Advertisement

ಚಾಕು ಇರಿತ: ಒಲಿಂಪಿಕ್ಸ್‌  ಕಂಚು ವಿಜೇತ ಡೆನ್ನಿಸ್‌ ಟೆನ್‌ ಸಾವು

06:00 AM Jul 21, 2018 | Team Udayavani |

ಕಜಾಕ್‌ಸ್ಥಾನ: 2014ರ ಸೋಚಿ ಚಳಿಗಾಲದ ಒಲಿಂಪಿಕ್ಸ್‌ನ ಸ್ಕೇಟಿಂಗ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಕಜಾಕ್‌ಸ್ಥಾನದ ಡೆನ್ನಿಸ್‌ ಟೆನ್‌ ದುರ್ಮರಣಕ್ಕೊಳಗಾಗಿದ್ದಾರೆ. ಚಾಕು ಇರಿತದ ಪರಿಣಾಮ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

Advertisement

ಟೆನ್‌ ಅವರ ಕಾರಿನ ಕನ್ನಡಿಗಳನ್ನು ಕದಿಯಲು ಇಬ್ಬರು ದುಷ್ಕರ್ಮಿಗಳು ಯತ್ನಿಸುತ್ತಿದ್ದರು. ಆ ವೇಳೆ ಡೆನಿಸ್‌  ತೊಡೆಗೆ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ತಸ್ರಾವವಾದ ಪರಿಣಾಮ ಡೆನಿಸ್‌ ಸಾವನ್ನಪ್ಪಿದ್ದರು. ಒಲಿಂಪಿಕ್ಸ್‌ ಸ್ಕೇಟಿಂಗ್‌ನಲ್ಲಿ ಕಜಾಕ್‌ಸ್ಥಾನಕ್ಕೆ ಮೊದಲ ಪದಕವನ್ನು ತಂದಿತ್ತ ಹೆಗ್ಗಳಿಕೆ ಟೆನ್‌ ಅವರದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next