Advertisement

ಡೆಂಗ್ಯೂ: ಕಟ್ಟುನಿಟ್ಟಿನ ಕ್ರಮವಹಿಸಿ

11:46 PM Aug 02, 2019 | mahesh |

ಬೆಳ್ತಂಗಡಿ: ತಾಲೂಕಿನಲ್ಲಿ ಡೆಂಗ್ಯೂ ಹರಡದಂತೆ ಅಧಿಕಾರಿಗಳು ಸಾರ್ವಜನಿಕ ರಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಇತರ ಇಲಾಖೆಗಳೂ ಕೈಜೋಡಿಸಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಹರಿಶ್‌ ಪೂಂಜ ಅಧಿಕಾರಿ ಗಳಿಗೆ ಸೂಚನೆ ನೀಡಿದರು.

Advertisement

ಬೆಳ್ತಂಗಡಿ ತಾ| ಆಸ್ಪತ್ರೆ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಅಧಿಕಾರಿ ಗಳೊಂದಿಗೆ ಅವರು ಸಭೆ ನಡೆಸಿ ತಾ| ನಲ್ಲಿರುವ ರೋಗಪೀಡಿತರ ಬಗ್ಗೆ, ರೋಗ ನಿವಾರಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು.

ತಾ|ನಲ್ಲಿ 24 ಡೆಂಗ್ಯೂ ಖಚಿತ ಪ್ರಕರಣ ಗಳು ದಾಖಲಾಗಿದ್ದು, ಎಲ್ಲರೂ ಆರೋಗ್ಯವಂತರಾಗಿದ್ದಾರೆ. ಯಾವುದೇ ರೋಗಿ ಐಸಿಯುನಲ್ಲಿ ಇಲ್ಲದಿರುವುದು ಡೆಂಗ್ಯೂ ಬಗ್ಗೆ ಅಧಿಕಾರಿಗಳು ವಹಿಸಿರುವ ಮುಂಜಾಗ್ರತೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಒಟ್ಟಾರೆಯಾಗಿ ರೋಗ ನಿಯಂತ್ರಣದಲ್ಲಿದೆ. ಈಗಾಗಲೇ 874 ಕಡೆ ಆರೋಗ್ಯ ಇಲಾಖೆ ಮತ್ತು ಗ್ರಾ.ಪಂ. ಸಹಯೋಗದಲ್ಲಿ ಫಾಗಿಂಗ್‌ ನಡೆಸಲಾಗಿದೆ. ಆಶಾ ಕಾರ್ಯ ಕರ್ತೆಯರು 50,223 ಮನೆ ಗಳನ್ನು ಸಂಪರ್ಕಿಸಿ ಮಾಹಿತಿ ನೀಡಿ ಜನಜಾಗೃತಿ ಮೂಡಿ ಸಲಾಗಿದೆ. 27,539 ಕರ ಪತ್ರ ಹಂಚಲಾಗಿದೆ. 220 ಶಾಲೆಗಳಲ್ಲಿ ಮಾಹಿತಿ ಶಿಬಿರ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಜ್ವರ ದೊಂದಿಗೆ ಆಸ್ಪತ್ರೆಗೆ ಬರುವ ರೋಗಿ ಗಳನ್ನು ಪ್ರೀತಿಯಿಂದ ನೋಡಿಕೊಂಡು ಉಪಚರಿಸಿ ಎಂದರು.

ಔಷಧ ಕೊರತೆಯಿಂದ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಔಷಧಕ್ಕೆ ಮೆಡಿಕಲ್ಗಳಿಗೆ ಬರೆದು ಕೊಡುವ ವಿಚಾರವಾಗಿ ಶಾಸಕ ಪೂಂಜ ಕಟ್ಟುನಿಟ್ಟಿನ ಸೂಚನೆ ನೀಡಿ, ಔಷಧ ಸಂಗ್ರಹಿಸಿಟ್ಟು, ಕೊರತೆ ಬಂದರೆ ಕೂಡಲೇ ಮಾಹಿತಿ ನೀಡಬೇಕು. ಆರೋಗ್ಯ ರಕ್ಷಾ ಸಮಿತಿ ಅನುದಾನದಿಂದ ಔಷಧ ತರಿಸಿಕೊಳ್ಳಿ ಎಂದು ತಿಳಿಸಿದರು.

ತಾ|ನಲ್ಲಿ ಲ್ಯಾಬ್‌ ಟೆಕ್ನೀಶಿಯನ್‌ಗಳ ಕೊರತೆಯಿರುವ ವಿಚಾರ ಶಾಸಕರ ಗಮನಕ್ಕೆ ತಂದಾಗ, ಪ್ರಸಕ್ತ ಇರುವವರ ಕಾರ್ಯನಿರ್ವಹಣೆ ಸಹಿತ ಅವಶ್ಯ ಇರುವ ಸ್ಥಳಗಳ ಕುರಿತು ಮಾಹಿತಿ ಪಡೆದರು. 13 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎರಡು ದಿನಗಳಿಗೊಮ್ಮೆ ತೆರಳುವುದರಿಂದ ಕೆಲವು ಕೇಂದ್ರಗಳಿಗೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಒಬ್ಬರನ್ನು ನೇಮಿಸುವಂತೆ ಸೂಚಿಸಿದರು. ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆಯಿರುವ ಬಗ್ಗೆ ಗಮನ ಸೆಳೆದಾಗ, ಕೊರತೆ ಪಟ್ಟಿ ತಯಾರಿಸಿ ಸರಕಾರದ ಗಮನಸೆಳೆದು ಅಗತ್ಯ ನೇಮಕಾತಿಗಳಿಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.

Advertisement

ತಾ|ನ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧಿಕಾರಿಗಳು ತಮ್ಮ ವ್ಯಾಪ್ತಿ ಯಲ್ಲಿ ಇರುವ ಡೆಂಗ್ಯೂ ರೋಗಿಗಳ ಬಗ್ಗೆ ಹಾಗೂ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡಿದರು. ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ವಿಚಾರಗಳು, ಅದರ ನಿರ್ಮೂಲನೆಗೆ ತೆಗೆದುಕೊಳ್ಳ ಬೇಕಾದ ಕ್ರಮಗಳ ಕುರಿತು ಅಳದಂಗಡಿ ವೈದ್ಯಾಧಿ ಕಾರಿ ಡಾ| ಚೈತ್ರಾ ಮಾಹಿತಿ ನೀಡಿದರು. ತಾ| ವೈದ್ಯಾಧಿಕಾರಿ ಡಾ| ಕಲಾಮಧು ಹಾಗೂ ಬೆಳ್ತಂಗಡಿ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ವಿದ್ಯಾವತಿ ಪೂರಕ ಮಾಹಿತಿ ನೀಡಿದರು.

ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಾಜೇಶ್‌ ಶೆಟ್ಟಿ, ಸಿಡಿಪಿಒ ಪ್ರಿಯಾ ಆಗ್ನೆಸ್‌, ಉಪತಹಶೀಲ್ದಾರ್‌ ಶಂಕರ್‌, ತಾ.ಪಂ. ಮ್ಯಾನೇಜರ್‌ ಸುವರ್ಣ ಹೆಗ್ಡೆ ಉಪಸ್ಥಿತರಿದ್ದರು.

ಔಷಧ ಕೊರತೆ ನೀಗಿಸಲು ಸೂಚನೆ

ಔಷಧ ಕೊರತೆಯಿಂದ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಔಷಧಕ್ಕೆ ಮೆಡಿಕಲ್ಗಳಿಗೆ ಬರೆದು ಕೊಡುವ ವಿಚಾರವಾಗಿ ಶಾಸಕ ಪೂಂಜ ಕಟ್ಟುನಿಟ್ಟಿನ ಸೂಚನೆ ನೀಡಿ, ಔಷಧ ಸಂಗ್ರಹಿಸಿಟ್ಟು, ಕೊರತೆ ಬಂದರೆ ಕೂಡಲೇ ಮಾಹಿತಿ ನೀಡಬೇಕು. ಆರೋಗ್ಯ ರಕ್ಷಾ ಸಮಿತಿ ಅನುದಾನದಿಂದ ಔಷಧ ತರಿಸಿಕೊಳ್ಳಿ ಎಂದು ತಿಳಿಸಿದರು.

ಲ್ಯಾಬ್‌ ಟೆಕ್ನೀಶಿಯನ್‌ ನೇಮಕ

ತಾ|ನಲ್ಲಿ ಲ್ಯಾಬ್‌ ಟೆಕ್ನೀಶಿಯನ್‌ಗಳ ಕೊರತೆಯಿರುವ ವಿಚಾರ ಶಾಸಕರ ಗಮನಕ್ಕೆ ತಂದಾಗ, ಪ್ರಸಕ್ತ ಇರುವವರ ಕಾರ್ಯನಿರ್ವಹಣೆ ಸಹಿತ ಅವಶ್ಯ ಇರುವ ಸ್ಥಳಗಳ ಕುರಿತು ಮಾಹಿತಿ ಪಡೆದರು. 13 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎರಡು ದಿನಗಳಿಗೊಮ್ಮೆ ತೆರಳುವುದರಿಂದ ಕೆಲವು ಕೇಂದ್ರಗಳಿಗೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಒಬ್ಬರನ್ನು ನೇಮಿಸುವಂತೆ ಸೂಚಿಸಿದರು. ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆಯಿರುವ ಬಗ್ಗೆ ಗಮನ ಸೆಳೆದಾಗ, ಕೊರತೆ ಪಟ್ಟಿ ತಯಾರಿಸಿ ಸರಕಾರದ ಗಮನಸೆಳೆದು ಅಗತ್ಯ ನೇಮಕಾತಿಗಳಿಗೆ ಕ್ರಮ ಕೈಗೊಳ್ಳುತ್ತೇನೆ
Advertisement

Udayavani is now on Telegram. Click here to join our channel and stay updated with the latest news.

Next