Advertisement

ಬಸ್‌ ಸೇವೆ ಪುನಾರಂಭಕ್ಕೆ ಇಲಾಖೆ ಸಿದ್ಧತೆ

03:51 PM May 18, 2020 | Suhan S |

ಗದಗ: ಕೋವಿಡ್ ತಡೆಗಾಗಿ ನಾಲ್ಕನೇ ಹಂತದಲ್ಲಿ ಲಾಕ್‌ಡೌನ್‌ ಸಡಿಲಗೊಳಿಸುವ ನಿರೀಕ್ಷೆಯಲ್ಲಿದ್ದ ವಾಯವ್ಯ ರಸ್ತೆ ಸಾರಿಗೆ ನಿಗಮದ ಗದಗ ವಿಭಾಗೀಯ ಅಧಿಕಾರಿಗಳು ಬಸ್‌ ಸೇವೆ ಪುನಾರಂಭಿಸಲು ಸಿದ್ಧತೆ ಕೈಗೊಂಡಿದ್ದು, ನಿಗಮದ ಆದೇಶಕ್ಕಾಗಿ ಕಾಯುತ್ತಿದ್ದಾರೆ.

Advertisement

ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಸಾರಿಗೆ ಬಸ್‌ಗಳು ರಸ್ತೆಗಿಳಿದಿಲ್ಲ. ಆದರೆ, ಇತ್ತೀಚೆಗೆ ಮೂರನೇ ಹಂತದ ಲಾಕ್‌ ಡೌನ್‌ನಲ್ಲಿ ವಿವಿಧ ಉದ್ಯಮ ಮತ್ತಿತರೆ ವಲಯಗಳಿಗೆ ಸಡಿಲಿಕೆ ನೀಡಿತ್ತು. ಹೀಗಾಗಿ ರವಿವಾರ ಮೂರನೇ ಹಂತದ ಲಾಕ್‌ಡೌನ್‌ ಮುಕ್ತಾಯಗೊಂಡಿದ್ದು, ನಾಲ್ಕನೇ ಹಂತದಲ್ಲಿ ಗ್ರೀನ್‌ ಹಾಗೂ ನೇರಳ ವಲಯದಲ್ಲಿರುವ ಜಿಲ್ಲೆ, ತಾಲೂಕುಗಳಲ್ಲಿ ಸಾರಿಗೆ ಬಸ್‌ಗಳ ಸಂಚಾರಕ್ಕೆ ಅವಕಾಶ ದೊರೆಯಬಹುದು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಯಾವುದೇ ಕ್ಷಣದಲ್ಲಿ ಆದೇಶ ಬಂದರೂ, ತಕ್ಷಣ ಅನುಷ್ಠಾನಕ್ಕೆ ತರಲು ಸ್ಥಳೀಯ ಅಧಿ ಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದರು. ಜಿಲ್ಲೆಯ ಒಟ್ಟು 7 ಘಟಕಗಳಿಂದ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟು 136 ಬಸ್‌ ಬಿಡಲು ಚಿಂತನೆ ನಡೆಸಿದ್ದರು. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರದಡಿ ಒಂದು ಬಸ್‌ ನಲ್ಲಿ 28 ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲು ನಿರ್ಧರಿಸಿದ್ದರು. ಅದರಂತೆ ಇಲ್ಲಿನ ಮುಳಗುಂದ ನಾಕಾ ಸಮೀಪದ ಡಿಪೋದಲ್ಲಿ ಗದಗ ಡಿಪೋದಿಂದ ಕಾರ್ಯಾಚರಣೆ ನಡೆಸುವ ಬಸ್‌ಗಳನ್ನು ಸ್ಯಾನಿಟೈಸರ್‌ ನಿಂದ ಶುಚಿಗೊಳಿಸಲಾಯಿತು. ಜೊತೆಗೆ ಪ್ರಯಾಣಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೀಟ್‌ಗಳಿಗೆ ಗುರುತು ಮಾಡಲಾಯಿತು. ಅದರಂತೆ ಹೊಸ ಬಸ್‌ ನಿಲ್ದಾಣವನ್ನು ನಗರಸಭೆ ಸಿಬ್ಬಂದಿ ಸ್ವಚ್ಛತೆಯಲ್ಲಿ ತೊಡಗಿದ್ದರು.

ಆದರೆ, ಲಾಕ್‌ಡೌನ್‌ 4.0 ಘೊಷಣೆಯಾದ ಬಳಿಕ ಜಿಲ್ಲೆಯಲ್ಲಿ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಕುರಿತಂತೆ ರಾತ್ರಿ 9 ಗಂಟೆವರೆಗೂ ಯಾವುದೇ ಆದೇಶ. ಸರ್ಕಾರದ ಸೂಚನೆಗೆ ಕಾಯುತ್ತಿರುವುದಾಗಿ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next