Advertisement

ಏರ್‌ಮನ್‌ಗಳ ನಿರ್ಗಮನ ಪಥ ಸಂಚಲನ 

05:17 PM Jun 17, 2018 | Team Udayavani |

ಬೆಳಗಾವಿ: ಕಲಿಕೆ ನಿರಂತರ ಪ್ರಕ್ರಿಯೆ. ತರಬೇತಿಯ ಸಮಯದಲ್ಲಿ ಪ್ರತಿಯೊಬ್ಬರೂ ವೃತ್ತಿಪರ ಕೌಶಲ ಬೆಳೆಸಿಕೊಂಡು ಅದರ ದುಪಯೋಗ ಪಡೆದುಕೊಳ್ಳಬೇಕು ಎಂದು ಏರ್‌ ವೈಸ್‌ ಮಾರ್ಷಲ್‌ ಎಸ್‌.ಪಿ. ಧಾರಕರ ಹೇಳಿದರು. ಇಲ್ಲಿಯ ಸಾಂಬ್ರಾ ಭಾರತೀಯ ವಾಯುಪಡೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಕರ್ತವ್ಯಕ್ಕೆ ತೆರಳುತ್ತಿರುವ 3106 ಏರ್‌ಮನ್‌ ಗಳ ನಿರ್ಗಮನ ಪಥ ಸಂಚಲನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಭಾರತೀಯ ವಾಯುಪಡೆಯಲ್ಲಿ ಅರ್ಹತೆಯ ಆಧಾರದ ಮೇಲೆ ವಿಪುಲ ಅವಕಾಶಗಳಿವೆ. ಇದರ ಮಾಹಿತಿ ಪಡೆದುಕೊಂಡು ಅಂತಹ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಬೇಕು ಎಂದರು.

Advertisement

ಭಾರತೀಯ ವಾಯುಪಡೆ ತರಬೇತಿ ಕೇಂದ್ರದಲ್ಲಿ ನೀವು ಪಡೆದುಕೊಂಡಿರುವ ತರಬೇತಿ ವ್ಯರ್ಥವಾಗಬಾರದು. ಬದಲಾಗಿ ನಿಮ್ಮ ಅಮೂಲ್ಯ ಸೇವೆ ದೇಶಕ್ಕೆ ದೊರೆಯಬೇಕು. ಇಲ್ಲಿ ಪಡೆದಿರುವ ತರಬೇತಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡು ಈ ಕೇಂದ್ರದ ಘನತೆ ಎತ್ತಿಹಿಡಿಯಬೇಕು ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ತರಬೇತಿಯ ಸಮಯದಲ್ಲಿ ಉತ್ತಮ ಸಾಧನೆ ತೋರಿದ ಏರ್‌ಮನ್‌ಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಏರ್‌ ಕಮಾಂಡರ್‌ ಅರುಣ ಭಾಸ್ಕರ ಗುಪ್ತಾ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next