Advertisement

ಕೋವಿಡ್ ಸಂಕಷ್ಟದಲ್ಲೂ ಲೋಕೋಪಯೋಗಿ ಇಲಾಖೆ ಶೇ.99 ರಷ್ಟು ಸಾಧನೆ : ಕಾರಜೋಳ

01:46 PM Jun 05, 2021 | Team Udayavani |

ಬೆಂಗಳೂರು :  ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಲೋಕೋಪಯೋಗಿ ಇಲಾಖೆಯು ಅತ್ತ್ಯುತ್ತಮ ವಾಗಿ ಕಾರ್ಯನಿರ್ವಹಿಸಿದ್ದು, 2019-20‌ಸಾಲಿನಲ್ಲಿ ರೂ. 9033 ಕೋಟಿರೂ ಅನುದಾನದಲ್ಲಿ ರೂ. 8788 ಕೋಟಿ ಆರ್ಥಿಕ ಪ್ರಗತಿ (ಶೇ.97%) 2020-21 ಸಾಲಿನಲ್ಲಿ ರೂ. 10893 ಕೋಟಿ ಅನುದಾನದಲ್ಲಿ ರೂ.10743 ಕೋಟಿ ಆರ್ಥಿಕ ಪ್ರಗತಿ (ಶೇ99%) ಸಾಧಿಸಿದೆ ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

Advertisement

ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಯೋಜನೆಗಳಡಿ ಒಟ್ಟಾರೆ 12125 ಕಿಮೀ ರಸ್ತೆ ಅಭಿವೃದ್ಧಿಗೆ ರೂ12122 ಕೋಟಿಗಳ ವೆಚ್ಚ ಮಾಡಲಾಗಿದೆ. 2961 ಕಿಮೀ. ರಾಜ್ಯ ಹೆದ್ದಾರಿ ಮತ್ತು9164 ಕಿಮೀ. ಜಿಲ್ಲಾ ಮುಖ್ಯ ರಸ್ತೆ ಮತ್ತು 621 ಸೇತುವೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ.

48 ನ್ಯಾಯಾಲಯ ಹಾಗೂ ನ್ಯಾಯಾಧೀಶರ ವಸತಿ ಗೃಹಗಳ ಕಾಮಗಾರಿಗಳು ಹಾಗೂ 15 POCSO ನ್ಯಾಯಾಲಯಗಳ ಕಟ್ಟಡಗಳನ್ನು ರೂ 255 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಗುಣಮಟ್ಟದ 3668 ಕಿಮೀ ಕಾಂಕ್ರೀಟ್‌ ರಸ್ತೆಗಳನ್ನು ರೂ 2779 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಎಸ್‌ಡಿಪಿ ಯೋಜನೆಯಡಿ 609 ಕಿಮೀ ರಸ್ತೆ ಅಭಿವೃದ್ಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ 933 ಕಿಮೀ ರಸ್ತೆ ಅಭಿವೃದ್ಧಿಯನ್ನು ರೂ 302 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಆಗಸ್ಟ್‌ 2019ರ ಪ್ರವಾಹ ಪರಿಹಾರ ಕಾಮಗಾರಿಗಳ ಅನುಷ್ಠಾನ.ರೂ.500.00 ಕೋಟಿ ಮೊತ್ತದಲ್ಲಿ 1850 ಕಾಮಗಾರಿಗಳು ಪೂರ್ಣಗೊಂಡಿವೆ. 2020ರಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ಥಿಗಾಗಿ ರೂ.615 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, 1553 ಕಾಮಗಾರಿಗಳ ಅನುಷ್ಠಾನ ಕೈಗೊಳ್ಳಲಾಗಿದ್ದು, 384 ಕಾಮಗಾರಿಗಳು ಪೂರ್ಣಗೊಂಡಿವೆ.

ಎಸ್‌ಹೆಚ್‌ಡಿಪಿ-ಫೇಸ್-4‌, ಹಂತ-1ರಲ್ಲಿ ರೂ. 4500 ಕೋಟಿ ಮೊತ್ತದಲ್ಲಿ 3500 ಕಿಮೀ ರಸ್ತೆಗಳ ಅಭಿವೃದ್ಧಿ ಕೈಗೊಂಡಿದ್ದು, 1739 ಕಿಮೀ ಅಭಿವೃದ್ಧಿಯನ್ನು ರೂ.2140 ಕೋಟಿ ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಳಿಸಲಾಗಿದೆ.

Advertisement

ಕೆಶಿಪ್‌-3ರಡಿ ಎಡಿಬಿ-2ರಡಿ ರೂ.5334 ಕೋಟಿ ಮೊತ್ತದಲ್ಲಿ 418 ಕಿ ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಚಾಲನೆ ನೀಡಿದ್ದು, 126 ಕಿಮೀ ಅಭಿವೃದ್ಧಿ ಪೂರ್ಣಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ.

ಕೆಆರ್‌ಡಿಸಿಎಲ್‌ ವತಿಯಿಂದ ಬೆಂಗಳೂರು ಸುತ್ತಮುತ್ತಲಿನ 155 ಕಿಮೀ ರಸ್ತೆಯನ್ನು ರೂ.2095 ಕೋಟಿ ಅಂದಾಜು ಮೊತ್ತದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ ಹಾಗೂ ರಾಜ್ಯವ್ಯಾಪಿ ರೂ.1395 ಕೋಟಿ ಮೊತ್ತದಲ್ಲಿ 215 ಸೇತುವೆಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, 123 ಸೇತುವೆಗಳನ್ನು ಪೂರ್ಣಗೊಳಿಸಲಾಗಿದೆ.

ಕೇಂದ್ರ ಸರ್ಕಾರದ ಸಹಯೋಗದಲ್ಲಿ ರೂ.4762 ಕೋಟಿ ಮೊತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನಗೊಳಿಸಲಾಗುತ್ತಿದೆ. ಕಳೆದ 2 ವರ್ಷಗಳಲ್ಲಿ 399 ಕಿಮೀ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯನ್ನು ರೂ. 2484 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.

ಸಿಗಂಧೂರು ಸೇತುವೆ ರೂ.482.84 ಕೋಟಿ ರೂಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಎನ್‌ಹೆಚ್‌ಎಐ ವತಿಯಿಂದ ಬೆಂಗಳೂರು-ಮೈಸೂರು, ತುಮಕೂರು-ಶಿವಮೊಗ್ಗ ಮತ್ತು ಬಳ್ಳಾರಿ-ಹಿರಿಯೂರು ಚತುಷ್ಪಥ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ‌. ಬೆಂಗಳೂರು-ಚೆನ್ಯೆ ಎಕ್ಸ್‌ಪ್ರೆಸ್‌ ವೇ ಹೆದ್ದಾರಿ ಕಾಮಗಾರಿಯನ್ನು ಸಹ ಪ್ರಾರಂಭಿಸಲಾಗಿದೆ.

ಎನ್‌ಹೆಚ್‌ಎಐ ವತಿಯಿಂದ 1980ಕಿಮೀ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯನ್ನು ರೂ. 35280 ಕೋಟಿ ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದೆ. ರಸ್ತೆ, ಯೋಜನೆ ಮತ್ತು ಆಸ್ತಿ ನಿರ್ವಹಣೆ ಕೇಂದ್ರ (PRAMC) ವತಿಯಿಂದ 419 ರಸ್ತೆ ಸುರಕ್ಷತೆ ಹಾಗೂ “ಕಪ್ಪುಸ್ಥಳ” ನಿವಾರಣೆ ಕಾಮಗಾರಿಗಳ ಒಟ್ಟು ರೂ.433 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನ ಪೂರ್ಣಗೊಳಿಸಲಾಗಿದೆ.

ಮೂಲಭೂತ ಸೌಕರ್ಯ ಇಲಾಖೆಯ ಸಹಯೋಗದಲ್ಲಿ ರೂ. 17.00 ಕೋಟಿ ವೆಚ್ಚದಲ್ಲಿ ಬೀದರ್‌ ವಿಮಾನ ನಿಲ್ದಾಣ Terminal building ನಿರ್ಮಾಣ ಮಾಡಿದ್ದು, ವಿಮಾನ ನಿಲ್ದಾಣದ ಕಾರ್ಯಾರಂಭವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ಏರ್‌ಬಸ್‌-320 ವಿಮಾನಗಳ ಹಾರಾಟಕ್ಕೆ ರೂ.384.00 ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಫೇಸ್‌-1ರ ಕಾಮಗಾರಿ ಪ್ರಗತಿಯಲ್ಲಿದೆ, ಫೇಸ್-2ರ ಕಟ್ಟಡ ಕಾಮಗಾರಿಗೆ ಗುತ್ತಿಗೆದಾರನ್ನು ನೇಮಕ ಮಾಡಲಾಗಿದೆ.

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯನ್ನು ಒಟ್ಟು ರೂ.220.00 ಕೋಟಿ ಮೊತ್ತದಲ್ಲಿ ಕೈಗೊಳ್ಳಲು ಅನುಮೋನೆಯಾಗಿದ್ದು, ಫೇಸ್‌-1ರ ಕಾಮಗಾರಿಯ ಒಟ್ಟು 85.00 ಕೋಟಿ ರೂಗಳ ಮೊತ್ತದ ಕಾಮಗಾರಿಯು ಪ್ರಗತಿಯಲ್ಲಿದೆ. ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆಯಲ್ಲಿ ಫೇಸ್-2‌ ಟರ್ಮಿನಲ್‌ ಕಟ್ಟಡ ಡಿ.ಪಿ.ಆರ್. ಕಾಮಗಾರಿಯ ಅಂದಾಜು ಮೊತ್ತದ ರೂ.88.52 ಕೋಟಿ ಮೊತ್ತದ ಪರಿಶೀಲನೆಯ ಹಂತದಲ್ಲಿರುತ್ತದೆ.

ನಬಾರ್ಡ್‌ ಸಹಯೋಗದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ 3243 ಶಾಲಾ ಕೊಠಡಿಗಳ ಪುನರ್‌ ನಿರ್ಮಾಣ ಕಾಮಗಾರಿಯು 718.65ಕೋಟಿ ರೂ ಮೊತ್ತಕ್ಕೆ ಕೈಗೆತ್ತಿಕೊಂಡಿದ್ದು, 1692 ಕಾಮಗಾರಿಗಳು ಪೂರ್ಣಗೊಂಡಿವೆ, 350.00 ಕೋಟಿ ರೂಗಳು ವೆಚ್ಚವಾಗಿರುತ್ತದೆ.

ನಬಾರ್ಡ್‌ ಸಹಯೋಗದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 842 ಅಂಗನವಾಡಿ ಶಾಲಾ ಕೊಠಡಿಗಳ ಪುನರ್‌ ನಿರ್ಮಾಣವನ್ನು 137.78ಕೋಟಿ ರೂ ಮೊತ್ತಕ್ಕೆ ಕೈಗೆತ್ತಿಕೊಂಡಿದ್ದು, 189 ಕಾಮಗಾರಿಗಳು ಪೂರ್ಣಗೊಂಡಿದ್ದು, ರೂ. 36 ಕೋಟಿ ವೆಚ್ಚವಾಗಿರುತ್ತದೆ.

ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿ 50 ಅಂತಸ್ತುಗಳ ಅವಳಿ ಗೋಪುರ ಕಛೇರಿ ಕಟ್ಟಡ ನಿರ್ಮಾಣವನ್ನು ಎನ್‌ಬಿಸಿಸಿ, ನವದೆಹಲಿ ಇವರೊಂದಿಗೆ ಪಿಪಿಪಿ ಮಾದರಿಯಡಿಯಲ್ಲಿ ರೂ.1251 ಕೋಟಿ ಮೊತ್ತದಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ.
ನವದೆಹಲಿಯಲ್ಲಿ ಕರ್ನಾಟಕ ಭವನ-1ರ ನಿರ್ಮಾಣವನ್ನು ರೂ.120.00 ಕೋಟಿ ಪರಿಷ್ಕೃತ ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ರಸ್ತೆಗಳ ಉನ್ನತೀಕರಣ

15 ವರ್ಷಗಳ ಅವಧಿಯ ನಂತರ ವೈಜ್ಞಾನಿಕವಾಗಿ ರಸ್ತೆಗಳ ಉನ್ನತೀಕರಣ ಮಾಡಲಾಗಿದೆ. 9601 ಕಿಮೀ ರಾಜ್ಯ ಹೆದ್ದಾರಿ ಮತ್ತು 15510 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳ ಉನ್ನತೀಕರಣಗೊಳಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.

ಎಸ್‌ಹೆಚ್‌ಡಿಪಿ ಫೇಸ್‌-4ರಡಿ ಘಟ್ಟ-2ರಡಿ 2720 ಕಿಮೀ ಕೋರ್‌ರೋಡ್‌ ರಸ್ತೆಗಳ ಅಭಿವೃದ್ಧಿಪಡಿಸಲು ಅಂದಾಜು ರೂ. 3500 ಕೋಟಿ ಮೊತ್ತಕ್ಕೆ ಯೋಜನೆ ತಯಾರಿಸಲಾಗಿದೆ. ಕೆಶಿಪ್‌ ಅಡಿಯಲ್ಲಿ ಪ್ರಗತಿಯಲ್ಲಿರುವ 418 ಕಿಮೀ ಹೆದ್ದಾರಿ ಅಭಿವೃದ್ಧಿ ಅನುಷ್ಟಾನ. ನಗರಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಕೆಆರ್‌ಡಿಸಿಎಲ್‌ ಮೂಲಕ ಬೆಂಗಳೂರಿನ 12 high density corridor ರಸ್ತೆಗಳ 191ಕಿಮೀ ಅಭಿವೃದ್ಧಿಯನ್ನು ರೂ. 788 ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗಿದೆ.

ಎನ್‌ಹೆಚ್‌ಎಐ ಮತ್ತು ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಹಯೋಗದೊಂದಿಗೆ ಬೆಳಗಾವಿ ನಗರದ 69ಕಿಮೀ ಮತ್ತು ರಾಯಚೂರು ನಗರ ರಿಂಗ್‌ ರಸ್ತೆ ಉದ್ದ 14.50ಕಿಮೀ ನಿರ್ಮಾಣ‌ ಮಾಡಲಾಗಿದೆ. ಬೆಂಗಳೂರಿನ ವಸಂತ ನಗರದಲ್ಲಿ ಸುಸಜ್ಜಿತ 77 ವಸತಿ ಗೃಹಗಳ (ಸಮುಚ್ಛಯ) ನಿರ್ಮಾಣವನ್ನು ರೂ.117 ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣೆ ಕೇಂದ್ರ (PRAMC)ವತಿಯಿಂದ ವೈಜ್ಞಾನಿಕ ಸಂಚಾರ ನಿರ್ವಹಣೆ ವ್ಯವಸ್ಥೆಯಡಿ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅತ್ಯಾಧುನಿಕ ಸಂಚಾರ ವ್ಯವಸ್ಥೆ, ಇಂಟಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ ಮತ್ತು ಸೇಪ್ಟಿ ಸಲ್ಯೂಷನ್‌ ಅನ್ನು ಪ್ರಾಯೋಗಿಕವಾಗಿ ಶಿವಮೊಗ್ಗ-ಸವಳಂಗ-ಶಿಕಾರಿಪುರ-ಶಿರಾಳಕೊಪ್ಪ ಮತ್ತು ಹಾಸನ-ರಾಮನಾಥಪುರ-ಪಿರಿಯಾಪಟ್ಟಣ ರಸ್ತೆಗಳಲ್ಲಿ ರೂ.18 ಕೋಟಿ ವೆಚ್ಚದಲ್ಲಿ ಅನುಷ್ಠಾನ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಮರ್ಪಕ ರಸ್ತೆ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಕಾಲುಸಂಕಗಳನ್ನು ನಿರ್ಮಿಸುವ “ಗ್ರಾಮಭಂದು” ಸೇತುವೆ ಯೋಜನೆ ಅನುಷ್ಠಾನಗೊಳಿಸಲಾಗಿದೆ.

ಬೆಂಗಳೂರು ಸುತ್ತಲಿನ Satellite Town Ring road ರಸ್ತೆಯ ಡಾಬಸಪೇಟೆ-ದೇವನಹಳ್ಳಿ- ಹೊಸಕೋಟೆ- ತಮಿಳನಾಡು(101ಕಿಮೀ) ಗಡಿ ವರೆಗಿನ ಅಭಿವೃದ್ಧಿಯನ್ನು ಎನ್‌ಹೆಚ್‌ಎಐ ವತಿಯಿಂದ “ಭಾರತಮಾಲಾ” ಪರಿಯೋಜನೆಯಡಿ ಕೈಗೊಳ್ಳಲಾಗಿದೆ. ಬಾಕಿ ಉಳಿದಿರುವ 143 ಕಿಮೀ ಉದ್ದದ ಎಸ್‌ಟಿಆರ್‌ಆರ್‌ ರಸ್ತೆಯ ಭಾಗವನ್ನು (green field alignment) ಹೊಸೂರು ಗಡಿ – ಆನೇಕಲ್‌ – ಕನಕಪುರ – ರಾಮನಗರ – ಮಾಗಡಿ – ಡಾಬಸಪೇಟೆ ಎನ್‌ಹೆಚ್‌ಎಐ ಸಹಯೋಗದಲ್ಲಿ ಕೈಗೊಳ್ಳಲು ಭೂಸ್ವಾಧೀನ ಮೊತ್ತದ ರೂ.1560 ಕೋಟಿ ಶೇ.30ರಷ್ಟು ರಾಜ್ಯ ಸರ್ಕಾರದಿಂದ ಭರಿಸಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಡಿಸಿಎಂ ವಿವರಿಸಿದರು.

ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಶ್ರೀ ರಜನೀಶ್ ಗೋಯಲ್, ಕಾರ್ಯದರ್ಶಿ ಡಾ. ಕೃಷ್ಣಾರೆಡ್ಡಿ, ರಾಷ್ಟ್ರೀಯ ಹೆದ್ದಾರಿಯ ಮುಖ್ಯ ಇಂಜಿನಿಯರ್ ಶ್ರೀ ವಿ. ಗೋವಿಂದ ರಾಜು, ಡಿಸಿಎಂ ಅವರ ಆಪ್ತಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next