ಮಾಲೂರು: ಸಾರ್ವಜನಿಕರು ಮತ್ತು ರೈತರಿಗೆ ನೇರವಾಗಿ ನೆರವಾಗಬೇಕಾಗಿರುವ ಇಲಾಖೆಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. ಪಟ್ಟಣದ ಬೆಸ್ಕಾಂನ ವಿಭಾಗೀಯ ಕಚೇರಿ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಸಾಮಾನ್ಯ ವರ್ಗ ಹಾಗೂ ರೈತರಿಗೆ ಪ್ರತಿನಿತ್ಯ ಒಂದಲ್ಲ ಒಂದು ವಿಷಯವಾಗಿ ತೀರಾ ಅಗತ್ಯವಾಗಿರುವ ಕಂದಾಯ, ಪೊಲೀಸ್, ಹಾಗೂ ಬೆಸ್ಕಾಂ ಅಧಿಕಾರಿಗಳು ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು. ರೈತರು ಮತ್ತು ಸಾರ್ವಜನಿಕರು ತಮ್ಮ ಇಲಾಖೆ ಕೆಲಸ ಕಾರ್ಯಗಳಿಗೆ ಬಂದ ಕೂಡಲೇ ಪ್ರಾಮಾಣಿಕವಾಗಿ ಸ್ಪಂದಿಸುವಂತೆ ತಿಳಿಸಿದರು.
ಸೇವೆಗೆ ಅನುಕೂಲವಾಗಿದೆ: ಕೆಲವು ತುರ್ತು ಸಂದರ್ಭಗಳಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಅಡಚಣೆಯಾಗಿ ಅನೇಕ ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದರೂ ಪ್ರಯೋ ಜನವಾಗದ ಪರಿಸ್ಥಿತಿಯಿದೆ. ಹೀಗಾಗಿ ತಾವೇ ದುರಸ್ತಿ ಕಾರ್ಯಗಳಿಗೆ ಮುಂದಾಗಿ ಪ್ರಾಣ ಹಾನಿ ಮಾಡಿಕೊಂಡಿರುವ ನಿದರ್ಶನಗಳಿವೆ. ಇಂತಹ ಅನಾಹುತ ತಪ್ಪಿಸುವ ಉದ್ದೇಶದಿಂದ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.
ತಾಲೂಕಿನ ಅನೇಕ ಜನರಿಗೆ ಗೊತ್ತಿರುವ ಹಳೆ ಕೆಇಬಿ ಕಚೇರಿಯಾಗಿರುವ ಸ್ಥಳದಲ್ಲಿ ಬೆಸ್ಕಾಂ ಉತ್ತಮ ಕಟ್ಟಡ ನಿರ್ಮಿಸಿದ್ದು ಸಾರ್ವಜನಿಕ ಸೇವೆಗೆ ಅನುಕೂಲಕರವಾಗಲಿದೆ ಎಂದು ತಿಳಿಸಿದರು. ಇಲಾಖೆ ಅಭಿವೃದ್ಧಿಗಾಗಿ ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಅನ್ವರ್ ಪಾಷಾ ಅವರು ನೀಡಿರುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟು ಅನುಮೋದನೆ ಪಡೆಯಲಾಗಿದೆ. ಕುಡಿಯನೂರು ಮತ್ತು ತೊರ‌್ಲಕ್ಕಿ ಉಪಕೇಂದ್ರಗಳ ನಿರ್ಮಿಸಲು ಮುಂದಾಗಿದೆ.
ಕುಡಿಯನೂರು ಗ್ರಾಮದಲ್ಲಿ ಸ್ಥಳ ಗುರುತಿಸುವ ಕಾರ್ಯವಾಗಿದ್ದು ತೊರ‌್ಲಕ್ಕಿಯಲ್ಲಿ ಮುಂದಿನ 15 ದಿನಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ ಎಂದರು. ಮಾಸ್ತಿಯಲ್ಲಿ ವಿದ್ಯುತ್ ಅಡಚಣೆ ಇರುವ ಬಗ್ಗೆ ರೈತರು ತಿಳಿಸಿದ್ದು ಅ ಭಾಗದಲ್ಲಿ ಅಗತ್ಯವಾಗಿರುವ ಪರಿವರ್ತಕ ಅಳವಡಿಸಿದ್ದಲ್ಲಿ ಮಾಸ್ತಿ ಹೋಬಳಿ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
ಈ ವೇಳೆ ಪುರಸಭಾ ಅಧ್ಯಕ್ಷ ಸಿ.ಪಿ.ನಾಗರಾಜು, ಸಹಾಯಕ ಲೆಕ್ಕಾಧಿಕಾರಿ ಬಾಲಾಜಿ ಸಿಂಗ್, ಸಹಾಯಕ ಎಂಜಿನಿಯರ್ ದಿವ್ಯಾ, ಗಂಗಾಧರ್, ಪುರಸಭಾ ಸದಸ್ಯರಾದ ಹನುಮಂñರೆಡ್ಡಿ, ಸಿ.ಪಿ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.