ಉಡುಪಿ: ಕೊರೊನಾ ಲಾಕ್‌ಡೌನ್‌ನಿಂದಾಗಿ ಒಂದೂವರೆ ವರ್ಷದಿಂದ ಕೃಷಿ, ತೋಟ ಗಾರಿಕೆ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಪರದಾಡುತ್ತಿದ್ದರೂ ತೋಟಗಾರಿಕೆ ಇಲಾಖೆ ಮಾವು, ತೆಂಗು ಸೇರಿದಂತೆ ಇತರ ಬೆಳೆಗಳ ಮೂಲಕ 2021ನೇ ಸಾಲಿನಲ್ಲಿ 12.89 ಲ.ರೂ. ಆದಾಯ ಗಳಿಸಿದೆ.
6 ತೋಟಗಾರಿಕಾ ಕ್ಷೇತ್ರ, 2 ಸಸ್ಯಾಗಾರ:
ಲಾಕ್‌ಡೌನ್ ಪರಿಣಾಮ ಹಲವು ವಲಯಗಳು ಆದಾಯವಿಲ್ಲದೆ ನಷ್ಟ ಅನುಭವಿಸಿವೆ. ಸರಕಾರಿ ಇಲಾಖೆಗಳೂ ಇದಕ್ಕೆ ಹೊರತಾಗಿಲ್ಲ. ಕರಾವಳಿ ಕೃಷಿಕರಿಗೆ ಅನಾನಸು, ತೆಂಗು, ಗೋಡಂಬಿ, ಸಪೋಟ, ಮಾವು ಪ್ರಮುಖ ಆದಾಯದ ಬೆಳೆಯಲ್ಲದಿದ್ದರೂ, ಹಲವು ವರ್ಷಗಳಿಂದ ದೊಡ್ಡ ಮತ್ತು ಸಣ್ಣ ರೈತರು ಇಷ್ಟ ಪಟ್ಟು ಇದನ್ನು ಬೆಳೆಯುತ್ತಿದ್ದು ಸಮಗ್ರ ಕೃಷಿ ಪದ್ಧªತಿಯಲ್ಲಿ ಕಿರು ಆದಾಯದ ಮೂಲವಾಗಿದೆ. ವಿಶೇಷವಾಗಿ ತೋಟಗಾರಿಕೆ ಇಲಾಖೆ ಆರೈಕೆ ಮಾಡಿ, ಬೆಳೆಸಿದ ಮರಗಳು ಈಗ ಉತ್ತಮ ಆದಾಯ ತಂದುಕೊಡುತ್ತಿವೆ. ಜಿಲ್ಲೆಯಲ್ಲಿ 6 ತೋಟಗಾರಿಕೆ ಕ್ಷೇತ್ರ, 2 ಕಚೇರಿ ಸಸ್ಯಾಗಾರಗಳಿದ್ದು ಸಮೃದ್ಧ ತೋಟಗಾರಿಕೆ ವಲಯವಾಗಿ ರೂಪುಗೊಂಡಿದೆ. ಮಾವು, ತೆಂಗು, ಚಿಕ್ಕು, ಗೇರು, ತರಕಾರಿ ಸಸಿ, ವಾಣಿಜ್ಯ ಸಸಿಗಳ ಉತ್ಪಾದನೆ, ಫಾರ್ಮ್, ರೈತ ಸೇವಾ ಕೇಂದ್ರವನ್ನು ಹೊಂದಿದೆ.
12.89 ಲ.ರೂ. ಫಸಲು ಮಾರಾಟ :
2021ರಲ್ಲಿ ಇ- ಹರಾಜು ಪ್ರಕ್ರಿಯೆಯಲ್ಲಿ ಉಡುಪಿ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ 3.8 ಲ.ರೂ., ಬ್ರಹ್ಮಾವರ ವಾರಂಬಳ್ಳಿ ತೋಟಗಾರಿಕೆ ಕ್ಷೇತ್ರ 5,100 ರೂ., ಕುಂದಾಪುರ ಕೆದೂರು ತೋಟಗಾರಿಕೆ ಕ್ಷೇತ್ರ 23,000 ರೂ., ಕುಂಭಾಶಿ ತೋಟಗಾರಿಕೆ ಕ್ಷೇತ್ರ 1.16 ಲ.ರೂ., ಕಚೇರಿ ಸಸ್ಯಾಗಾರ 8,500 ರೂ., ಕಾರ್ಕಳ ರಾಮಸಮುದ್ರ ತೋಟಗಾರಿಕೆ ಕ್ಷೇತ್ರ 7.5 ಲ.ರೂ., ಕುಕ್ಕುRಂದೂರು ತೋಟಗಾರಿಕೆ ಕ್ಷೇತ್ರ 12.6 ಲ.ರೂ., ಕಚೇರಿ ಸಸ್ಯಾಗಾರ 3,500 ರೂ. ಸೇರಿದಂತೆ ಒಟ್ಟು 12.89 ಲ.ರೂ. ಫಸಲು ಮಾರಾಟ ಮಾಡಲಾಗಿದೆ.
ಕೊಯ್ಲು ಪ್ರಕ್ರಿಯೆ ಪೂರ್ಣ :
ಇಲಾಖೆ ನೇರವಾಗಿ ಮಾರುಕಟ್ಟೆಗೆ, ಗ್ರಾಹಕರಿಗೆ ಮಾರಾಟ ಮಾಡುವುದಿಲ್ಲ. ಹರಾಜು ಪ್ರಕ್ರಿಯೆ ನಡೆಸಿ ಮಾವು, ಅನಾನಸು, ತೆಂಗು, ಸಪೋಟಾ ಸೇರಿದಂತೆ ಇತರ ಬೆಳೆಯನ್ನು ಮಾರಾಟ ಮಾಡಲಾಗುತ್ತದೆ. ವ್ಯಾಪಾರಿ ಗಳು ಹರಾಜಿನಲ್ಲಿ ಬೆಳೆಯನ್ನು ಕೊಂಡುಕೊಳ್ಳುತ್ತಾರೆ. ಇದರಿಂದ ಇಲಾಖೆಗೆ ಕಾರ್ಮಿಕರ ಸಮಸ್ಯೆ, ಕೊಯ್ಲು ಪರಿಕರಗಳ ಬಳಕೆ, ಸಾಗಾಟ ವೆಚ್ಚ ಮೊದಲಾದ ಯಾವುದೇ ಹೊರೆ ಇರುವುದಿಲ್ಲ. ಎಲ್ಲವನ್ನೂ ಗುತ್ತಿಗೆ ಪಡೆದುಕೊಂಡವರೇ ನೋಡಿಕೊಳ್ಳುತ್ತಾರೆ. ಸದ್ಯ ಜಿಲ್ಲೆಯ ಎಲ್ಲ ತೋಟಗಾರಿಕೆ ಕ್ಷೇತ್ರಗಳಲ್ಲಿ ಕೊಯ್ಲು ಪ್ರಕ್ರಿಯೆ ಪೂರ್ಣಗೊಂಡಿದೆ.
ಮಾವು ಫಸಲು ಅಧಿಕ! : ಉಡುಪಿ, ಬ್ರಹ್ಮಾವರ, ಕುಂದಾಪುರ, ಕಾರ್ಕಳದ ತೊಟಗಾರಿಕೆ ಕ್ಷೇತ್ರದಲ್ಲಿ ಅಪೂಸ್, ಕಾಲಪಾಡಿ, ಬಾದಾಮಿ ತಳಿಗಳ ಮಾವು ಬೆಳೆಯಲಾಗುತ್ತಿದೆ. 2021ನೇ ಸಾಲಿನಲ್ಲಿ 4.37 ಲ.ರೂ. ಮೊತ್ತದ ಮಾವು ಫಸಲು ಮಾರಾಟವಾಗಿದೆ. ತೆಂಗು 3.81 ಲ.ರೂ., ಗೋಡಂಬಿ 36,000 ರೂ., ಸಪೋಟ 27,600 ರೂ., ಅನಾನಸು 4.7 ಲ.ರೂ.ಗೆ ಫಸಲು ಮಾರಾಟ ಮಾಡಲಾಗಿದೆ.
ಇಲಾಖೆಯ ಫಾರ್ಮ್ಗಳಲ್ಲಿ ಪ್ರಸ್ತಕ ಸಾಲಿನಲ್ಲಿ 12.89 ಲ.ರೂ. ಆದಾಯ ಗಳಿಸಿದೆ. ಕಳೆದ ಬಾರಿ ಇಲಾಖೆಯು 9.81 ಲ.ರೂ. ಆದಾಯವನ್ನು ಗಳಿಸಿದೆ. ಸಾರ್ವಜನಿಕರು ತೋಟಗಾರಿಕೆ ಬೆಳೆಯ ಮೂಲಕ ಉತ್ತಮವಾದ ಲಾಭ ಪಡೆಯಲು ಸಾಧ್ಯ
.- ನಿದೀಶ್ ಕೆ.ಜೆ., ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ಉಡುಪಿ