. ಇದಕ್ಕೆ ನಿಮ್ಮಲ್ಲಿನ ಸಾಲ ಮರು ಪಾವತಿಯಲ್ಲಿನ ಕಾಳಜಿಯೇ ಕಾರಣ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಸಾಲ ನೀಡುವ ಆಶಯತನಗಿದೆ. ನೀವು ನಿಮ್ಮ ಉಳಿತಾಯವನ್ನು ಡಿಸಿಸಿ ಬ್ಯಾಂಕಿನಲ್ಲೇ ಇಟ್ಟು ಶಕ್ತಿ ತುಂಬಿದರೆ ಅದರಿಂದ ನಿಮಗೆ ಪ್ರಯೋಜನವಾಗಲಿದೆ. ಸತ್ತು ಹೋಗಿದ್ದ ಬ್ಯಾಂಕಿಗೆ ಮರು ಜೀವ ನೀಡಿ ಇಷ್ಟು ಎತ್ತರಕ್ಕೆ ತಂದಿದ್ದೇವೆ. ಈ ಗೌರವ ಉಳಿಯಲು ಹಗಲಿರಳು ಶ್ರಮಿಸುತ್ತಿದ್ದೇವೆ. ಮಹಿಳೆಯರು ನಮ್ಮ ಈ ಕಾರ್ಯಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು. ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಕಳೆದ 10 ವರ್ಷಗಳ ಹಿಂದೆತಾನು ಜಿಪಂ ಸದಸ್ಯನಾಗಿದ್ದಾಗ ಮಾಡಿದ್ದ ಅಭಿವೃದ್ಧಿ ಬಿಟ್ಟರೆ ನಂತರ ಏನೂ ಸಾಧನೆಯಾಗಿಲ್ಲ. ಇದೀಗ ಶಾಸಕರು ಮನಸು ಮಾಡಿದ್ದಾರೆ. ಕೋವಿಡ್ ನಡುವೆಯೂ ಅಭಿವೃದ್ಧಿಗೆ ಶ್ರೀಕಾರ ಹಾಕಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ಸಂಕಷ್ಟದಲ್ಲಿದ್ದಾಗ ಕೈಹಿಡಿಯದವರು ಈಗ ಏನೇನೋ ಮಾತನಾಡುತ್ತಾರೆ. ಆಗ ಮಹಿಳೆಯರು, ರೈತರು ಶೂನ್ಯಬಡ್ಡಿ,ಕಡಿಮೆ ಬಡ್ಡಿ ಸಾಲ, ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾದಾಗ ಇವರೆಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.
ನಮ್ಮ ಮಂಡಳಿ ಕಾರಣ: ನಿರ್ದೇಶಕ ಕೆ.ವಿ.ದಯಾನಂದ್, ಸೊಸೈಟಿ ಗಳು ದಿವಾಳಿಯಾಗಿ ಪಡಿತರ ವಿತರಣೆಗೆ ಸೀಮಿತವಾಗಿ ದ್ದವು. ಆದರೆ ಇಂದು ಒಂ ದೊಂದು ಸೊಸೈಟಿ 20 ಕೋಟಿಗೂ ಅಧಿಕ ಸಾಲ ವಿತರಿಸುವ ಶಕ್ತಿ ಪಡೆದುಕೊಂಡಿದೆ. ಇದಕ್ಕೆ ನಮ್ಮ ಆಡಳಿತ ಮಂಡಳಿಯೇಕಾರಣ ಎಂದರು.
ಸೊಸೈಟಿಆಡಳಿತಮಂಡಳಿ ಕೇವಲ ಸಾಲಕ್ಕೆ ಬ್ಯಾಂಕಿಗೆಬಾರದಿರಿ.ನಿಮ್ಮಎಲ್ಲಾನಿರ್ದೇಶಕರ ಉಳಿತಾಯ ಖಾತೆ ಡಿಸಿಸಿ ಬ್ಯಾಂಕಿನಲ್ಲೇ ತೆರೆಯಿರಿ.ಇಲ್ಲವಾದಲ್ಲಿಮುಂದಿನದಿನಗಳಲ್ಲಿ ಸಾಲ ಸಿಗೋದಿಲ್ಲ ಎಂದು ಎಚ್ಚರಿಸಿದರು. ಕ್ಯಾಲನೂರು ಎಸ್‌ಎಫ್‌ಸಿಎಸ್ ಅಧ್ಯಕ್ಷ ರಾಮಾಂಜಿನಪ್ಪ, ನಿರ್ದೇಶಕರಾದಆಂಜಿನಪ್ಪ, ಪ್ರಕಾಶ್, ವೆಂಕಟೇಶ್, ಈರಪ್ಪ, ಚನ್ನಸಂದ್ರ ಪಿಳ್ಳಪ್ಪ, ಮುನೇಗೌಡ, ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸಪ್ಪ, ಸೊಸೈಟಿ ಸಿಇಒ ನವೀನ್ ಮತ್ತಿತರರಿದ್ದರು.