ಬೆಳ್ಮಣ್: ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆ ಗಳ ಸಹಯೋಗದಲ್ಲಿ ವಿಶೇಷ ಕೃಷಿ ಅಭಿಯಾನ ರವಿವಾರ ಮುಂಡ್ಕೂರು ದುರ್ಗಾಪರಮೇಶ್ವರೀ ದೇಗುಲದ ಸಭಾಂಗಣದಲ್ಲಿ ನಡೆಯಿತು.
ಈ ವಿನೂತನ ಕಾರ್ಯಕ್ರಮ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಎಂಬ ಧ್ಯೇಯ ವಾಕ್ಯದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾ^ಟಿಸಿದ ಕಾರ್ಕಳ ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ ಮಾತನಾಡಿ, ಕೃಷಿಗೆ ಸಂಬಂಧಿಸಿದ ಇಲಾಖೆಯಿಂದ ರೈತರಿಗೆ ಉಪಯುಕ್ತ ಮಾಹಿತಿ ದೊರೆತಾಗ ಅದರ ಸದುಪಯೋಗ ಪಡೆದು ಕೊಳ್ಳುವಂತಾಗಬೇಕೆಂದರು.
ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶುಭಾ ಪಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಪ್ರಗತಿಪರ ಕೃಷಿಕರಾದ ರಾಧಾ ಕಿಣಿ, ಜಯ ಕೊಟ್ಯಾನ್ ಹಾಗೂ ರೈತ ಶಕ್ತಿ ಗುಂಪು ಬೊರ್ಗಗಲ್‌ಗುಡ್ಡೆ ಇವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭ ಕೃಷಿ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ಮಿನಿಟ್ರಾಕ್ಟರ್ ಮತ್ತು ಟಿಲ್ಲರ್‌ನ್ನು ನೀಡಲಾಯಿತು. ಬ್ರಹ್ಮಾವರ ಕೃಷಿ ಸಂಶೋಧನ ಕೇಂದ್ರದ ವಿಜ್ಞಾನಿ ಡಾ.ಧನಂಜಯ ಸಹಾಯಕ ಕೃಷಿ ನಿರ್ದೇಶಕ ಜಯಪ್ರಕಾಶ್ ರೈತರಿಗೆ ಸೂಕ್ತ ಮಾಹಿತಿ ನೀಡಿದರು.
ಬೆಳ್ಮಣ್ ತಾ.ಪಂ. ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಇನ್ನಾ ಪಂ. ಉಪಾಧ್ಯಕ್ಷ ಕುಶಾ ಆರ್. ಮೂಲ್ಯ, ಸಹಾಯಕ ತೋಟಗಾರಿಕ ನಿರ್ದೇಶಕ ಶ್ರೀನಿವಾಸ್, ಕೃಷಿ ಸಹಾಯಕ ಅಧಿ ಕಾರಿ ಮಧುರಾ, ರಾಧಾಕೃಷ್ಣ ಶೆಟ್ಟಿ,ರಮೇಶ್ ಉಳ್ಳಗಡ್ಡೆ, ಆತ್ಮ ಯೋಜನಾ ಕಾರಿ ಚೈತ್ರಾ, ಉಮಾ ಎಳ್ಳಾರೆ ಅರಣ್ಯ ಇಲಾಖೆಯ ಅ ಧಿಕಾರಿ ಪುಟ್ಟಣ್ಣ, ಕೃಷಿ ಇಲಾಖೆಯ ಅನುಗಾರ ಪ್ರಭಾಕರ್ ಶೆಟ್ಟಿ ಮುಂಡ್ಕೂರು, ಪ್ರಗತಿಪರ ಕೃಷಿಕ ಉಪೇಂದ್ರ ನಾಯಕ್ ಮತ್ತಿತರಿದ್ದರು. ರಮೇಶ್ ಉಳ್ಳಗಡ್ಡೆ ಸ್ವಾಗತಿಸಿ, ರೇಷ್ಮೆ ಇಲಾಖಾ ಧಿಕಾರಿ ಹನುಮಂತಪ್ಪ ಕೋರೆ ಕಾರ್ಯಕ್ರಮ ನಿರೂಪಿಸಿ, ರಾಧಾಕೃಷ್ಣ ವಂದಿಸಿದರು.