Advertisement

ರಸ್ತೆ ಬದಿಗೆ ಮಣ್ಣು ಹಾಕಿದ ಇಲಾಖೆ

12:14 AM Jan 21, 2020 | Sriram |

ತಲ್ಲೂರು: ಉಪ್ಪಿನಕುದ್ರುವಿನಿಂದ ತಲ್ಲೂರಿಗೆ ಸಂಪರ್ಕ ಕಲ್ಪಿಸುವ ಸುಮಾರು ಮೂರುವರೆ ಕಿ.ಮೀ. ದೂರದ ಮುಖ್ಯ ರಸ್ತೆ ಕಿರಿದಾಗಿದ್ದು, ಅಗಲೀಕರಣದ ಜತೆಗೆ ಸದ್ಯಕ್ಕೆ ತುರ್ತು ಅಗತ್ಯಕ್ಕಾಗಿ ರಸ್ತೆ ಬದಿಗೆ ಮಣ್ಣು ಹಾಕಬೇಕು ಎಂದು ಅಲ್ಲಿನ ಗ್ರಾಮಸ್ಥರು, ವಾಹನ ಚಾಲಕರು ಹಲವು ದಿನಗಳಿಂದ ಬೇಡಿಕೆ ಇಡುತ್ತಿದ್ದರು. ಈಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಪಂದಿಸಿದ್ದು, ರಸ್ತೆಯ ಎರಡೂ ಬದಿಗೂ ಸೋಮವಾರದಿಂದ ಮಣ್ಣು ಹಾಕುವ ಕಾರ್ಯ ನಡೆಯುತ್ತಿದೆ.

Advertisement

ಸ್ಥಳೀಯ ಜಿ.ಪಂ. ಸದಸ್ಯೆ ಜ್ಯೋತಿ ಎಂ. ಕಾವ್ರಾಡಿ, ತಲ್ಲೂರು ಗ್ರಾ.ಪಂ. ಅಧ್ಯಕ್ಷ ಆನಂದ ಬಿಲ್ಲವ ಮತ್ತಿತರ ಜನಪ್ರತಿನಿಧಿಗಳು ಈ ಕುರಿತಂತೆ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದಿದ್ದು, ಇದರಂತೆ ತಲ್ಲೂರಿನಿಂದ ಉಪ್ಪಿನಕುದ್ರುವರೆಗಿನ ರಸ್ತೆಯ ಎರಡೂ ಬದಿಗೆ ಮಣ್ಣು ಹಾಕಲಾಗುತ್ತಿದೆ.

ಈ ಮಾರ್ಗ ತುಂಬಾ ಕಿರಿದಾಗಿದ್ದು, ಏಕಕಾಲದಲ್ಲಿ ಎರಡು ವಾಹನಗಳು ಸಂಚರಿ ಸುವುದು ಕಷ್ಟ. ಎದುರಿನಿಂದ ಒಂದು ವಾಹನ ಬಂದರೆ, ಒಂದೋ ಇವರು ಕೆಳಗಿಯಬೇಕು, ಇಲ್ಲದಿದ್ದರೆ ಎದುರಿನವರು ರಸ್ತೆಯಿಂದ ಕೆಳಗಿಳಿಯಬೇಕು. ಅಲ್ಲಲ್ಲಿ ರಸ್ತೆ ಬದಿಗೆ ಹಾಕಿದ ಮಣ್ಣು ಕೊಚ್ಚಿಕೊಂಡು ಹೋಗಿ ಡಾಮರು ರಸ್ತೆ ಎತ್ತರದಲ್ಲಿದ್ದು, ವಾಹನ ಇಳಿಸುವುದು ಕೂಡ ಅಪಾಯಕಾರಿ ಯಗಿದೆ. ಇದಕ್ಕಾಗಿ ರಸ್ತೆಯ ಇಕ್ಕೆಲಗಳಿಗೂ ಮಣ್ಣು ಹಾಕಿ ಎನ್ನುವುದಾಗಿ ಊರವರು ಆಗ್ರಹಿಸಿದ್ದರು.

ಉದಯವಾಣಿ ವರದಿ
ಈ ಕುರಿತಂತೆ “ಉದಯವಾಣಿ’ಯು ಜ. 13 ರಂದು ಇಲ್ಲಿನ ರಸ್ತೆ ಅಗಲೀಕರಣ ಹಾಗೂ ತುರ್ತಾಗಿ ರಸ್ತೆಯ ಎರಡೂ ಬದಿಗೆ ಮಣ್ಣು ಹಾಕಬೇಕು ಎನ್ನುವ ಕುರಿತಂತೆ ವಿಶೇಷ ವರದಿಯನ್ನು ಪ್ರಕಟಿಸಿತ್ತು.

ಈ ರಸ್ತೆಯ ಎರಡೂ ಬದಿಗೆ ಮಣ್ಣು ಹಾಕಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಪಂಚಾಯತ್‌ ವತಿಯಿಂದ ಮನವಿ ಮಾಡಲಾಗಿತ್ತು. ಈ ಬಗ್ಗೆ “ಉದಯವಾಣಿ’ ಪತ್ರಿಕೆಯಲ್ಲೂ ವರದಿ ಪ್ರಕಟಗೊಂಡಿದ್ದು, ಇದನ್ನು ಜಿ.ಪಂ. ಸದಸ್ಯರು ಕೂಡ ಇಲಾಖೆಯ ಗಮನಕ್ಕೆ ತಂದಿದ್ದರು. ಈಗ ಮಣ್ಣು ಹಾಕುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಆದರೆ ಇದು ಕಳೆದ ವರ್ಷಗಳಂತೆ ಕಾಟಾಚಾರಕ್ಕೆ ಹಾಕದೇ, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಕಲಿ ಎಂದು ತಲ್ಲೂರು ಗ್ರಾ.ಪಂ ಅಧ್ಯಕ್ಷ ಆನಂದ ಬಿಲ್ಲವ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next