Advertisement
ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ವರ್ಗಾವಣೆ ವೇಳಾಪಟ್ಟಿಗೆ ಸರಕಾರದಿಂದ ಈಗಾಗಲೇ ಅನುಮೋದನೆ ದೊರೆತಿದೆ. ವೇಳಾಪಟ್ಟಿಯನುಸಾರ ವರ್ಗಾವಣೆ ನಡೆಸುವ ಸಂಬಂಧ ಸರಕಾರದಿಂದ ಅಧಿಕೃತ ಆದೇಶ ಹೊರಬೀಳಬೇಕಿದೆ. ಕೌನ್ಸೆಲಿಂಗ್ ಸೇರಿದಂತೆ ಬಹುತೇಕ ಪ್ರಕ್ರಿಯೆಗಳು ಆನ್‌ಲೈನ್ ಮೂಲಕವೇ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಶಾಲಾ ಶಿಕ್ಷಕರ ವರ್ಗಾವಣೆ ಹಿನ್ನೆಲೆಯಲ್ಲಿ ಶಿಕ್ಷಕರ ಸೇವಾ ಮಾಹಿತಿ ತಿದ್ದುಪಡಿಗೆ ಉಪ ನಿರ್ದೇಶಕರ ಹಂತದಲ್ಲಿ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಹಂತದ ಕಚೇರಿಗಳಲ್ಲಿರುವ ಶಿಕ್ಷಕರ ಮಾಹಿತಿ ತಿದ್ದುಪಡಿ ಜವಾಬ್ದಾರಿಯನ್ನು ಡಿಡಿಒ ಅವರಿಗೆ ವಹಿಸಲಾಗಿದೆ. ಶಿಕ್ಷಕರ ಸೇವಾ ಮಾಹಿತಿಯಲ್ಲಿ ತಪ್ಪುಗಳಿ ರುವ ಬಗ್ಗೆ ಅಥವಾ ಆ ಕಾರಣದಿಂದ ವರ್ಗಾವಣೆ ಅಥವಾ ಇತರ ಸೇವಾ ಸೌಲಭ್ಯದಿಂದ ಶಿಕ್ಷಕರು ವಂಚಿತರಾಗಿರುವ ಬಗ್ಗೆ ದೂರು ಬಂದರೆ, ಸಂಬಂಧಪಟ್ಟ ಉಪನಿರ್ದೇಶಕರು ಹಾಗೂ ಡಿಡಿಒಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.