Advertisement

ಗೆದ್ದು ಫೈನಲ್‌ಗೇರಿದ ರಾಜ್ಯ

07:30 AM Mar 07, 2018 | |

ಧರ್ಮಶಾಲಾ: ಸಂಘಟನಾತ್ಮಕ ಹೋರಾಟ ಪ್ರದರ್ಶಿಸಿದ ಕರ್ನಾಟಕ ತಂಡ ದೇವಧರ್‌ ಟ್ರೋಫಿಯಲ್ಲಿ ಭಾರತ “ಎ’ ವಿರುದ್ಧ 65 ರನ್‌ಗಳಿಂದ ಜಯ ಸಾಧಿಸಿ ಫೈನಲ್‌ಗೇರಿದೆ. ಮಾ.8 ರಂದು ನಡೆಯಲಿರುವ ಫೈನಲ್‌ನಲ್ಲಿ ಕರ್ನಾಟಕ ಮತ್ತು ಭಾರತ “ಬಿ’
ತಂಡಗಳು ಮುಖಾಮುಖಿ ಯಾಗಲಿವೆ. ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ 50 ಓವರ್‌ಗೆ 4 ವಿಕೆಟ್‌ ಕಳೆದು  ಕೊಂಡು 339 ರನ್‌ ಬಾರಿಸಿತ್ತು. ಭಾರತ “ಎ’ ತಂಡ 39.5 ಓವರ್‌ಗೆ 274 ರನ್‌ ಬಾರಿಸಿ ಎಲ್ಲಾ ವಿಕೆಟ್‌ ಕಳೆದುಕೊಂಡು ಸೋಲುಂಡಿದೆ.

Advertisement

ಗುರಿ ಬೆನ್ನುಹತ್ತಿದ ಭಾರತ “ಎ’ ತಂಡಕ್ಕೆ ಕರ್ನಾಟಕದ ಕೆ.ಗೌತಮ್‌ ಮತ್ತು ರೋನಿತ್‌ ಮೋರೆ ಆಘಾತ ನೀಡಿದರು. ಭಾರತ “ಎ’ ಆರಂಭದಲ್ಲಿ ಉತ್ತಮ ಸ್ಥಿತಿಯಲ್ಲಿಯೇ ಇತ್ತು. ಆದರೆ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌
ಸೇರಿದರು. ಉನು ಮುಕ್‌¤ ಚಾಂದ್‌ (81 ರನ್‌), ಇಶಾನ್‌ ಕಿಶಾನ್‌ (73 ರನ್‌) ಗರಿಷ್ಠ ರನ್‌ ದಾಖಲಿಸಿದರು. ಕರ್ನಾಟಕ ಪರ ಕೆ.ಗೌತಮ್‌ 4 ವಿಕೆಟ್‌ ಪಡೆದರೆ, ರೋನಿತ್‌ ಮೋರೆ 3 ವಿಕೆಟ್‌ ಪಡೆದರು. ರಾಜ್ಯಕ್ಕೆ ನೆರವಾದ ಪವನ್‌, ಸಮರ್ಥ್ ಬ್ಯಾಟಿಂಗ್‌:ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ದೊಡ್ಡ ಮೊತ್ತ ಕಲೆಹಾಕುವಲ್ಲಿ ಪವನ್‌ ದೇಶಪಾಂಡೆ, ಆರ್‌.ಸಮರ್ಥ್ ನೆರವಾದರು. ಭಾರತದ “ಎ’ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಕರ್ನಾಟಕ
300 ರನ್‌ ಗಡಿ ದಾಟುವಂತೆ ಮಾಡಿದರು. ಆರಂಭಿಕರಾಗಿ ಬಂದ ಮಾಯಾಂಕ್‌ ಅಗರ್ವಾಲ್‌ (22 ರನ್‌), ಕರುಣ್‌ ನಾಯರ್‌ (35 ರನ್‌) ಹೆಚ್ಚು ಹೊತ್ತು ನಿಲ್ಲಲಿಲ್ಲ. ತಂಡದ ಮೊತ್ತ 107 ರನ್‌ ಆಗುವಷ್ಟರಲ್ಲಿ ಇಬ್ಬರೂ ಪೆವಿಲಿಯನ್‌ ಸೇರಿದ್ದರು. ಆದರೆ, 3ನೇ ವಿಕೆಟ್‌
ಜತೆಯಾದ ಸಮರ್ಥ್ ಮತ್ತು ಪವನ್‌ ದೇಶಪಾಂಡೆ ಭರ್ಜರಿ ಹೋರಾಟ ಪ್ರದರ್ಶಿಸಿದರು. ಸಮರ್ಥ 87 ಎಸೆತದಲ್ಲಿ 85 ರನ್‌ ಬಾರಿಸಿ ಔಟ್‌ ಆದರೆ, ಪವನ್‌ 87 ಎಸೆತದಲ್ಲಿ 95 ರನ್‌ ಬಾರಿಸಿ ವಿಕೆಟ್‌ ಕಳೆದುಕೊಂಡರು. ಉಳಿದಂತೆ ಸಿ.ಎಮ್‌.ಗೌತಮ್‌ (49 ರನ್‌), ಸ್ಟುವರ್ಟ್‌ ಬಿನ್ನಿ (37 ರನ್‌) ಉಪಯೂಕ್ತ ಕೊಡುಗೆ ನೀಡಿದರು. 

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 50 ಓವರ್‌ಗೆ 339/4 (ಪವನ್‌ ದೇಶಪಾಂಡೆ 95, ಆರ್‌.ಸಮರ್ಥ್ 85, ಸಿ.ಎಂ.ಗೌತಮ್‌ 49,
ಮೊಹಮ್ಮದ್‌ ಶಮಿ 96ಕ್ಕೆ 2), ಭಾರತ “ಎ’ 39.5 ಓವರ್‌ಗೆ 274/10 (ಉನ್‌ ಮುಕ್‌¤ ಚಾಂದ್‌ 81, ಇಶಾನ್‌ ಕಿಶಾನ್‌ 73, ಕೆ.ಗೌತಮ್‌ 52ಕ್ಕೆ 4, ರೋನಿತ್‌ ಮೋರೆ 64ಕ್ಕೆ 3). 

Advertisement

Udayavani is now on Telegram. Click here to join our channel and stay updated with the latest news.

Next